ರಾಷ್ಟ್ರೀಯ

ಮಧ್ಯಪ್ರದೇಶದ ರಾಜಕಾರಣಿಗಳು, ಉನ್ನತ ಅಧಿಕಾರಿಗಳನ್ನೂ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿದ್ದ ಕಿಂಗ್ ಪಿನ್ ಶ್ವೇತಾ ಜೈನ್’ನ ದೊಡ್ಡ ಕನಸು ಏನಾಗಿತ್ತು ಗೊತ್ತೇ…?

Pinterest LinkedIn Tumblr

ಭೂಪಾಲ್: ಮಧ್ಯಪ್ರದೇಶದ ರಾಜಕಾರಣಿಗಳು, ಉನ್ನತ ಅಧಿಕಾರಿಗಳಿಗೆ ಖೆಡ್ಡಾ ತೋಡಿ ದೇಶದಲ್ಲೇ ಭಾರೀ ಸಂಚಲನ ಮೂಡಿಸುತ್ತಿರುವ ಹನಿಟ್ರ್ಯಾಪ್ ಪ್ರಕರಣದ ಕಿಂಗ್ ಪಿನ್ ಶ್ವೇತಾ ಜೈನ್ ಗೆ ರಾಜ್ಯದಲ್ಲೇ ಅತಿ ಪ್ರಭಾವಶಾಲಿಯಾಗಬೇಕು ಎಂಬ ಕನಸು ಇತ್ತು ಎಂದು ಎಸ್ ಐ ಟಿ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ರಾಜಕೀಯ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆಯು ಶ್ವೇತಾ ಜೈನ್ ಯತ್ನಿಸಿದ್ದಳು, ಆದರೆ ಆ ಪ್ರಯತ್ನದಲ್ಲಿ ವಿಫಲವಾದ ನಂತರ ಪ್ರಬವ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಳ್ಳಲು ಮಹಿಳೆಯರನ್ನು ನೇಮಿಸಿಕೊಂಡಳು ಎಂಬುದಾಗಿ ತಿಳಿದು ಬಂದಿದೆ.

ತನ್ನ ಹುಟ್ಟೂರಾದ ಸಾಗರ ತೊರೆದ ಶ್ವೇತಾ ಭೂಪಾಲ್ ನಗರದ ಅರಾರಾ ಕ್ಲಬ್ ಅನ್ನು ತನ್ನ ದಂಧೆಯ ಪ್ರಮುಖ ಸ್ಥಳವನ್ನಾಗಿಸಿಕೊಂಡಳು. ಈ ಕ್ಲಬ್ ನಲ್ಲಿ ಪ್ರಮುಖವಾಗಿ ಪ್ರಭಾವಶಾಲಿ ವ್ಯಕ್ತಿಗಳು ಅದರಲ್ಲೂ ಮುಖ್ಯವಾಗಿ ಉನ್ನತ ಅಧಿಕಾರಿಗಳು ಬರುತ್ತಿದ್ದರು.

ಅಧಿಕಾರಿಗಳಿಗೆ ಆಮೀಷ ಒಢ್ಡಿ, ಅವರ ಜೊತೆ ದೈಹಿಕ ಸಂಪರ್ಕ ಬೆಳೆಸಿಕೊಳ್ಳುತ್ತಿದ್ದಳು. ಅದಾದ ನಂತರ ಅವರ ಜೊತೆ ನಡೆಸಿದ ಲೈಂಗಿಕ ಕ್ರಿಯೆಗಳ ಬಗ್ಗೆ ವಿಡಿಯೋ ಮಾಡಿಟ್ಟುಕೊಂಡು ನಂತರ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು ಮೂಲಗಳು ತಿಳಿಸಿವೆ.

ಐಷಾರಾಮಿ ಜೀವನದ ಆಸೆಯಿಂದಾಗಿ ಅಧಿಕಾರಿಗಳಿಂದ ಐಷಾರಾಮಿ ಕಾರು, ಆಸ್ತಿ, ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ತಿಳಿದು ಬಂದಿದೆ.

ತಮ್ಮ ಪ್ಲಾನ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಪದೇ ಪದೇ ಶ್ವೇತಾ ಜೈನ್ ಮತ್ತವಳ ತಂಡ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳಲು ಮುಂದಾಗುತ್ತಿದ್ದರು. ಹಲವು ಅಧಿಕಾರಿಗಳು ಹಾಗೂ ರಾಜಕಾರಣಿಗಳ ಪ್ರಭಾವದಿಂದ ತನ್ನ ಗಿರಾಕಿಗಳಿಗೆ ದೊಡ್ಡ ದೊಡ್ಡ ಮಟ್ಟದ ಟೆಂಡರ್ ಕೂಡ ಕೊಡಿಸಿದ್ದಳು ಎನ್ನಲಾಗಿದೆ, ಕೆಲವು ಸರ್ಕಾರಿ ಟೆಂಡರ್ ಗಳನ್ನು ಕೊಡಿಸಿದ್ದಳು ಎಂದು ತಿಳಿದು ಬಂದಿದೆ.

ಕಾಲೇಜು ಹುಡುಗಿಯರಿಗೆ ಐಶಾರಾಮಿ ಜೀವನದ ಆಸೆ ತೋರಿಸಿ ಅವರ ಬ್ರೇನ್ ವಾಶ್ ಮಾಡಿ, ಹನಿಟ್ರ್ಯಾಪ್ ದಂಧೆಗೆ ಕರೆತರುತ್ತಾರೆ. ಮೊದಲು 5 ಸ್ಟಾರ್ ಹೋಟೆಲ್, ಗ್ಲಾಮರ್ ಮೂಲಕ ಕಾಲೇಜು ಹುಡುಗಿಯರನ್ನು ಸೆಳೆಯುತ್ತಿದ್ದರು. ಈ ಮೂಲಕ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯನ್ನೂ ಒಳಗೊಂಡಂತೆ, ಸಚಿವರು, ಉನ್ನತ ಅಧಿಕಾರಿಗಳನ್ನು ಹನಿಟ್ರ್ಯಾಪ್‍ಗೆ ಬಲಿಪಶುಗಳನ್ನಾಗಿ ಮಾಡಿದ್ದಾರೆ. ಇದಕ್ಕಾಗಿ 40 ಕಾಲ್ ಗರ್ಲ್ಸ್, ಕಾಲೇಜು ಹುಡುಗಿಯರನ್ನು ಬಳಸಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಸಂಬಂಧ ವಿಶೇಷ ತನಿಖಾ ತಂಡ ಪ್ರಕರಣ ದಾಖಲಿಸಿಕೊಂಡು ಆರು ಮಂದಿಯನ್ನು ವಿಚಾರಣೆಗೊಳಪಡಿಸಿದೆ.

ಇಂಡೋರ್ ನ ಮುನಿಸಿಪಲ್ ಕಾರ್ಪೋರೇಷನ್ ಎಂಜಿನೀಯರ್ ಒಬ್ಬರಿಂದ ಈ ದಂಧೆ ಬೆಳಕಿಗೆ ಬಂದಿದೆ, ಇಬ್ಬರು ಮಹಿಳೆಯರು ತಮ್ಮ ಆಕ್ಷೇಪಾರ್ಹ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ಅವರು ದೂರು ದಾಖಲಿಸಿದ್ದರು. ಇದಾದ ನಂತರ ಅವರನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿತ್ತು.

Comments are closed.