ಅಂತರಾಷ್ಟ್ರೀಯ

ಶಂಕರ್ ನಾಗ್ ಅವರ ಸವಿನೆನಪಿಗಾಗಿ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಅವರು ಹಾಡಿರುವ ಈ ಹಾಡು ಕೇಳಿ

Pinterest LinkedIn Tumblr

ಶಂಕರ್ ನಾಗ್ ಅವರ ಸವಿನೆನಪಿಗಾಗಿ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಅವರು ಹಾಡಿರುವ “ಆಟೋರಾಜ” ಚಿತ್ರದ “ನಲಿವ ಗುಲಾಬಿ ಹೂವೆ… ಹಾಡು ಕೇಳಿ 

ಕರಾಟೆ ಕಿಂಗ್, ಆಟೋರಾಜ, ಸೂಪರ್ ಸ್ಟಾರ್, ಕರುನಾಡ ಕಣ್ಮಣಿ ಇನ್ನೂ ಹಲವಾರು ಬಿರುದುಗಳಿಂದ ಖ್ಯಾತರಾಗಿದ್ದ ಕನ್ನಡ ನಾಡಿನ ಜನರ ಮನಗೆದ್ದ ಭಾರತೀಯ ಖ್ಯಾತನಟ, ನಿರ್ದೇಶಕ, ನಿರ್ಮಾಪಕ,ಚಿತ್ರಕಥೆಗಾರ ಶಂಕರ್‌ನಾಗ್( (ನಾಗರಕಟ್ಟೆ ಶಂಕರ್) ಅವರು ನಮ್ಮನ್ನಗಲಿ 30 ವರ್ಷಗಳು ಸಮೀಪಿಸುತ್ತಿದೆ.

ಕನ್ನಡ ಚಿತ್ರರಂಗದ ರಂಗಭೂಮಿ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕ ಶಂಕರ್‌ನಾಗ್ ಅವರು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದರು.

ಸೆಪ್ಟೆಂಬರ್ 30,1990ರಂದು ದಾವಣಗೆರೆಯ ಹಳ್ಳಿಯೊಂದಾದ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸಂದರ್ಭ ಧಾರವಾಡದಿಂದ ತೆರಳುತ್ತಿದ್ದ ಶಂಕರ್ ನಾಗ್ ಅವರು ಕಾರು ಅಪಘಾತದಿಂದ ತಮ್ಮ ಕೊನೆಯುಸಿರೆಳೆದರು. ಇಡೀ ಚಿತ್ರೋಧ್ಯಮವನ್ನು ಅತೀ ಕಡಿಮೆ ಸಮಯದಲ್ಲಿ ತನ್ನತ್ತಾ ವಾಲುವಂತೆ ಮಾಡಿದ್ದ ಶಂಕರ್ ನಾಗ್ ಅವರು ಬರೀ ನೆನಪಾಗಿ ಉಳಿದರು.

ಶಂಕರ್ ನಾಗ್ ಅವರ ಸವಿನೆನಪಿಗಾಗಿ… ಈ ಹಾಡು

ಶಂಕರ್ ನಾಗ್ ಅವರ ಅಣ್ಣ ಅನಂತ್ ನಾಗ್ ಕುಟುಂಬದ ಆಪ್ತರಾದ ದುಬೈಯ ಖ್ಯಾತ ಉದ್ಯಮಿ ಹಾಗು ಕನ್ನಡ ಮತ್ತು ತುಳು ಸಿನಿಮಾ ನಿರ್ಮಾಪಕ, ಖ್ಯಾತ ಹಾಡುಗಾರರೂ ಆಗಿರುವ ಶ್ರೀ ಹರೀಶ್ ಶೇರಿಗಾರ್ ಅವರು ಶಂಕರ್ ನಾಗ್ ಅವರ ಸವಿನೆನಪಿಗಾಗಿ “ಆಟೋರಾಜ” ಚಿತ್ರದ “ನಲಿವ ಗುಲಾಬಿ ಹೂವೆ… ಹಾಡನ್ನು ಸೊಗಸಾಗಿ ಹಾಡುವ ಮೂಲಕ ಶಂಕರ್ ನಾಗ್ ಅವರು ನಮ್ಮಿಂದ ದೂರವಾಗಿಲ್ಲ, ನಮ್ಮ ಕಣ್ಣಮುಂದೆಯೇ ಇದ್ದಾರೆ. ತನ್ನದೇ ಆದ ನಟನಾ ಶೈಲಿಯ ಮೂಲಕ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ ಈ ಅದ್ಭುತ ನಟನನ್ನು ನಾವು ಯಾರೂ ಮರೆತ್ತಿಲ್ಲ. ಬದಲಾಗಿ ಸದಾ ನೆನಪಿಸುತ್ತಿದ್ದೇವೆ ಎಂದು ಸಾರಿದ್ದಾರೆ.

ಶಂಕರ್ ನಾಗ್ ಅವರ ಸವಿನೆನಪಿನೊಂದಿಗೆ ಸಂಗೀತ ಪ್ರೇಮಿಗಳಿಗಾಗಿ ಶ್ರೀ ಹರೀಶ್ ಶೇರಿಗಾರ್ ಅವರು ಸುಮಧುರವಾಗಿ ಹಾಡಿರುವ “ಆಟೋರಾಜ” ಚಿತ್ರದ “ನಲಿವ ಗುಲಾಬಿ ಹೂವೆ… ಹಾಡು ಕೇಳಿ ಸಂಗೀತ ಪ್ರೇಮಿಗಳು ಆನಂದಿಸಿರಿ.

Comments are closed.