ಮನೋರಂಜನೆ

ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಮಾಡಿರುವ ಈ ಭಾವನಾತ್ಮಕ ವಿಡಿಯೊ ಒಮ್ಮೆ ನೋಡಿ…..

Pinterest LinkedIn Tumblr

ಮುಂಬೈ:ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್ ರಾವ್ ದೇಶ್ ಮುಖ್ ಅವರ 75ನೇ ಜಯಂತಿಗೆ ಅವರ ಪುತ್ರ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಮಾಡಿರುವ ಭಾವನಾತ್ಮಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

https://www.instagram.com/p/CAoyyEHjogx/?utm_source=ig_embed&utm_campaign=loading

ತಮ್ಮ ತಂದೆಯ ಕುರ್ತಾದೊಳಗೆ ಕೈಯನ್ನು ಹಾಕಿ ಅಗ್ನಿಪಥ್ ಸಿನೆಮಾದ ಅಭಿ ಮುಜ್ ಮೈ ಕಹಿನ್ ಹಾಡಿನ ಹಿನ್ನೆಲೆಯೊಂದಿಗೆ ತಂದೆ ತನ್ನ ಭುಜದ ಮೇಲೆ ಕೈ ಹಾಕಿ ಸಾಂತ್ವನ ಮಾಡುವ ರೀತಿಯಲ್ಲಿ ತಮ್ಮ ಕೈಯನ್ನೇ ಬಳಸಿ ಸಮಾಧಾನ ಮಾಡುವ ರೀತಿಯಲ್ಲಿ ವಿಡಿಯೊ ಮಾಡಿದ್ದಾರೆ. ಕೊನೆಗೆ ಹ್ಯಾಪಿ ಬರ್ತ್ ಡೇ ಪಪ್ಪಾ, ಮಿಸ್ ಯೂ ಎವಿರಿ ವೇರ್ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೊ ಅತ್ಯಂತ ಭಾವುಕವಾಗಿದ್ದು ಇದನ್ನು ರಿತೇಶ್ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ ಕೆಲವೇ ಹೊತ್ತಿನಲ್ಲಿ ವೈರಲ್ ಆಗಿದೆ. ಅವರ ಪತ್ನಿ ನಟಿ ಜೆನಿಲಿಯಾ ಡಿಸೋಜ ಕೂಡ ಅಗಲಿದ ಮಾವನಿಗೆ ಗೌರವ ಸೂಚಕವಾಗಿ ಬರೆದಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದ ವಿಲಾಸ್ ರಾವ್ ದೇಶ್ ಮುಖ್ 2012ರಲ್ಲಿ ಅಗಲಿದ್ದರು.

Comments are closed.