ಕರಾವಳಿ

ತಲೆ ಭಾಗದಲ್ಲಿ ಗಾಯಗೊಂಡಿದ್ದ ಬೃಹತ್ ಗಾತ್ರದ ‘ಕಾಳಿಂಗ’ ಸರ್ಪ ರಕ್ಷಣೆ (Video)

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ-ಶಂಕರನಾರಾಯಣ ರಾಜ್ಯ ಹೆದ್ದಾರಿ ಬಳಿ ಯಾವುದೋ ವಾಹನ ಹರಿದು ತಲೆ ಭಾಗಕ್ಕೆ ಗಂಭೀರ ಗಾಯಗೊಂಡ ದೈತ್ಯ ಕಾಳಿಂಗ ಸರ್ಪ ರಕ್ಷಣೆ ಮಾಡಿ ಚಿಕಿತ್ಸೆಗೆ ಆಗುಂಬೆ ಬಳೆಕಾಡು ಕಾಳಿಂಗ ಸರ್ಪ ಸಂಶೋದನಾ ಕೇಂದ್ರಕ್ಕೆ ರವಾನಿಸಲಾಗಿದೆ.

ಗಂಭೀರ ಗಾಯಗೊಂಡ ಕಾಳಿಂಗ ರಸ್ತೆ ಬಳಿಯ ಐರ್‌ಬೈಲು ರಾಜೀವ ಶೆಟ್ಟಿ ಎಂಬವರ ತೋಟದ ಬಳಿ ನೀರಿನ ತೋಡಿನ ಪಕ್ಕ ಬೃಹತ್ ಮರದ ಬಳಿ ಆಶ್ರಯ ಪಡೆತ್ತು. ಗಾಯಗೊಂಡ ಕಾಳಿಂಗ ಸರ್ಪದ ಬಗ್ಗೆ ಶಂಕರನಾರಾಯಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅರಣ್ಯ ಇಲಾಖೆ ಕೃಷ್ಣಮೂರ್ತಿ ಹೆಬ್ಬಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪಿವಿಸಿ ಪೈಪ್ ಮೂಲಕ ಸೆರೆ ಹಿಡಿದು ಆಗುಂಬೆ ಸಂರಕ್ಷಣಾ ಕೇಂದ್ರಕ್ಕೆ ಬಿಟ್ಟು ಬಂದಿದ್ದಾರೆ.
ಶಂಕರನಾರಾಯಣ ವಲಯ ಅರಣ್ಯ ಇಲಾಖೆ ಫಾರೆಸ್ಟರ್ ಹರೀಶ್ ಗಾರ್ಡ್ ಗುರುರಾಜ್ ಸಹಕಾರದಲ್ಲಿ ಕೃಷ್ಣಮೂರ್ತಿ ಹೆಬ್ಬಾರ್ ಕಾಳಿಂಗ ಸರ್ಪ ಸೆರೆ ಹಿಡಿದರು.

Comments are closed.