ರಾಷ್ಟ್ರೀಯ

ತನ್ನ ಸೂಟ್‌ಕೇಸ್ ತಪಾಸಣೆಗೆ ಮುಂದಾದ ಚುನಾವಣಾ ಅಧಿಕಾರಿಗಳ ಮೇಲೆ ಸಿಟ್ಟಾದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ! ವಿಡಿಯೋ ವೈರಲ್!

Pinterest LinkedIn Tumblr

 

ಭುವನೇಶ್ವರ್: ಲೋಕಸಭೆ ಚುನಾವಣಾ ಪ್ರಚಾರದ ವೇಳೆ ತಮ್ಮ ಸೂಟ್‌ಕೇಸ್ ತಪಾಸಣೆಗೆ ಮುಂದಾದ ಚುನಾವಣಾ ಅಧಿಕಾರಿಗಳ ಮೇಲೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಿಟ್ಟಾದ ಪ್ರಸಂಗ ನಡೆದಿದೆ.

ಈ ವೇಳೆ ಅಧಿಕಾರಿಗಳ ಮೇಲೆ ಧರ್ಮೇಂದ್ರ ಪ್ರಧಾನ್ ಗರಂ ಆಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕೇಂದ್ರ ಸಚಿವರ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಧರ್ಮೇಂದ್ರ ವರ್ತನೆ ಖಂಡಿಸಿ ಬಿಜೆಡಿ ಮತ್ತು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೇಂದ್ರ ಸಚಿವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿವೆ.

ಕೆಳ ದಿನಗಳ ಹಿಂದೆ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರದ ವೇಳೆ ಮೋದಿ ಇದ್ದ ಹೆಲಿಕಾಪ್ಟರ್ ನಿಂದ ಟ್ರಂಕ್ ವೊಂದನ್ನು ತರಾತುರಿಯಲ್ಲಿ ಸಾಗಿದ್ದ ವಿಡಿಯೋ ಸಹ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

Comments are closed.