ರಾಷ್ಟ್ರೀಯ

ದಾಖಲೆ ಪರೀಕ್ಷಿಸಲು ಬಂದ ಪೊಲೀಸ್ ಅಧಿಕಾರಿಯನ್ನು ಕಾರು ಚಾಲಕ ಮಾಡಿದ್ದೇನು…? ಈ ವೀಡಿಯೊ ನೋಡಿ…

Pinterest LinkedIn Tumblr

ನವದೆಹಲಿ: ವಾಹನ ಚಲಾಯಿಸುವಾಗ ಟ್ರಾಫಿಕ್​ ಪೊಲೀಸ್​ ನಿಲ್ಲಿಸಿ ದಾಖಲೆ ಪರೀಕ್ಷಿಸುವುದು ಸಹಜ. ಆದರೆ ಹೀಗೆ ದಾಖಲೆ ಪರಿಕ್ಷಿಸಲು ಬಂದ ಪೊಲೀಸ್​ನನ್ನೇ 2 ಕಿ.ಮೀ. ಹೊತ್ತೊಯ್ದ ಘಟನೆ ದೆಹಲಿಯಲ್ಲಿ ನಡೆದಿದೆ.

ಪೊಲೀಸ್​ ಕಾರಿನ ಮುಂದೆ ನಿಂತು ದಾಖಲೆ ಕೇಳಿದ್ದಾರೆ. ಆದರೆ ಈತ ಕಾರು ಚಲಾಯಿಸಿದ್ದಾನೆ. ತಕ್ಷಣ ಪೊಲೀಸ್​ ಕಾರಿನ ಬಾಯ್ನೆಟ್​ ಮೇಲೆ ಹತ್ತಿದ್ದಾರೆ. ಹೀಗೆಯೇ ಕಾರನ್ನು ಚಲಾಯಿಸಿದ್ದಾನೆ ಈ ಭೂಪ.

ಈ ಅವಘಡ ನವೆಂಬರ್​ನಲ್ಲಿ ನಡೆದಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೆಹಲಿ ಹೊರ ವಲಯದಲ್ಲಿ ಈ ಘಟನೆ ನಡೆದಿದ್ದು ಸುನಿಲ್​ ಎಂಬ ಪೊಲೀಸ್​ ಪೇದೆ ಗಾಯಗೊಂಡಿದ್ದಾರೆ.

ನಂಗ್ಲೊಯಿ ಎಂಬಲ್ಲಿ ಪೊಲೀಸ್​ ತಪಾಸಣೆ ನಡೆಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಬಂದ ಈ ಕಾರನ್ನು ಪೊಲೀಸ​ರು ತಡೆದಿದ್ದಾರೆ. ಆದರೆ ಕಾರು ಚಾಲಕ ಕಾರನ್ನು ನಿಲ್ಲಿಸಿದಂತೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಕಾರನ್ನು ತಡೆಯಲು ಪೊಲೀಸ್​ ಸುನಿಲ್​ ಕಾರಿನ ಬಾಯ್ನೆಟ್​ ಮೇಲೆ ಹತ್ತಿದ್ದಾರೆ. ಕಾರನ್ನು ಹಾಗೆಯೇ ಚಲಾಯಿಸಿಕೊಂಡು 2 ಕಿ.ಮೀ. ಸಾಗಿದ್ದಾನೆ ಚಾಲಕ.

ಕಾರಿನಲ್ಲಿ ಕುಳಿತಿದ್ದ ಇನ್ನೊಬ್ಬ ವ್ಯಕ್ತಿ ಈ ಘಟನೆಯನ್ನು ಮೊಬೈಲ್​ನಲ್ಲಿ ವೀಡಿಯೋ ಮಾಡಿದ್ದಾನೆ. ಪೊಲೀಸ್​ ಪೇದೆ ಕಾರು ನಿಲ್ಲಿಸಲು ಹೇಳಿದಾಗ ಪೊಲೀಸ್​ ಇಳಿಯಲು ಅನುಕೂಲವಾಗುವಂತೆ ನಿಧಾನಗೊಳಿಸಿ, ಪೊಲೀಸ್​ ಇಳಿದ ಮೇಲೆ ಪರಾರಿಯಾಗಿದ್ದಾನೆ.

ಈ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಚಾಲಕನ ವಿರುದ್ಧ ಗುಡುಗಿದ್ದಾರೆ.

Comments are closed.