ಕರಾವಳಿ

ನಾಡಧ್ವಜಕ್ಕೆ ಸಂಬಂಧಿಸಿದ ವಿವಾದ‌ ಅನಗತ್ಯ : ಕಸಾಪ ಅಧ್ಯಕ್ಷ ಎಸ್. ಕಲ್ಕೂರ

Pinterest LinkedIn Tumblr

ಮಂಗಳೂರು : ನಾಡಧ್ವಜಕ್ಕೆ ಸಂಬಂಧಿಸಿದ ವಿವಾದ‌ ಅನಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜವನ್ನು‌ಅಧಿಕೃತವಾಗಿ ಹಾರಿಸುವ ಪರಿಪಾಠ ಸರಕಾರದ‌ ಅಧಿಕೃತ ಮುದ್ರೆಯೊಂದಿಗೆ ಚಾಲ್ತಿಯಲ್ಲಿದೆ. ಕೆಂಪು ಹಾಗೂ ಹಳದಿ ಬಣ್ಣದಿಂದಕೂಡಿದ ಕನ್ನಡ ಧ್ವಜಕನ್ನಡಿಗರ‌ ಅಭಿಮಾನದ ಸಂಕೇತ. ಸಾಹಿತ್ಯ ಸಮ್ಮೇಳನದಲ್ಲೂ ಸಾಹಿತ್ಯ ಪರಿಷತ್ತಿನಧ್ವಜವನ್ನು ಹಾರಿಸುವಂತೆಕನ್ನಡಧ್ವಜವನ್ನೂ ಹಾರಾಡಿಸುವ ಪರಿಪಾಠವಿದೆ.

ಒಂದುರಾಷ್ಟ್ರಕ್ಕೆ‌ಒಂದೇರಾಷ್ಟ್ರಧ್ವಜ, ಒಂದೇ ಲಾಂಛನ‌ಎನ್ನುವುದು ಸಂವಿಧಾನ ಮತ್ತು ಶಾಸನದಲ್ಲಿ‌ಅಂಗೀಕರಿಸಲ್ಪಟ್ಟಿದೆ. ವಿವಿಧ ಭಾಷೆಗಳಿಗೊಂದು (ತುಳು, ಕನ್ನಡ, ಇನ್ನಿತರ)ಧ್ವಜ‌ಎನ್ನುವಕ್ರಮದಿಂದಗೊಂದಲವುಂಟಾಗಿನಾಡಧ್ವಜದಗೌರವಕುಂಠಿತವಾದೀತು. ಈ ನೆಲೆಯಲ್ಲಿಕನ್ನಡಧ್ವಜವನ್ನುಗೌರವಯುತವಾಗಿ, ಪ್ಲಾಸ್ಟಿಕ್ ಮುಕ್ತವಾಗಿ, ಅಲಂಕಾರಿಕವಾಗಿ ಸಂಭ್ರಮದೊಂದಿಗೆ, ಅಭಿಮಾನದಿಂದ ಹಾರಿಸೋಣ.

ಸರಕಾರದ‌ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಧ್ವಜವನ್ನೇ ಹಾರಿಸಿ ಗೌರವಿಸೋಣ. ಕವಿ ಕುವೆಂಪು ಅವರ ನಾಡಗೀತೆಯ‌ ಅಶಯವೂ‌ ಇದೇ‌ ಅಗಿದೆ. ಭಾರತಜನನಿಯತನುಜಾತೆಜಯ ಹೇ ಕರ್ನಾಟಕ ಮಾತೆ. ಯಾವುದೇ ಭಾಷೆಯ ಧ್ವಜಗಳು ತಮ್ಮ‌ಅಭಿಮಾನದ ಸಂಭ್ರಮದ ಸಂಕೇತವಾಗಬೇಕೇ ಹೊರತು ಸಂವಿಧಾನ ಶಾಸನ ರೂಪಿಸಿದ ರಾಷ್ಟ್ರೀಯಗೌರವದ ನೆಲೆಗೆ ಯಾವತ್ತು ಚ್ಯುತಿಯಾಗ ಬಾರದು. ನಾವು ತುಳುವರು ನಾವು ಅನುಷ್ಠಾನದಲ್ಲಿಗಟ್ಟಿಕನ್ನಡಿಗರು ನಾವು ಭಾರತೀಯರು ಸ್ವಾಭಿಮಾನದರಾಷ್ಟ್ರಾಭಿಮಾನದಲ್ಲಿ ನಾವು ಅಗ್ರಗಣ್ಯರು ಎಂದವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.