ಕರಾವಳಿ

ತಪಾಸಣೆ ವೇಳೆ ರಸ್ತೆಗೆ ಬಿದ್ದು ಬೈಕ್ ಸವಾರ ಗಂಭೀರ-ಹೈವೇ ಪಟ್ರೋಲ್ ವಿರುದ್ಧ ಸಾರ್ವಜನಿಕರ ಗರಂ!(Video)

Pinterest LinkedIn Tumblr

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬೈಕನ್ನು ಅಡ್ಡಗಟ್ಟಿದ ಪರಿಣಾಮ ಬೈಕ್ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು ಹೈವೇ ಪಟ್ರೋಲ್ ಎಎಸ್ಐ ಈ ಘಟನೆ ಕಾರಣವೆಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ತೆಕ್ಕಟ್ಟೆ ಸಮೀಪದ ಕನ್ನುಕೆರೆ ಎಂಬಲ್ಲಿ ನಡೆದಿದೆ.

ಉಲ್ಲಾಸ್ ಎಂಬಾತ ಬೈಕಿನಲ್ಲಿ ತೆಕ್ಕಟ್ಟೆಯಿಂದ ಕುಂದಾಪುರದತ್ತ ತೆರಳುತ್ತಿದ್ದ ವೇಳೆ ಕನ್ನುಕೆರೆ ಎಂಬಲ್ಲಿ ಹೈವೇ ಪ್ಯಾಟ್ರೋಲ್ ಪೊಲೀಸರು ಬೈಕ್ ಅಡ್ದಗಟ್ಟಲು ಯತ್ನಿಸಿದಾಗ ಬೈಕ್ ಸವಾರ ಗೋಪಾಡಿ ನಿವಾಸಿ ಉಲ್ಲಾಸ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಆತನನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಪೊಲೀಸ್ ಸಹಾಯಕ ಉಪನಿರೀಕ್ಷಕರು ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

(ಉಲ್ಲಾಸ್)

(ಗಾಯಗೊಂಡ ಎಎಸ್ಐ)

ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಹೈವೇ ಫ್ಯಾಟ್ರೋಲ್ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಬರುವಂತೆ ಆಗ್ರಹಿಸಿದ್ದು ಸ್ಥಳಕ್ಕೆ ಬಂದ ಉಡುಪಿ ಡಿವೈಎಸ್ಪಿ ಟಿ. ಜೈಶಂಕರ್ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಬಂದಪಟ್ಟವರ ವಿರುದ್ಧ ಕ್ರಮದ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಸಮಾಧಾನಗೊಂಡರು. ಸಾರ್ವಜನಿಕರಿಗೆ ಸಮಸ್ಯೆ ನೀಡಿ ದಂಡ ವಸೂಲಿ ಮಾಡಬೇಡಿ, ಬೇಕಾದರೆ ತಿಂಗಳಿಗೆ ನಾವೇ ಹಣ ಒಟ್ಟು ಮಡಿ ಕೊಡುತ್ತೇವೆಂಬ ಆಕ್ರೋಷವೂ ವ್ಯಕ್ತವಾಯಿತು.

ಪ್ರತಿಭಟನೆ ವೇಳೆ ತೆಕ್ಕಟ್ಟೆ ಗ್ರಾ.ಪಂ ಸದಸ್ಯ ವಿನೋದ್ ದೇವಾಡಿಗ, ಮುಖಂಡರಾದ ಅಶೋಕ್ ಪೂಜಾರಿ ಬೀಜಾಡಿ, ಪ್ರಕಾಶ್ ಬೀಜಾಡಿ, ರಮೇಶ್ ಶೆಟ್ಟಿ ವಕ್ವಾಡಿ ಬ್ರಹ್ಮಾವರ ಸಿಪಿಐ ಅನಂತಪದ್ಮನಾಭ, ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.