ಕರಾವಳಿ

ಶಾಸಕ ಹಾಲಾಡಿ ಸೂಚನೆಯಂತೆ ಕುಂದಾಪುರದಲ್ಲಿ ಆರಂಭಗೊಂಡಿದೆ ಕ್ವಾರೆಂಟೈನ್ ಕಂಟ್ರೋಲ್ ರೂಂ (Video)

Pinterest LinkedIn Tumblr

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಕ್ವಾರಂಟೈನ್ ಮಾಹಿತಿಗೆ ಶಾಸಕರ ಸೂಚನೆಯಂತೆ ಇಲ್ಲಿನ ಪುರಸಭೆ ಕಟ್ಟಡದ ಮೊದಲ ಮಹಡಿಯಲ್ಲಿ ಗುರುವಾರದಿಂದ ಕಂಟ್ರೋಲ್ ರೂಂ ಆರಂಭವಾಗಿದೆ.  ಕ್ವಾರಂಟೈನ್ ಕೇಂದ್ರಗಳಿಗೆ ಸಂಬಂಧಿಸಿದ ಮಾಹಿತಿ, ದೂರು ಇತ್ಯಾದಿಗಳನ್ನು ಇಲ್ಲಿಗೆ ಕರೆ ಮಾಡುವ ಮೂಲಕ ಪಡೆಯಬಹುದು. ದೂರು ನೀಡಿದಾಗ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲಾಗುತ್ತದೆ. ಇದು ನಿರಂತರವಾಗಿ ಚಾಲನೆಯಲ್ಲಿ ಇರಲಿದೆ.

ಹೊರರಾಜ್ಯಗಳಿಂದ ಬರುವವರಿಗೆ ಕ್ವಾರಂಟೈನ್ ಕೇಂದ್ರದಲ್ಲಿ ಅನೇಕ ಸಮಸ್ಯೆಗಳಾಗುತ್ತಿದ್ದವು. ಆಹಾರ ತಡವಾಗಿ ತಲುಪುತ್ತಿತ್ತು. ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಊಟ, ತಿಂಡಿ ವ್ಯವಸ್ಥೆ, ಶುಚಿತ್ವದ ವ್ಯವಸ್ಥೆ ಕುರಿತು ದೂರುಗಳಿದ್ದವು. ಇದಕ್ಕಾಗಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಕೇಂದ್ರ ತೆರೆಯಲು ಸೂಚಿಸಿದ್ದು ಅದರಂತೆ ಪುರಸಭೆ ಕೊಠಡಿಯೊಂದನ್ನು ಸಜ್ಜುಗೊಳಿಸಿ ನೀಡಿದೆ. ಇಲ್ಲಿ ಶಾಸಕರೇ ಸಿಬಂದಿಯನ್ನು ನೇಮಿಸಿ ಇರಿಸಿದ್ದಾರೆ. ಶಾಸಕರು ಬುಧವಾರ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಂಟ್ರೋಲ್ ರೂಂ ಗುರುವಾರದಿಂದ ಕಾರ್ಯ ನಿರ್ವಹಿಸುತ್ತಿದ್ದು ಬೆಳಿಗ್ಗೆನಿಂದ ಹಲವಾರು ಕರೆಗಳು ಬರುತ್ತಿದೆ.

ಹೊರರಾಜ್ಯಗಳಿಂದ ಬರುವವರು ಮಾಹಿತಿಗೆ, ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವವರು ದೂರುಗಳಿಗೆ ಈ ಕೇಂದ್ರವನ್ನು ಸಂಪರ್ಕಿಸಬಹುದು. ಪ್ರಸ್ತುತ ಸೇವಾಸಿಂಧು ಆಪ್ ಮೂಲಕ ಹೊರರಾಜ್ಯಗಳಿಂದ ಬರುವ ಪ್ರಕ್ರಿಯೆ ತಡೆ ಹಿಡಿಯಲಾಗಿದೆ. ಕೆಲವು ದಿನಗಳಲ್ಲಿ ಮತ್ತೆ ಚಾಲನೆ ದೊರೆಯಲಿದೆ. ಈಗಾಗಲೇ ತಾಲೂಕಿನಲ್ಲಿ 44 ಕ್ವಾರೆಂಟೈನ್ ಕೇಂದ್ರಗಳಿವೆ. ಖಾಸಗಿ ಹೋಟೆಲ್‌ಗಳಲ್ಲಿ ನಿಗಾದಲ್ಲಿ ಇರುವ ಜನರಿದ್ದಾರೆ.

ಕ್ವಾರಂಟೈನ್ ಮಾಹಿತಿಗೆ ಸಂಪರ್ಕಿಸಬೇಕಾದ ಸಂಖ್ಯೆಗಳು: 7204018041, 7204018071,7619568072

(ವರದಿ- ಯೋಗೀಶ್ ಕುಂಭಾಸಿ)

Comments are closed.