ಇಂದೋರ್: ಮಾರಕ ಕೊರೋನಾ ವೈರಸ್ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ತನ್ನ ಅವಕಾಶಗಳು ಕೈ ತಪ್ಪುವ ಭೀತಿಯಿಂದ ಖ್ಯಾತ ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ ಸೋಮವಾರ ತಡರಾತ್ರಿ ಇಂದೋರ್‌ನ ಭಜರಂಗ್ ನಗರದಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟು ದಿನ ಪ್ರೇಕ್ಷಾ ಮುಂಬೈನಲ್ಲಿ ವಾಸಿಸುತ್ತಿದ್ದರು. ಆಧರೆ ಲಾಕ್ ಡೌನ್ ಆರಂಭಕ್ಕೂ ಮುನ್ನ ಇಂದೋರ್ ನಲ್ಲಿರುವ ತಮ್ಮ ಮನೆಗೆ ವಾಪಸ್ ಆಗಿದ್ದರು. ಅತ್ತ ನಟಿ ಮನೆಗೆ ತೆರಳುತ್ತಿದ್ದಂತೆಯೇ ಇತ್ತ ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿತ್ತು. ಇದರಿಂದ ನಟಿ ಅನಿವಾರ್ಯವಾಗಿ ಮನೆಯಲ್ಲಿಯೇ ಕುಳಿತುಕೊಳ್ಳಬೇಕಾಯಿತು.
ಏತನ್ಮಧ್ಯೆ ಪ್ರೇಕ್ಷಾ ತನ್ನ ಪಾತ್ರಗಳು ಬೇರೊಬ್ಬರ ಪಾಲಾಗುವ ಒತ್ತಡದಲ್ಲಿದ್ದರಂತೆ. ಈ ಬಗ್ಗೆ ಹೇಳಿಕೆ ನೀಡಿರುವ ನಟಿಯ ಕುಟುಂಬ ಸದಸ್ಯರು ಲಾಕ್ ಡೌನ್ ಹಿನ್ನೆಲೆ ಕೆಲಸ ಸ್ಥಗಿತಗೊಂಡ ಕಾರಣ ಪ್ರೇಕ್ಷಾ ಸಾಕಷ್ಟು ಒತ್ತಡದಲ್ಲಿದ್ದರು ಎಂದು ಹೇಳಿದ್ದಾರೆ.
ಆತ್ಮಹತ್ಯೆಗೂ ಮೊದಲು ಪ್ರೆಕ್ಷಾ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸ್ಟೇಟಸ್ ಅಪ್ಡೇಟ್ ಮಾಡಿದ್ದು, ತನ್ನ ಸ್ಟೇಟಸ್ ನಲ್ಲಿ ನಟಿ ಅವತಾರ್ ಶಿಂಗ್ ಪಾಷಾ ಅವರ ಕವಿತೆ ‘ಸಬ್ ಸೆ ಬುರಾ ಹೋತಾ ಹೈ ಸಪ್ನೋ ಕಾ ಮರ್ ಜಾನಾ’ದ ಸಾಲುಗಳನ್ನು ಬರೆದುಕೊಂಡಿದ್ದರು. WhatsApp ನಲ್ಲಿ ಇದು ಪ್ರೇಕ್ಷಾ ಸೆಟ್ ಮಾಡಿದ್ದ ಕೊನೆಯ ಸ್ಟೇಟಸ್ ಆಗಿತ್ತು. ಆದರೆ, ಪ್ರೇಕ್ಷಾ ಆತ್ಮಹತ್ಯೆಯ ಹಿಂದಿರುವ ಕಾರಣಗಳ ತನಿಖೆಯಲ್ಲಿ ಇದೀಗ ಪೊಲೀಸರು ತೊಡಗಿದ್ದಾರೆ.
ಇನ್ನು ಅಭಿಜೀತ್ ವಾಡ್ಕರ್, ಸಂತೋಷ್ ರೆಗೆ ಮತ್ತು ನಾಗೇಂದ್ರ ಸಿಂಗ್ ರಾಥೋಡ್ ಅವರ ‘ಡ್ರಾಮಾ ಫ್ಯಾಕ್ಟರಿ’ ನಾಟಕ ಗುಂಪಿನೊಂದಿಗೆ ಪ್ರೇಕ್ಷಾ ತನ್ನ ರಂಗಭೂಮಿಯ ಕರಿಯರ್ ಆರಂಭಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಮಾಂಟೋ ಬರೆದ ‘ಖೋಲ್ ದೋ’ ನಾಟಕದಲ್ಲಿ ಅವರು ತಮ್ಮ ಮೊದಲ ಸ್ಟೇಜ್ ಪರ್ಫಾರ್ಮೆನ್ಸ್ ನೀಡಿದ್ದರು. ಅವರು ‘ಖೂಬ್ಸೂರತ್ ಬಹು’, ‘ಬೂಂದೇ’ ‘ರಾಕ್ಷಸ್’, ‘ಪ್ರತಿಬಿಂಬ’, ಪಾರ್ಟ್ನರ್’ ‘ಹಾಂ’, ‘ಥ್ರಿಲ್’ ಹಾಗೂ ‘ಅಧೂರಿ ಮಹಿಳಾ’ ಗಳಂತಹ ಮುಂತಾದ ನಾಟಕಗಳಲ್ಲಿ ಕೆಲಸ ಮಾಡಿದ್ದರು. ಅಭಿನಯಕ್ಕಾಗಿ ಅವರಿಗೆ ಮೂರು ರಾಷ್ಟ್ರೀಯ ನಾಟ್ಯ ಮಹೋತ್ಸವದಲ್ಲಿ ಮೊದಲ ಬಹುಮಾನ ಕೂಡ ಲಭಿಸಿದ್ದವು. ಏಕಾಂಗಿ ನಾಟಕ ‘ಸಡಕ್ ಕೆ ಕಿನಾರೆ’ ನಾಟಕದಲ್ಲಿನ ನಟನೆಗೆ ಅವರಿಗೆ ಅವಾರ್ಡ್ ಕೂಡ ಲಭಿಸಿದೆ.
Comments are closed.