ಕುಂದಾಪುರ: ರಾಜ್ಯ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ.. ಜೆಡಿಎಸ್, ಕಾಂಗ್ರೆಸ್ ಪಕ್ಷದ ನಾಯಕರೇ ಕಿತ್ತಾಡಿಕೊಳ್ಳುತ್ತಿದ್ದಾರೆ. ಜನ ವಿರೋಧಿ ರಾಜ್ಯ ಸರ್ಕಾರ ಅವರವರ ಕತ್ತಾಟದಲ್ಲಿ ತಾನಾಗೆ ಬೀಳಲಿದ್ದು, ನಾವ್ಯಾಕೆ ಸರ್ಕಾರ ಬೀಳಿಸಬೇಕು. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಜನ ಪ್ರತಿನಿಧಿಗಳ ಅವರವರ ಪಕ್ಷದಲ್ಲಿರುವವರೆಗೆ ಬಿಜೆಪಿ ಸರ್ಕಾರ ಬೀಳಿಸುವ ಕೆಲಸಕ್ಕೆ ಕೈಹಾಕೋಲ್ಲ. ಶಾಸಕರ ಪಕ್ಷ ಬಿಟ್ಟು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕುಂದಾಪುರ ಬಿಜೆಪಿ ಕಚೇರಿಗೆ ಶನಿವಾರ ಭೇಟಿ ನೀಡಿ, ಅಭಿನಂದನೆ ಸ್ವೀಕರಿಸಿ, ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸಮ್ಮಿಶ್ರ ಸರ್ಕಾರ ಸರಿಯಿಲ್ಲ, ನಾಯಕರಲ್ಲೇ ಒಮ್ಮತವಿಲ್ಲದೆ ಕಿತ್ತಾಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಕೋಮದಲ್ಲಿದ್ದು, ಅದನ್ನು ಬೀಳಿಸುವ ಕೆಲಸ ಬಿಜೆಪಿ ಮಾಡೋದಲ್ಲ. ಪಕ್ಷ ತೊರೆದು ಬಂದರೆ, ರಾಜ್ಯ ಸರ್ಕಾರ ಅದಾಗೆ ಬಿದ್ದರೆ ಮುಂದಿನ ಹೆಜ್ಜೆ ಬಗ್ಗೆ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಆಸೆ ಅಮಿಷಗಳ ಒಡ್ಡಿದರೂ ಮೊಗವೀರ ಸಮುದಾಯ ಬಿಜೆಪಿ ಕೈ ಬಿಡಿದಿದ್ದರಿಂದ ದೊಡ್ಡಮಟ್ಟಡ ಅಂತರದಲ್ಲಿ ಗೆಲವು ಸಾಧ್ಯವಾಯಿತು ಎಂದ ಅವರು, ಖಾಸಗಿ ವ್ಯಕ್ತಿಗಳ ಮೂಲಕ ಸರ್ಕಾರ ವಿದ್ಯುತ್ ಖರೀದಿಸುತ್ತಿರುವುದು ಗೊತ್ತಿದ್ದು, ಹೊಳೆ ಸಂಕರನಾರಾಯಣ ಕನ್ಸ್‌ಸ್ಟ್ರೆಕ್ಷನ್ ವಿದ್ಯುತ್ ಖರೀದಿ ಸರ್ಕಾರ ವಹಿಸಿಕೊಳ್ಳುವ ಬಗ್ಗೆ ನ್ಯಾಯಾಲಯದ ನೀಡಿದ ತೀರ್ಪಿನ ಬಗ್ಗೆ ಅರಿವಿಲ್ಲ. ಮಾಹಿತಿ ಪಡೆದು ಮುಂದೆ ಏನು ಮಾಡುಬಹುದು ಎನ್ನುವ ಬಗ್ಗೆ ತೀರ್ಮಾನಕ್ಕೆ ಬರಲಾಗುತ್ತದೆ.
ಜಿಲ್ಲೆಯ ನೀರಿನ ಸಮಸ್ಯೆ ಬಗ್ಗೆ ಒತ್ತು ನೀಡುತ್ತಿದ್ದು, ಕೇಂದ್ರ ಸರ್ಕಾರದ ಅಮೃತ ಜಲ ಯೋಜನೆ ಅನುದಾನ ನೀಡಿದ್ದು, ರಾಜ್ಯ ಸರ್ಕಾರದ ವಿಳಂಬ ನೀತಿಯಿಂದ ನಿಧಾನ ಆಗುತ್ತಿದೆ. ಮೀನುಗಾರಿಕೆ ತೆರೆಳಿ ದುರಂತಕ್ಕೆ ಸಿಕ್ಕಿ ಕಾಣೆಯಾದ ಎಲ್ಲಾ ಮೀನುಗಾರರ ಕುಟಂಬಕ್ಕೆ ಪರಿಹಾರ ನೀಡುವ ಬಗ್ಗೆ ಸಚಿವೆ ನಿರ್ಮಲಾ ಸೀತಾರಮ್ ಜತೆ ಮತನಾಡಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಕುಂದಾಪುರ ಪ್ಲೇ ಓವರ್ ಹಾಗೂ ಹೆದ್ದಾರಿ ಕಾಮಗಾರಿ ನಿಲ್ಲಿಸಿದ್ದು, ಸಚಿವರ ಜತೆ ಮಾತನಾಡಿ ಕಾಮಗಾರಿ ಸಂಪೂರ್ಣ ಮಾಡಲು ಒತ್ತಡ ಹಾಕಲಾಗುತ್ತದೆ ಎಂದರು.

ಉಡುಪಿ, ಚಿಕ್ಕಮಗಳೂರಿನಲ್ಲಿ ಸಂಸತ್ ಅಧಿವೇಶನ ಹೊರತು ಪಡಿಸಿ ಉಳಿದ ದಿನದಲ್ಲಿ ವಾರದಲ್ಲಿ ಒಂದು ದಿನ ಮೀಸಲಿಡಲಾಗುತ್ತದೆ. ಜಿಲ್ಲೆ ಭೇಟಿ ಸಂದರ್ಭದಲ್ಲಿ ತಾಲೂಕು ಕೇಂದ್ರಗಳಿಗೂ ಭೇಟಿ ನೀಡಲಾಗುತ್ತದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಒತ್ತುನೀಡಿ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.ಬಿಜೆಪಿ ಕಚೇರಿ ಆಗಮಿಸಿದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಹಿಳಾ ಮೋರ್ಚಾ ಅಧ್ಯಕ್ಷ ಗುಣರತ್ನಾ ಹಾಗೂ ಜಿಪಂ ಸದಸ್ಯ ಶ್ರೀಲತಾ ಶೆಟ್ಟಿ ಉಡುಪಿ ನಗರಸಭೆ ಸದಸ್ಯ ಆಶ್ವಿನಿ ಅಭಿನಂದಿಸಿದರು.
ಕುಂದಾಪುರ ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ, ಜಿಪಂ ಸದಸ್ಯೆ ಸುಪ್ರಿತಾ, ಕುಂದಾಪುರ ತಾಪಂ ಸದಸ್ಯ ರೂಪಾ ಪೈ, ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಪ್ರಧಾನ ಕಾರ್‍ಯದರ್ಶಿ ಭಾಸ್ಕರ ಬಿಲ್ಲವ, ಶಂಕರ ಅಂಕದಕಟ್ಟೆ, ಪುರಸಭೆ ಮಾಜಿ ಅಧ್ಯಕ್ಷ ಮೋಹನದಾಸ್ ಶೆಣೈ, ಮೀನುಗಾರಿಕಾ ಪ್ರಕೋಷ್ಠ ಅಧ್ಯಕ್ಷ ಸದಾನಂದ ಬಳ್ಕೂರು, ಸುನೀಲ್ ಶೆಟ್ಟಿ ಇದ್ದರು.
Comments are closed.