ರಾಷ್ಟ್ರೀಯ

ಸೆಲ್ಫಿ ಹುಚ್ಚು…ಮೇಕೆಯ ಮುಂದೆ ಯುವತಿಯ ಸೆಲ್ಫಿ ! ಮುಂದೆ ಆದದ್ದೇ ಬೇರೆ…! ವೀಡಿಯೊ ವೈರಲ್

Pinterest LinkedIn Tumblr

ನವದೆಹಲಿ: ಸೆಲ್ಫಿಯ ಹುಚ್ಚು ಏನೆಲ್ಲಾ ಅವಾಂತರ ಸೃಷ್ಟಿ ಮಾಡುತ್ತದೆ ಎಂಬುದಕ್ಕೆ ಈಗಾಗಲೇ ಸಾಕಷ್ಟು ಉದಾಹರಣೆಗಳನ್ನು ನೋಡಿದ್ದೇವೆ. ಅನೇಕರು ತಮ್ಮ ಪ್ರಾಣಕ್ಕೆ ಸಂಚಕಾರವನ್ನು ತಂದುಕೊಂಡಿದ್ದಾರೆ. ಸೆಲ್ಫಿ ತೆಗೆಯಲು ಹೋಗಿ ಎಡವಟ್ಟು ಮಾಡಿಕೊಂಡು ಆಸ್ಪತ್ರೆಗೆ ಸೇರಿರುವುದನ್ನು ನೋಡಿದ್ದೇವೆ. ಈಗ ನಾವು ಹೇಳ ಹೊರಟಿರುವ ಸ್ಟೋರಿ ಅದಕ್ಕೆ ಭಿನ್ನವಾಗಿಲ್ಲ.

https://www.facebook.com/foxsanantonio/videos/361346111210216/?t=32

ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿಗೆ ಸಂಬಂಧಪಟ್ಟ ವಿಡಿಯೋವೊಂದು ವೈರಲ್​ ಆಗಿದೆ. ಅದರಲ್ಲಿ ಯುವತಿಯೊಬ್ಬಳು ಕಂಬಕ್ಕೆ ಕಟ್ಟಿದ್ದ ಮೇಕೆಯ ಮುಂದೆ ಸೆಲ್ಫಿ ತೆಗೆಯಲು ಮುಂದಾಗುತ್ತಾಳೆ. ಮೊದಲ ಯುವತಿಯ ಹತ್ತಿರ ಬಂದು ನೋಡುವ ಮೇಕೆ ಆಕೆಯ ವರ್ತನೆಗೆ ಕೋಪಗೊಂಡು ಒಂದು ಬಾರಿ ಆಕೆಗೆ ಗುಮ್ಮಲು ಪ್ರಯತ್ನಿಸುತ್ತದೆ. ಅದು ಸಾಧ್ಯವಾಗದಿದ್ದಾಗ, ಎರಡನೇ ಬಾರಿಯ ಪ್ರಯತ್ನದಲ್ಲಿ ಯುವತಿಯ ತಲೆಗೆ ಗುರಿಯಿಟ್ಟು ಗುಮ್ಮುತ್ತದೆ. ಮೇಕೆಗೆ ಗುದ್ದಿದ ರಭಸಕ್ಕೆ ಯುವತಿ ಕೆಳೆಗೆ ಬೀಳುತ್ತಾಳೆ. ಆದರೆ, ಯುವತಿಗೆ ಗಂಭೀರವಾದ ಗಾಯವಾಗದಿರುವುದು ಅದೃಷ್ಟದ ವಿಚಾರವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ತುಂಬಾ ವೈರಲ್​ ಆಗಿದ್ದು, ಇದುವರೆಗೂ ಆರು ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, ಸಾವಿರಾರು ಮಂದಿ ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ.

Comments are closed.