ರಾಷ್ಟ್ರೀಯ

ಕೊರೊನಾ ಸಮುದಾಯ ಪ್ರಸರಣ ಇಲ್ಲ ಎನ್ನುವುದು ತಪ್ಪು ಮಾಹಿತಿ- ಸ್ಯಾಮ್‌ ಪಿತ್ರೋಡಾ

Pinterest LinkedIn Tumblr


ಹೊಸದಿಲ್ಲಿ: ದೇಶದಲ್ಲಿ ದಿನೇ ದಿನೆ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಕೇಂದ್ರ ಸರಕಾರ ಮಾತ್ರ ಸಮುದಾಯ ಪ್ರಸರಣ ಶುರುವಾಗಿಲ್ಲ ಎಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಅಲ್ಲದೆ ಟೆಸ್ಟಿಂಗ್‌ ಪ್ರಮಾಣವನ್ನು ಸರಕಾರ ಏರಿಕೆ ಮಾಡಿದ್ದು ತುಂಬ ವಿಳಂಬವಾಗಿದೆ. ಇದರಿಂದ ಕೊರೊನಾ ನಿಯಂತ್ರಣ ಕಷ್ಟವಾಗುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಹಿರಿಯ ಕಾಂಗ್ರೆಸ್ಸಿಗ ಸ್ಯಾಮ್‌ ಪಿತ್ರೋಡಾ ಹರಿಹಾಯ್ದಿದ್ದಾರೆ.

ದೇಶದಲ್ಲಿ ಸೋಂಕಿತರ ಸಂಖ್ಯೆ ಲಕ್ಷ ದಾಟಿದೆ. ಮೃತರ ಸಂಖ್ಯೆ 3,500 ಕ್ಕೂ ಹೆಚ್ಚಿದೆ. ಹಾಗಿದ್ದು ಸಮುದಾಯ ಪ್ರಸರಣ ಇಲ್ಲ ಎಂದು ಸರಕಾರ ದಾರಿ ತಪ್ಪಿಸುತ್ತಿದೆ. ಸೋಂಕು ಹೆಚ್ಚುತ್ತಿದ್ದರೂ ಜನರು ಸರಕಾರದ ಮಾತು ನಂಬಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಪುಣ್ಯಸ್ಮರಣೆ ದಿನವಾದ ಗುರುವಾರದಂದು ಪಿತ್ರೋಡಾ ತಮ್ಮ ಬ್ಲಾಗ್‌ನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಸರಕಾರಕ್ಕೆ 10 ಅಂಶಗಳನ್ನು ಕೂಡ ಶಿಫಾರಸು ಮಾಡಿದ್ದಾರೆ. ಕೊರೊನಾ ಕಾರಣ ನೀಡಿ ರಾಜ್ಯ ಸರಕಾರಗಳ ಅಧಿಕಾರವನ್ನು ಕಸಿಯುವುದು ಕೇಂದ್ರಕ್ಕೆ ಮಾರ್ಗವಾಗಬಾರದು ಎಂದು ಕಿಡಿಕಾರಿದ್ದಾರೆ.

ವಿದೇಶಗಳಿಂದ ಮರಳುವವರ ಮೇಲೆ ಹೆಚ್ಚಿನ ನಿಗಾ ಇರಿಸಿ ಕೇವಲ ಸಮಯ ವ್ಯರ್ಥ ಮಾಡಲಾಯಿತು. ಫೆಬ್ರವರಿಯಲ್ಲಿಯೇ ರ್‍ಯಾಂಡಮ್
ಟೆಸ್ಟಿಂಗ್‌ ತೀವ್ರವಾಗಿ ನಡೆಸಬೇಕಿತ್ತು. 8 ವಾರಗಳ ಲಾಕ್‌ಡೌನ್‌ ಹೇರಿದರೂ ಈಗ ಅದರಿಂದ ಹೊರಬರುವುದು ಕಷ್ಟವಾಗುತ್ತಿದೆ ಎಂದು ಮೋದಿ ಸರಕಾರಕ್ಕೆ ಕುಟುಕಿದ್ದಾರೆ.

Comments are closed.