ಕ್ರೀಡೆ

ವಿಶಿಷ್ಠ ಬೌಲಿಂಗ್ ಶೈಲಿಯ ಮೂಲಕ ಮಿಚಿತ್ತಿರುವ ಮತ್ತೋರ್ವ ಮಲಿಂಗಾ ! ಸಾಧನೆಯ ವೀಡಿಯೊ ನೋಡಿ….

Pinterest LinkedIn Tumblr

ಬೆಂಗಳೂರು: ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಬೌಲರ್​ಗಳ ಪೈಕಿ ಶ್ರೀಲಂಕಾ ತಂಡದ ಯಾರ್ಕರ್ ಕಿಂಗ್ ಲಸಿತ್ ಮಲಿಂಗಾ ಕೂಡ ಒಬ್ಬರು. ತನ್ನ ವಿಶಿಷ್ಠ ಬೌಲಿಂಗ್ ಶೈಲಿಯ ಮೂಲಕವೇ ಎದುರಾಳಿಗರಿಗೆ ಸಿಂಹಸ್ವಪ್ನ ಕಾಡಿದ ಮಾಲಿಂಗಾ ಕ್ರಿಕೆಟ್ ಇತಿಹಾಸದಲ್ಲಿ ತನ್ನದೇ ಆದ ದಾಖಲೆ ಬರೆದಿದ್ದಾರೆ.

ಲಸಿತ್ ಮಲಿಂಗಾ ಈಗಾಗಲೇ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಟಿ-20 ಫಾರ್ಮೆಟ್​ಗೂ ಸದ್ಯದಲ್ಲೇ ವಿದಾಯ ಹೇಳುವ ಅಂದಾಜಿನಲ್ಲಿದ್ದಾರೆ. ಹೀಗಿರುವಾದ ಶ್ರೀಲಂಕಾದಲ್ಲೇ ಮತ್ತೊಬ್ಬ ಮಲಿಂಗಾ ಬೆಳಕಿಗೆ ಬಂದಿದ್ದಾನೆ.

17 ವರ್ಷ ಪ್ರಾಯದ ಮತೀಶ್ ಪತಿರನಾ ಥೇಟ್ ಮಲಿಂಗಾ ರೀತಿಯಲ್ಲೇ ಬೌಲಿಂಗ್ ಮಾಡಿ ಕ್ರಿಕೆಟ್ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಪಂದ್ಯವೊಂದರಲ್ಲಿ ಟ್ರಿನಿಟಿ ಕಾಲೆಜ್ ತಂಡದ ಪರ ಆಡಿದ ಮತೀಶ್ ಪತಿರನಾ ತಮ್ಮ ಯಾರ್ಕರ್ ಬೌಲಿಂಗ್ ಮೂಲಕ ಸುದ್ದಿಯಲ್ಲಿದ್ದಾರೆ.

ಇವರ ಯಾರ್ಕರ್ ಬಾಲ್​ಗೆ ಎದುರಾಳಿ ತಂಡದ ಬ್ಯಾಟ್ಸ್​ಮನ್​ಗಳು ಒಬ್ಬರಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿದ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಕೇವಲ 7 ರನ್​​ಗೆ 6 ವಿಕೆಟ್​ ಕಿತ್ತು ಮತೀಶ್ ಮಿಂಚಿದ್ದಾರೆ.

ಮತೀಶ್ ಈಗಾಗಲೇ ಶ್ರೀಲಂಕಾ ಅಂಡರ್-19 ತಂಡದ ದೇಶೀಯ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.

Comments are closed.