ರಾಷ್ಟ್ರೀಯ

ಆನೆ ಮೇಲೆ ಕುಳಿತು ಯೋಗ ಮಾಡಲು ಹೋಗಿ ನೆಲಕ್ಕೆ ಬಿದ್ದ ಬಾಬಾ ರಾಮದೇವ್​: ವಿಡಿಯೋ ವೈರಲ್

Pinterest LinkedIn Tumblr

ನವದೆಹಲಿ: ಪತಂಜಲಿ ಸಂಸ್ಥೆ ಸಂಸ್ಥಾಪಕ ಯೋಗಗುರು ಬಾಬಾ ರಾಮ್‌ದೇವ್‌ ಅವರು ಆನೆಯ ಮೇಲೆ ಕುಳಿತು ಯೋಗ ಮಾಡಲು ಹೋಗಿ ಕೆಳಗೆ ಬಿದ್ದ ಘಟನೆ ನಡೆದಿದೆ.

ಮಥುರಾದಲ್ಲಿ ಆನೆಯ ಮೇಲೆ ಏರಿ ಕುಳಿತುಕೊಂಡಿದ್ದ ಬಾಬಾ ರಾಮ್‌ದೇವ್‌ ಅವರು ಯೋಗಾಸನ ಮಾಡುತ್ತಿದ್ದರು. ಈ ವೇಳೆ ಆನೆ ಕೊಂಚ ಮಿಸುಕಾಡಿದ್ದು ಆಯ ತಪ್ಪಿದ ರಾಮ್‌ದೇವ್‌ ಅವರು ಆನೆಯ ಮೇಲಿನಿಂದ ಕೆಳಕ್ಕೆ ಉರುಳಿ ಬಿದ್ದಿದ್ದಾರೆ. ತಕ್ಷಣ ಎದ್ದು ನಗುಬೀರಿ ಏನು ಆಗಿಲ್ಲ‌ ಎನ್ನುವಂತೆ ರಾಮ್ ದೇವ್ ಮುಂದಕ್ಕೆ ಸಾಗಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದೆ‌.

Comments are closed.