ಕರಾವಳಿ

ಉಡುಪಿ ಚಿತ್ತರಂಜನ್ ಸರ್ಕಲ್ ಬಳಿಯಲ್ಲಿ ನೋಡನೋಡುತ್ತಿದ್ದಂತೆಯೇ ಕುಸಿದ ಕಟ್ಟಡ (Video)

Pinterest LinkedIn Tumblr

ಉಡುಪಿ: ಉಡುಪಿಯ ಹೃದಯಭಾಗದಲ್ಲಿದ್ದ ಕಟ್ಟಡ ನೋಡನೋಡುತ್ತಿದ್ದಂತೆಯೇ ನೆಲಕ್ಕುರುಳಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಇಲ್ಲಿನ ಚಿತ್ತರಂಜನ್ ಸರ್ಕಲ್ ಬಳಿಯಲ್ಲಿದ್ದ ರಾಯಲ್ ಮಹಲ್ ಎಂಬ ಕಟ್ಟಡದ್ಲಿ ಕೆಂದ್ರ ಸರಕಾರದ ಜನೌಷಧಿ ಕೇಂದ್ರವು ಕೂಡ ಇದೇ ಕಟ್ಟಡದಲ್ಲಿತ್ತು. ಈ ಹಿಂದಿಯೇ ಕಟ್ಟಡ ದುಃಸ್ತಿಗೆ ತಲುಪಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಶುಕ್ರವಾರ ಮಧ್ಯಾಹ್ನ 1:45ರ ಹೊತ್ತಿಗೆ ಕಟ್ಟಡದ ಅರ್ಧ ಬಾಗ ನೆಲಕ್ಕುರುಳಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಣಾಪಯ ಸಂಭವಿಸಿಲ್ಲ.

ಜನೌಷಧಿ ಕೆಂದ್ರ, ಎರಡು ಬೇಕರಿ ಮತ್ತು ಒಂದು ಹೋಟೆಲ್ ಇದೇ ಕಟ್ಟಡದಲ್ಲಿದ್ದು, ಮೇಲಿನ ಎರಡು ಅಂತಸ್ತಿನಲ್ಲಿ ಲಾಡ್ಜಿಂಗ್ ಇತ್ತು.

ಅಗ್ನಿ ಶಾಮಕ ಸಿಬ್ಬಂದಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Comments are closed.