ಕರಾವಳಿ

ಕೋವಿಡ್ ಆಸ್ಪತ್ರೆಯಲ್ಲಿದ್ದುಕೊಂಡೇ ಸೋಂಕಿತನ ‘ಪಾಸಿಟಿವಿಟಿ’-ಡಾ. ರಾಜ್ ಹಾಡಿಗೆ ಸಖತ್ ಸ್ಟೆಪ್ಸ್..!(Video)

Pinterest LinkedIn Tumblr

ಉಡುಪಿ: ಮಹಾಮಾರಿ ಎಂದೇ ಕರೆಸಿಕೊಂಡ ಕರೊನಾ ಮಾರಕ ಸೋಂಕು ಬಂದರೆ ಜೀವ ಹೋಗುತ್ತದೆ ಎಂದು ಭೀತಿ ಹುಟ್ಟಿಸುವವರ ನಡುವೆ ಉಡುಪಿಯ ವ್ಯಕ್ತಿಯೊಬ್ಬ ಪಾಸಿಟಿವ್ ಹೊಂದಿದ್ದು ಕೋವಿಡ್ ಆಸ್ಪತ್ರೆಯಲ್ಲಿದ್ದುಕೊಂಡೇ ತನ್ನ ಸಂಭ್ರಮವನ್ನು ಜನರಿಗೆ ತಿಳಿಸಿದ್ದಲ್ಲದೇ ಕೊರೋನಾ ಬಗ್ಗೆ ಭಯ ಬೇಡ ಧೈರ್ಯ ಮುಖ್ಯ ಎಂಬ ಸಂದೇಶ ರವಾನಿಸಿದ್ದು ಮಾತ್ರವಲ್ಲದೇ ಕರೊನಾಗೆ ಸೆಡ್ಡು ಹೊಡೆದಿದ್ದಾರೆ.

ಕೋಟದ ಹೊಟೇಲ್ ಮಾಲೀಕರೊಬ್ಬರು ತಮ್ಮ ಪತ್ನಿಗೆ ವಿಡಿಯೋ ಕಾಲ್ ಮಾಡಿ ಧೈರ್ಯ ಹೇಳಿದ ವಿಡಿಯೋ ಇದೀಗ ವೈರಲ್​ ಆಗಿದೆ. ಪಾಸಿಟಿವ್ ಇದ್ದರೂ ಸಹ ತಾನು ಋಷಿಯಾಗಿದ್ದು ಮನೆಯವರನ್ನು ಖುಷಿಪಡಿಸಿದ್ದಾರೆ. ಅಲ್ಲದೇ ಸಮಾಜಕ್ಕೊಂದು ಉತ್ತಮ ಸಂದೇಶ ನೀಡಿ ಕೊರೋನಾ ಜಾಗ್ರತಿ ಮೂಡಿಸಿದ್ದಾರೆ.

ಡಾ.ರಾಜಕುಮಾರ್ ಅಭಿಮಾನಿಯಾಗಿರವ ಅವರು ರಾಜ್ ಅವರ ‘ನಾನಿರುವುದೇ ನಿಮಗಾಗಿ’ ಹಾಡಿಗೆ ನರ್ತಿಸಿ ಪತ್ನಿಯನ್ನು ನಗಿಸಿದ್ದಾರೆ. ಇವರು ಕರೊನಾ ಪಾಸಿಟಿವ್ ಬಂದ ಬಳಿಕ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಮನೆಯ ಸದಸ್ಯರು, ಊರಿನವರು ಭಯ ಭೀತರಾಗಬಾರದು ಎನ್ನುವ ಉದ್ದೇಶಕ್ಕೆ ನೃತ್ಯ ಮಾಡಿ ಪಾಸಿಟಿವಿಟಿ ಹಂಚಿದ್ದಾರೆ. ಅಲ್ಲದೇ ಮತ್ತೊಂದು ವಿಡಿಯೋದಲ್ಲಿ ತಾನು ಕೋವಿಡ್ ಆಸ್ಪತ್ರೆಯಲ್ಲಿ ಹೇಗಿದ್ದೇನೆ, ಊಟೋಪಚಾರ ಹೇಗಿದೆ?, ಮತ್ತಿದ್ತಾದಿ ವಿಚಾರದ ಬಗ್ಗೆ ವಿವರವಾಗಿ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.