ರಾಷ್ಟ್ರೀಯ

ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಲು ಹೋಗಿ ಸಾವು ತಂದುಕೊಂಡ ಯುವಕ ! ಹಾವಿನೊಂದಿಗಿನ ಚೆಲ್ಲಾಟದ ಭೀಕರ ವಿಡಿಯೋ ನೋಡಿ

Pinterest LinkedIn Tumblr

ನವದೆಹಲಿ: ರಾತ್ರೋ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗುವ ಉದ್ದೇಶದಿಂದ ವಿಷಜಂತು ಹಾವಿನ ಜೊತೆ ಚೆಲ್ಲಾಟವಾಡಲು ಹೋಗಿ ಯುವಕನೋರ್ವ ಸಾವನ್ನಪ್ಪಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ.

https://www.facebook.com/reptilehunter/videos/743370832776493/?t=46

ವಿಷಪೂರಿತ ಹಾವುಗಳನ್ನು ಹಿಡಿದು ಅವುಗಳನ್ನು ಆಟವಾಡಿಸುವ ವಿಡಿಯೋ ಮಾಡಿ ಅವುಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿ ಹೀರೋ ಆಗುವ ಖಯಾಲಿ ಯುವಕರಲ್ಲಿ ಹೆಚ್ಚಾಗುತ್ತಿದೆ. ಅದೇ ರೀತಿ ಮಾಡಲು ಹೋಗಿ ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.

ಯುವಕನೋರ್ವ ಹಾವೊಂದನ್ನು ಹಿಡಿದು ಅದು ಕಚ್ಚುವಾಗ ತಪ್ಪಿಸಿಕೊಳ್ಳುತ್ತಾನೆ. ಹೀಗೆ ಎರಡು ಮೂರು ಬಾರಿ ತಪ್ಪಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗುತ್ತಾನೆ. ಆದರೆ ವಿಧಿ ಲಿಖಿತ ಬೇರೇಯೆ ಇತ್ತು. ನಾಲ್ಕನೇ ಬಾರಿಗೆ ಹಾವು ಆತನ ತಲೆಗೆ ಬಲವಾಗಿ ಕಚ್ಚಿ ಹಿಡಿಯುತ್ತದೆ. ಕ್ಷಣ ಮಾತ್ರದಲ್ಲೇ ಆತ ಕುಸಿದು ಬಿದ್ದಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ.

Comments are closed.