ಕರ್ನಾಟಕ

ಜಾತಿ ಸೂಚಕ ನಂಬರ್ ಪ್ಲೇಟ್‍ಗಳ ಮೇಲೆ ಪೊಲೀಸರ ಹದ್ದಿನ ಕಣ್ಣು

Pinterest LinkedIn Tumblr

ಜಾತಿವಾದಿ ಮತ್ತಿತರ ಆಕ್ರಮಣಕಾರಿ ಸಂದೇಶ ಬರೆದಿರುವ ಮತ್ತು ಹಾಳಾದ ನಂಬರ್ ಪ್ಲೇಟ್ ಹೊಂದಿರುವ 250ಕ್ಕೂ ಹೆಚ್ಚು ಬೈಕ್ ಮತ್ತು ಇತರೆ ವಾಹನಗಳ ಮಾಲೀಕರಿಗೆ ನೊಯಿಡಾ ಮತ್ತು ಗ್ರೇಟರ್ ನೊಯಿಡಾ ಪೊಲೀಸರು ಶುಕ್ರವಾರ ದಂಡ ವಿಧಿಸಿದ್ದಾರೆ.

ಮುಕ್ತ ಸಂಚಾರಕ್ಕಾಗಿ ಜಿಲ್ಲಾ ಪೊಲೀಸ್ ಹಮ್ಮಿಕೊಂಡಿರುವ ಆಪರೇಷನ್ ಕ್ಲೀನ್ ಕಾರ್ಯಕ್ರಮದಡಿ ಗೌತಮ್ ಬುದ್ಧ ನಗರದಲ್ಲಿ ತಪಾಸಣೆ ನಡೆಸಲಾಗಿದೆ. ನಗರ ಪ್ರದೇಶದ 100 ಮತ್ತು ಗ್ರಾಮೀಣ ಪ್ರದೇಶದ 33 ಒಟ್ಟು 133 ವಾಹನಗಳಿಗೆ ಜಾತಿವಾದಿ ಬರಹ ಹೊಂದಿರುವುಕ್ಕೆ ಚಲನ್ ನೀಡಲಾಗಿದ್ದು, ಆಕ್ರಮಣಕಾರಿ ಸಂದೇಶ ಹೊಂದಿದ ನಗರ ಪ್ರದೇಶದ 78 ಮತ್ತು ಗ್ರಾಮೀಣ ಭಾಗದ 13 ಸೇರಿ ಒಟ್ಟು 91 ವಾಹನಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಹಾನಿಯಾಗಿರುವ ನಂಬರ್ ಪ್ಲೇಟ್ ಹೊಂದಿದ 56 ವಾಹನಗಳ ಮಾಲೀಕರಿಗೂ ದಂಡ ವಿಧಿಸಲಾಗಿದೆ.

Comments are closed.