ಕರಾವಳಿ

ಅಂತರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರಿನ ವಿಕಾಸ ಪದವಿಪೂರ್ವ ಕಾಲೇಜಿಗೆ ಪ್ರಥಮ ಸ್ಥಾನ

Pinterest LinkedIn Tumblr

ಮಂಗಳೂರು : ಪದವಿಪೂರ್ವ ಶಿಕ್ಷಣ ಇಲಾಖೆ, ಧಾರವಾಡ ಮತ್ತು ಹಿರೆಮಲ್ಲೂರ್ ಈಶ್ವರನ್ ಪದವಿಪೂರ್ವ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಧಾರವಾಡದ ಆರ್. ಎನ್, ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಅಂತರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಮಂಗಳೂರಿನ ವಿಕಾಸ ಪದವಿಪೂರ್ವ ಕಾಲೇಜು ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು, ಮುಂಬರುವ ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ಆಯ್ಕೆಗೊಂಡಿರುತ್ತದೆ.

ವಿಜೇತ ತಂಡವನ್ನು, ದೈಹಿಕ ಶಿಕ್ಷಕ ನಿರ್ದೇಶಕರು, ಕೋಚ್ ನ್ನು, ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ವರ್ಗ, ಉಪನ್ಯಾಸಕ ವೃಂದ ಅಭಿನಂದಿಸಿರುತ್ತಾರೆ.

Comments are closed.