ರಾಷ್ಟ್ರೀಯ

ವಯನಾಡಿನಲ್ಲಿ ಪ್ರವಾಹ ಪರಿಹಾರ ಸ್ಥಿತಿ ಅವಲೋಕಿಸುತ್ತಿದ್ದ ವೇಳೆ ರಾಹುಲ್‌ರನ್ನು ತಬ್ಬಿ ಮುತ್ತುಕೊಟ್ಟ ಯುವಕ!

Pinterest LinkedIn Tumblr

ವೈನಾಡ್: ಕೇರಳದ ವೈನಾಡ್ ನ ಸಂಸದ ರಾಹುಲ್ ಗಾಂಧಿ ಬುಧವಾರ ತಮ್ಮ ಕ್ಷೇತ್ರದ ಪ್ರವಾಸದಲ್ಲಿದ್ದ ವೇಳೆ ಯುವಕನೊಬ್ಬ ಅವರನ್ನು ಚುಂಬಿಸಿದ ವಿಚಿತ್ರ ಘಟನೆ ನಡೆದಿದೆ.

ಎಸ್ ಯುವಿ ನಲ್ಲಿ ತೆರಳುತ್ತಿದ್ದ ಕಾಂಗ್ರೆಸ್ ನಾಯಕನಿಗೆ ಶುಭಾಶಯ ಕೋರುವ ವ್ಯಕ್ತಿಯು ಮೊದಲು ಅವನ ಕೈಯನ್ನು ಕುಲುಕಿದ ನಂತರ ಅವರನ್ನು ತಬ್ಬಿ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ಬೂದು ಬಣ್ಣದ ಟೀ ಶರ್ಟ್‌ ಧರಿಸಿದ್ದ ರಾಹುಲ್‌, ತಮ್ಮ ಕಾರಿನಲ್ಲಿ ಕುಳಿತು ಕಿಟಕಿಯಿಂದ ಜನರತ್ತ ಕೈಬೀಸುವಾಗ ಈ ಘಟನೆ ನಡೆದಿದೆ. ವಿಶೇಷವೆಂದರೆ ರಾಹುಲ್ ಅಚ್ಚರಿಗೊಳಗಾಗಿದ್ದರೂ ಸಹ ಕಿಸ್ ಮಾಡಿದ ವ್ಯಕ್ತಿಯನ್ನು ದೂರ ತಳ್ಳಲಿಲ್ಲ.

ಕಾಂಗ್ರೆಸ್ ಸಂಸದ ಇಂದು ತಮ್ಮ ಕ್ಷೇತ್ರದಲ್ಲಿ ಪ್ರವಾಸ ಮಾಡಿ ವಾಹದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದರು.

ರಾಹುಲ್ ಗಾಂಧಿಗೆ ವ್ಯಕ್ತಿಯೊಬ್ಬ ಕಿಸ್ ಮಾಡುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು ನೀಲಿ ಬಣ್ಣದ ಶರ್ಟ್‌ ಧರಿಸಿರುವ ವ್ಯಕ್ತಿ ಮೊದಲು ಅವರ ಕೈಕುಲುಕಿ ಬಳಿಕ ತಬ್ಬಿ ಕೆನ್ನೆಗೆ ಮುತ್ತಿಕ್ಕಿದ್ದಾನೆ.

ಇದಕ್ಕೆ ಹಿಂದೆ ಫೆ. 14ರ ಪ್ರೇಮಿಗಳ ದಿನದಂದು ಗುಜರಾತಿನಲ್ಲಿ ಚುನಾವಣಾ ರ್ಯಾಲಿಯಲ್ಲಿದ್ದ ರಾಹುಲ್ ಗೆ ಮಹಿಳೆಯೊಬ್ಬರು ಕಿಸ್ ಮಾಡಿದ್ದರು. 2014ರಲ್ಲಿ ರಾಜಕೀಯ ಸಮಾವೇಶದ ಬಳಿಕ ಪಶ್ಚಿಮ ಬಂಗಾಳದ ಸ್ವೀಟ್ ಅಂಗಡಿಗೆ ಆಗಮಿಸಿದ ರಾಹುಲ್ ಗೆ ವ್ಯಕ್ತಿಯೊಬ್ಬ ಕಿಸ್ ಮಾಡಿದ್ದನು.

Comments are closed.