ರಾಷ್ಟ್ರೀಯ

ಸೇನೆಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ಝಕೀರ್ ಹುಸೇನ್; ಆಡಿಯೋ ಕ್ಲಿಪ್ ವೈರಲ್

Pinterest LinkedIn Tumblr

ನವದೆಹಲಿ: ಭಾರತ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ಘರ್ಷಣೆ ಮಧ್ಯೆ ಲಡಾಖ್‌ನಲ್ಲಿ ಸೈನ್ಯದ ಗೌರವ ಮತ್ತು ಪ್ರತಿಷ್ಠೆಯನ್ನು ಹಾಳುಮಾಡುವ ಮತ್ತು ಚೀನಾದ ಸೈನ್ಯವನ್ನು ವೈಭವೀಕರಿಸುವ ರೀತಿಯಲ್ಲಿ ಕಾಂಗ್ರೆಸ್ ನಾಯಕ ಝಕೀರ್ ಹುಸೇನ್ ತನ್ನ ಸ್ನೇಹಿತನೊಂದಿಗೆ ಮಾತನಾಡಿದ್ದು, ಅವರ ಆಡಿಯೊ ಕ್ಲಿಪ್ ಈಗ ವೈರಲ್ ಆಗಿದೆ.

ಈ ಕ್ಲಿಪ್ ಬೆಳಕಿಗೆ ಬಂದ ನಂತರ, ಝಕೀರ್ ಹುಸೇನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಝಕೀರ್ ಹುಸೇನ್ ಅವರ ಈ ಆಕ್ಷೇಪಾರ್ಹ ಹೇಳಿಕೆಯಿಂದ, ಲಡಾಕ್‌ನ ಕಾಂಗ್ರೆಸ್ ಘಟಕವು ಮುಜುಗರಕ್ಕೀಡಾಗಿದೆ. ಝಕೀರ್ ಹುಸೇನ್ ಅವರನ್ನು ಕಾಂಗ್ರೆಸ್ಸಿನಿಂದ ಉಚ್ಛಾಟಿಸುವಂತೆ ಬಿಜೆಪಿ ಸಂಸದ ಜಮಿಯಾಂಗ್ ಸೆರಿಂಗ್ ನಮ್‌ಗ್ಯಾಲ್ ಒತ್ತಾಯಿಸಿದ್ದಾರೆ.

‘ಚೀನಾ ಲಡಾಖ್ ತುಂಡುಗಳನ್ನು ಕತ್ತರಿಸಲಿದೆ’
‘ಒಂದು ವೇಳೆ ಚೀನಾವು ಪೆಗಾಂಗ್ ಸರೋವರವನ್ನು ಸ್ವಾಧೀನಪಡಿಸಿಕೊಂಡರೆ, ಭಾರತದ ಏನು ಉಳಿದಿದೆ. ಮುಂದಿನ ದಿನಗಳಲ್ಲಿ ಚೀನಾ ಲಡಾಖ್‌ನ ಅನೇಕ ತುಂಡುಗಳನ್ನಾಗಿ ಮಾಡಲಿದೆ’ ಎಂದಿರುವ ಝಕೀರ್ ಹುಸೇನ್, ಪ್ರಧಾನಿ ಮೋದಿಯವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಝಕೀರ್ ಹುಸೇನ್ ಹೇಳಿರುವ ಹೇಳಿಕೆ ಅವರ ವೈಯಕ್ತಿಕವಾಗಿದ್ದು, ಇದಕ್ಕೂ ತಮಗೂ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

Comments are closed.