ಕರಾವಳಿ

ಗಾಯಗೊಂಡು ನಡೆಯಲಾಗದೇ ಗೂಳಿಯ ಗೋಳಾಟ- ಬೇಕಿದೆ ಚಿಕಿತ್ಸೆ, ಉಪಚಾರ(Video)

Pinterest LinkedIn Tumblr

ಕುಂದಾಪುರ: ಕುಂದಾಪುರ ನಗರದಲ್ಲಿ ಬಸವವೊಂದು ನಡೆದಾಡಲು ಕಷ್ಟಪಡುತ್ತಿದೆ. ಒಂದು ಹೆಜ್ಜೆ ಮುಂದಿಡಲು ಕೂಡ ಬಸವ ಕಷ್ಟಪಡುತ್ತಿದ್ದು ಕೂಡಲೇ ಈ ಬಗ್ಗೆ ಸಹೃದಯಿಗಳು ಗಮನಹರಿಸಬೇಕು ಎಂದು ನೆಟ್ಟಿಗರು ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ.

ಕಳೆದ ಕೆಲ ದಿನಗಳಿಂದ ಪೇಟೆಯಲ್ಲಿ ಈ ಗೂಳಿ ಹೆಜ್ಜೆ ಇಡಲು ಕೂಡ ಹರಸಾಹಪಡುತ್ತಿದ್ದು ಗೂಳಿಯ ಹಿಂಭಾಗದ ಕಾಲಿಗೆ ಏಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಕುಂದಾಪುರ ಪೇಟೆಯಲ್ಲಿ ನಡೆಯಲು ಕಷ್ಟಪಡುವ ಈ ಗೂಳಿಗೆ ಅಗತ್ಯ ಚಿಕಿತ್ಸೆ ಹಾಗೂ ಉಪಚಾರದ ಅಗತ್ಯವಿದೆ. ಒಂದು ಹೆಜ್ಜೆ ಇಟ್ಟು ನಿಮಿಷಗಳ ಕಾಲ ಸಾವರಿಸಿಕೊಂಡು ಇನ್ನೊಂದು ಹೆಜ್ಜೆ ಇಡುವ ಈ ಗೂಳಿಯ ಕಷ್ಟಕ್ಕೆ ಮಾನವೀಯ ನೆಲೆಯಲ್ಲಿ ಸ್ಪಂದನೆ ಸಿಗಬಹುದೇ ಕಾದುನೋಡಬೇಕಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.