ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಭದ ಕುರಿತಂತೆ ಸಂಸದೆ ಶೊಭಾ ಕರಂದ್ಲಾಜೆ ಅವರು ಸೋಮವಾರ ಮಧ್ಯಾಹ್ನ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಚತುಷ್ಪತ ಕಾಮಗಾರಿ ಗುತ್ತಿಗೆ ಕಂಪೆನಿಗಳಾದ ನವಯುಗ ಹಾಗೂ ಐ.ಆರ್.ಬಿ ಸಂಬಂಧಪಟ್ಟವರ ಸಭೆ ನಡೆಸಿದರು.

ಶಾಸ್ತ್ರೀ ವೃತ್ತದ ಪ್ಲೈ ಓವರ್ ಸಮಸ್ಯೆ ಬಗ್ಗೆ ಈ ಸಭೆ ಕರೆದಿದ್ದು ಈ ಹಿಂದೆಯೂ ಹಲವು ಬಾರಿ ಜಿಲ್ಲಾಧಿಕಾರಿ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಹಿಂದಿನ ಸರಕಾರ ಮಂಜೂರು ಮಾಡಿದ್ದು ನಾನು ಬಂದು ಐದು ವರ್ಷಕ್ಕೂ ಹೆಚ್ಚಾದರೂ ಕಾಮಗಾರಿ ನಡೆಯದಿರುವುದು ದುರಂತ. ನವಯುಗ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ಮಾಡಿದೆ. ಕುಂದಾಪುರ ಹಾಗೂ ಪಡುಬಿದ್ರೆಯಲ್ಲಿ ಅರೆಬರೆ ಕಾಮಗಾರಿ ನಡೆಸಿದ್ದು ಮೊದಲಿನಿಂದಲೂ ಜನರಿಂದ ಆರೋಪವಿದೆ ಸರ್ವೀಸ್ ರಸ್ತೆಯು ಕೂಡ ಆರಂಭದಿಂದಲೂ ಸಮಸ್ಯೆಯಿಂದ ಕೂಡಿದ್ದು ಎರಡನೇ ಹಂತದಲ್ಲಿ ಪರಿಪೂರ್ಣ ಮಾಡುವುದಾಗಿ ಗುತ್ತಿಗೆ ಕಂಪೆನಿ ತಿಳಿಸಿದೆ. ಈ ಪ್ಲೈ ಓವರ್ ನಿರ್ಧಾರವೇ ನಿಜಕ್ಕೂ ಗೊಂದಲ ಮೂಡಿಸುತ್ತಿದೆ. ಹಣದ ಸಮಸ್ಯೆಯನ್ನು ಹೇಳಿ ನವಯುಗ ಕಂಪೆನಿಯು ಕೆಲಸವನ್ನೇ ನಿಲ್ಲಿಸಿಬಿಟ್ಟಿದೆ. ಈ ಬಗ್ಗೆ ನಿತಿನ್ ಗಡ್ಕರಿಯವರ ಎದುರುಪ್ರಸ್ತಾಪವಾಗಿದ್ದು ರಸ್ತೆ ಪರಿಪೂರ್ಣಗೊಳಿಸಲು ಆರ್ಥಿಕ ಸಹಕಾರ ನೀಡುವ ಬಗ್ಗೆಯೂ ಮಾತುಕತೆ ನಡೆಸಲಾಗಿತ್ತು. ಈಗ ಕೆಲಸ ಆರಂಭವಾದರೂ ಶಾಸ್ತ್ರೀ ಸರ್ಕಲ್ ಪ್ಲೈ ಓವರ್ ಹಾಗೂ ಪಡುಬಿದ್ರೆ ಸೇತುವೆ ಕೆಲಸ ಅಪೂರ್ಣವಾಗಿದೆ. ಕೆಲಸ ಪರಿಪೂರ್ಣ ಆಗದೇ ಟೋಲ್ ಆರಂಬ ಮಾಡಬಾರದಿತ್ತು.
ಶಾಸ್ತ್ರೀ ಸರ್ಕಲ್ ಫ್ಲೈ ಓವರ್ ವಿಚಾರದಲ್ಲಿ ಜನರಿಂದ ಠೀಕೆ ಕೇಳಬೇಕಾಗಿದೆ. ಇಲ್ಲಿನ ಸಮಸ್ಯೆಗಳು ನಿಜಕ್ಕೂ ಜ್ವಲಂತ. ಈ ಗುತ್ತಿಗೆ ಕಂಪೆನಿಯನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕಿದೆ ಎಂದು ನಿತಿನ್ ಗಡ್ಕರಿಗೆ ತಿಳಿಸಿದ್ದೇವೆ. ಇನ್ನು ಮುಂದೆ ಈ ಕಂಪೆನಿಗೆ ಯಾವುದೇ ಗುತ್ತಿಗೆ ಟೆಂಡರ್ ನೀಡಬಾರದು ಈ ಬಗ್ಗೆ ಡಿಸಿ ಅವರು ಅಧೀಕೃತ ಪತ್ರ ಬರೆದು ಕೇಂದ್ರದ ಗಮನ ಸೆಳೆಯಲಿ ಎಂದರು.
ಟೋಲ್ ಬಂದ್ ಮಾಡ್ತೇವೆ: ಡಿಸಿ, ಸಂಸದೆ
ಎನ್.ಎಚ್.ಎ.ಐ ಅಧಿಕಾರಿಗಳು ಬೇಜವಬ್ದಾರಿ ವರ್ತನೆ ತೋರುತ್ತಿದ್ದಾರೆ.ಯಾವುದೇ ಸಭೆಗೆ ಅವರು ಬರುತ್ತಿಲ್ಲ ಎಂದು ಡಿಸಿ ಜಿ.ಜಗದೀಶ್ ಅಸಮಾಧಾನ ವ್ಯಕ್ತಪಡಿಸಿದರು. ಜನವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಕೆಲಸ ಮಾಡಿಮುಗಿಸುವ ಭರವಸೆ ನೀಡಿದಂತೆ ನಡೆದುಕೊಳ್ಳಿ ಇಲ್ಲದಿದ್ದರೆ ಫೆಬ್ರವರಿಯಲ್ಲಿ ಪಡುಬಿದ್ರೆ, ಎಪ್ರಿಲ್ ತಿಂಗಳಲ್ಲಿ ಸಾಸ್ತಾನ ಟೋಲ್ ನಿಲ್ಲಿಸ್ತೇವೆ ಎಂದು ಡಿಸಿ ಖಡಕ್ ಎಚ್ಚರಿಕೆ ನೀಡಿದ್ದು ಇದಕ್ಕೆ ಸಂಸದರು ಕೂಡ ಸಮ್ಮತಿ ಸೂಚಿಸಿದರು.
ಸೈಟ್ ಇಂಜಿನಿಯರ್ ಹೇಳೋದೇನು?
2010ಕ್ಕೆ ಕಾಮಗಾರಿ ಆರಂಬಿಸಿದ್ದು ಮಾರ್ಚ್ ೨೦೧೩ಕ್ಕೆ ಕೆಲಸ ಮುಗಿಯಬೇಕಿತ್ತು. ಫ್ಲೈ ಓವರ್, ಕರವಾಳಿ ಹಾಗೂ ಪಡುಬಿದ್ರೆ ಬೇಡಿಕೆಗಳು ವಿಳಂಭವಾದ ಹಿನ್ನೆಲೆ ಕಾಮಗಾರಿ ವಿಳಂಭವಾಗುತ್ತಿದೆ. 2018ಕ್ಕೆ ಫ್ಲೈ ಓವರ್ ಕಾಮಗಾರಿ ಪೂರ್ಣಗೊಳಿಸಬೇಕಿತ್ತು ಆದರೆ ಆರ್ಥಿಕ ಸಮಸ್ಯೆಯಿಂದ ಕಾಮಗಾರಿ ಹಿನ್ನಡೆಯಾಗಿದ್ದು 2020 ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಮುಗಿಸಲಾಗುತ್ತದೆ. ಜನವರಿಯಲ್ಲಿ ಪಡುಬಿದ್ರೆ ಕಾಮಗಾರಿ ಮುಗಿಯುತ್ತೆ. ಬಸ್ರೂರು ಮೂರುಕೈ ಅಂಡರ್ ಪಾಸ್ ಕಾಮಗಾರಿ ಕೆಲವೇ ಸಮಯದಲ್ಲಿ ಮುಗಿಯುತ್ತದೆ. ಸುರತ್ಕಲ್- ಕುಂದಾಪುರ ಚತುಷ್ಪತ ಕಾಮಗಾರಿ ಈಗಾಗಾಲೇ 93% ಕಾಮಗಾರಿ ನಡೆದಿದೆ ಎಂದು ಸೈಟ್ ಇಂಜಿನಿಯರ್ ಹೇಳಿದರು.
ಶಾಸಕ ಹಾಲಾಡಿ ಹೇಳಿದ್ದೇನು..?
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ,ಅಧಿಕಾರಿಗಳು ಒಂದೊಂದು ಬಾರಿ ಒಂದೊಂದು ಮಾತನಾಡಿ ಜನರನ್ನು ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಅವರ ಮೇಲೆ ಪ್ರಕರಣ ಯಾಕೆ ದಾಖಲು ಮಾಡಬಾರದು? ಯಾರು ಈಹಿಂದೆ ಕಾಮಗಾರಿ ನಡೆಸಲು ವ್ಯವಸ್ತೆ ಮಾಡಿದರೋ ಅದರ ಪರಾಮರ್ಶೆ ಈಗ ಅಪ್ರಸ್ತುಪ. ಸರ್ವೀಸ್ ರಸ್ತೆ ಅಗಲೀಕರಣ. ಕುಂದಾಪುರ, ಬ್ರಹ್ಮಾವರ, ಸಾಸ್ತಾನ ಮೊದಲಾದೆಡೆ ಸರ್ವೀಸ್ ರಸ್ತೆ ಅಗಲೀಕರಣ ಬಗ್ಗೆ ನಾವೊಂದು ನಿಯೋಗ ಮಾಡಿ ಸಂಬಂದಪಟ್ಟವರ ಗಮನ ಸೆಳೆಯೋಣ. ಪರಿಷ್ಕೃತ ಮರು ಟೆಂಡರ್ ನಲ್ಲಿ ಉತ್ತಮ ಕೆಲಸ ಆಗಲಿ. ಈ ಹಿಂದೆ ಅವೈಜ್ಞಾನಿಕ ಕೆಲಸವಾಗಿದೆ. ಜನರ ಅಗತ್ಯಕ್ಕೆ ಅನುಕೂಲವಾಗಲು ಸರ್ವೀಸ್ ರಸ್ತೆ ಅಗಲೀಕರಣಕ್ಕೆ ರಾಜ್ಯದ ಅನುದಾನವಾದರೂ ಬಳಸಿಕೊಳ್ಳುವ ಪ್ರಯತ್ನ ಮಾಡೋಣ ಎಂದರು.
ಬಾಕಿ ಎಲ್ಲೆಲ್ಲಿ…
ಕುಂದಾಪುರ, ಕೋಟ, ಪಡುಬಿದ್ರೆ……
ಎಂದು ರಾಗ ಸಂಸದರು ಗರಂ ಆದರು. ಸಭೆಗೆ ಬರುವಾಗ ತಯಾರಿ ಮಾಡಬೇಕು. ಕಾಮಗಾರಿ ನಡೆದ ವಿವರ ಇಲ್ಲದೆ ಸಭೆಗೆ ಬಂದಿದ್ದ್ಯಾಕೆ? ಎಂದು ಸಂಸದರು ಗರಂ ಆದರು.ಕುಂದಾಪುರ, ಕೋಟ, ಪಡುಬಿದ್ರೆ……
ಎಂದು ಸೈಟ್ ಇಂಜಿನಿಯರ್ ರಾಗ ಎಳೆಯುತ್ತಿದ್ದಾಗ ಸಂಸದರು ಗರಂ ಆದರು. ಸಭೆಗೆ ಬರುವಾಗ ತಯಾರಿ ಮಾಡಬೇಕು. ಕಾಮಗಾರಿ ನಡೆದ ವಿವರ ಇಲ್ಲದೆ ಸಭೆಗೆ ಬಂದಿದ್ದ್ಯಾಕೆ? ಎಂದು ಸಂಸದರು ಗರಂ ಆದರು.
ಸರ್ವೀಸ್ ರಸ್ತೆ ಸಮಸ್ಯೆ….
ಕೋಟೇಶ್ವರದಿಂದ ತೆಕ್ಕಟ್ಟೆ, ಸಾಲಿಗ್ರಾಮದಿಂದ ಕೋಟ ವಿವೇಕ, ಬಳಿಕ ಬ್ರಹ್ಮಾವರದಲ್ಲಿ ಸರ್ವೀಸ್ ರಸ್ತೆ ಬೇಡಿಕೆಯಿದೆ ಎಂದು ಇಂಜಿನಿಯರ್ ಹೇಳಿದರು. ಒಟ್ಟು ಸುರತ್ಕಲ್ ನಿಂದ ಕುಂದಾಪುರಕ್ಕೆ 76 ಕಿ.ಮೀಇದೆ. 22 ಕಿ.ಮೀ ಸರ್ವೀಸ್ ರಸ್ತೆ ಕಾಮಗಾರಿ ನಡೆದಿದೆದ್ದು ದುರಂತ ಎಂದು ಸಂಸದರು ಹೇಳಿದರು.
ಸರ್ವೀಸ್ ರಸ್ತೆ ಸಮಸ್ಯೆಯಿಂದ ಹೈರಾಣಾಗಿದ್ದೇವೆ. ಕರಾವಳಿಯಲ್ಲಿ ಅರಬರೆ ಕಾಮಗಾರಿ ಮಾಡಿದ್ದು ಟೋಲ್ ಬಂದ್ ಮಾಡಿಸಿದರೆ ಎಲ್ಲವೂ ಸರಿಯಾಗುತ್ತೆ ಎಂದು ಮಾಜಿ ಜಿ.ಪಂ ಸದಸ್ಯ ಗಣಪತಿ ಟಿ. ಶ್ರೀಯಾನ್ ಹೇಳಿದರು.
ಬೆಂಗಳೂರಲ್ಲಿ ಸಭೆ….
ಬೆಂಗಳೂರು ಮತ್ತು ದೆಹಲಿಯಲ್ಲಿ ಸಂಬಂದಪಟ್ಟವರಾದ ಎನ್.ಎಚ್.ಎ.ಐ ಹಾಗೂ ನವಯುಗದವರ ಸಭೆ ಕರೆದು ಶಾಶ್ವತ ಪರಿಹಾರಕ್ಕೆ ಕ್ರಮಕೂಗೊಳ್ಖುತ್ತೇವೆಂದು ಸಂಸದರು ಹೇಳಿದರು.
ತಲ್ಲೂರು ಸರ್ಕಲ್ ಸಮಸ್ಯೆ….
ತಲ್ಲೂರು ಸರ್ಕಲ್ ಸಮಸ್ಯೆಯಿಂದ ಕೂಡಿದೆ.ಹಲವು ಸಮಸ್ಯೆಯ ನಡುವೆಯೇ ಶಿರೂರಿನಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದು ಎಷ್ಟು ಸರಿ ಎಂದು ತಾ.ಪಂ ಸದಸ್ಯರಾದ ಕರಣ ಪೂಜಾರಿ, ಪುಷ್ಪರಾಜ ಶೆಟ್ಟಿ ಹೇಳಿದ್ದು ಸರ್ವೀಸ್ ರಸ್ತೆ ಬಗ್ಗೆ ಟೆಂಡರಿನಲ್ಲಿ ಇಲ್ಲ. ಈ ಬಗ್ಗೆ ವ್ಯವಸ್ಥೆ ಮಾಡುತ್ತೇವೆಂದು ಐ.ಆರ್.ಬಿ. ಇಂಜಿನಿಯರ್ ಯೋಗೇಂದ್ರಪ್ಪ ಹೇಳಿದರು. ಶಿರೂರು ಟೋಲ್ ನಲ್ಲಿ ಸ್ಥಳೀಯರಿಗೆ ರಿಯಾಯಿತಿ ನೀಡುವ ಬಗ್ಗೆ ಸ್ಪಷ್ಟಪಡಿಸಿಎಂದು ಸಭೆಯಲ್ಲಿ ಡಿಸಿ ಐ.ಆರ್.ಬಿ.ಗೆ ಸೂಚಿಸಿದರು. ಕುಂದಾಪುರದಿಂದ ಶಿರೂರು ತನಕ ವಾಹನ ಸಂಚಾರ ಮಾಡಲು ಭಯ ಆಗುತ್ತೆ. ಕಾಮಗಾರಿ ಮುಗಿದರೂ ಕೂಡ ಒಂದೇ ರಸ್ತೆಯಲ್ಲಿ ವಾಹನ ಬಿಡುತ್ತಿರುವುದು ಯಾಕೆ ಎಂದು ಡಿಸಿ ಪ್ರಶ್ನಿಸಿದ್ದು ಕೂಡಲೇ ಜನರಿಗೆ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.
ವಿನಾಯಕ ಜಂಕ್ಷನ್ ಯು ಟರ್ನ್….
ವಿನಾಯಕ ಕೋಡಿ ಬಳಿ ಯು ಟರ್ನ್ ನೀಡಬೇಕು ಎಂದು ಮಾಜಿ ತಾ.ಪಂ ಸದಸ್ಯ ಮಂಜು ಬಿಲ್ಲವ ಹೇಳಿದ್ದು ಇದಕ್ಕೆ ಧ್ವನಿಗೂಡಿಸಿದ ಕಾಡೂರು ಸುರೇಶ್ ಶೆಟ್ಟಿ ಯಾವಾಗ ಕೇಳೀದರೂ 75-80% ಕಾಮಗಾರಿ ಆಗಿದೆ ಎಂದು ಹೇಳುತ್ತಾರೆ ಹೊರತು 10 ವರ್ಷ ಕಳೆದರೂ 100% ಕಾಮಗಾರಿ ಆಗುವುದೇ ಇಲ್ಲವೋ ಗೊತ್ತಿಲ್ಲ ಎಂದರು.
ಕಾಮಗಾರಿ ಹೆಸರಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಸರ್ವೀಸ್ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿದ್ದು ಯಾಕೆ ಎಂದು ಕಾಡೂರು ಸುರೇಶ್ ಶೆಟ್ಟಿ ಹೇಳಿದರು.
ಯಾರೋ ಒಬ್ಬಿಬ್ಬರಿಗೆ ಅನುಕೂಲ ಕಲ್ಪಿಸಲು ಅವೈಜ್ಞಾನಿಕವಾಗಿ ಡಿವೈಡರ್ ಹಾಗೂ ಯು ಟರ್ನ್ ನೀಡಬೇಡಿ ಜನರಿಗೆ ಅನುಕೂಲವಾಗುವಂತೆ ಕೆಲಸ ಮಾಡಿ ಎಂದು ಸಂಸದೆ ಹಾಗೂ ಡಿಸಿ ಹೇಳಿದರು.
ರಾಜೇಶ್ ಕಾವೇರಿ ಮಾತು….
640 ಕೋಟಿಯಿಂದ ಕಾಮಗಾರಿ ಆರಂಭಗೊಂಡು 1200 ಕೋಟಿಗೆ ಬಂದು ನಿಂತಿದೆ. ನವಯುಗದವರು ಕೆಲಸವೇ ಮಾಡೊಲ್ಲ, ಕೇವಲ ಸುಳ್ಳು ಹೇಳಿ ತಿರುಗಾಡುತ್ತಾರೆ. ಮಳೆಗಾಲದಲ್ಲಿಅಲ್ಲಲ್ಲಿ ಕೃತಕ ಕೆರೆ ಸೃಷ್ಟಿಯಾಗಿದೆ.
1 ಗಂಟೆ ವಿಳಂಭವಾದ ಸಭೆ….
ಕುಂದಾಪುರದಲ್ಲಿ ಮಧ್ಯಾಹ್ನ 12..30ಕ್ಕೆ ಸಭೆ ನಿಗದಿಯಾಗಿದ್ದು ಅಧಿಕಾರಿಗಳು ಹಾಗೂ ನಾಗರಿಕರು ಬಂದು ಕಾದರು. ಆದರೆ ಸಂಸದರು ಮಾತ್ರ ಒಂದು ತಾಸು ವಿಳಂಭವಾಗಿ ಬಂದು ಸಭೆ ಆರಂಭಿಸಿದರು.
ಸಭೆಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಮೊದಲಾದವರಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.