ಕರ್ನಾಟಕ

ಕರ್ನಾಟಕದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಒಟ್ಟಾರೆ ಶೇ.49.26 ರಷ್ಟು ಮತದಾನ

Pinterest LinkedIn Tumblr

ಬೆಂಗಳೂರು: ಲೋಕಸಭಾ ಚುನಾವಣೆಯ 2 ನೇ ಹಂತದ ಮತದಾನದಲ್ಲಿ ಕರ್ನಾಟಕ ಸೇರಿದಂತೆ ದೇಶದ ಒಟ್ಟು 11 ರಾಜ್ಯಗಳಲ್ಲಿ ಮತದಾನ ನಡೆಯುತ್ತಿದ್ದು, ಕರ್ನಾಟಕದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಒಟ್ಟಾರೆ ಶೇ.49.26 ರಷ್ಟು ಮತದಾನ ನಡೆದಿದೆ.

ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಮಾಹಿತಿ ನೀಡಿದ್ದು, ದಕ್ಷಿಣ ಕನ್ನಡ ಗರಿಷ್ಟ ಅಂದರೆ ಶೇ.60.46%ರಷ್ಟು ಮತದಾನ ನಡೆದಿದ್ದರೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅತಿ ಕನಿಷ್ಠ ಅಂದರೆ ಶೇ.36.96 ರಷ್ಟು ಮತದಾನ ನಡೆದಿದೆ.

ಜಿಲ್ಲೆಗಳಲ್ಲಿ ಶೇಕಡಾವಾರು ಮತದಾನದ ವಿವರ
ಹಾಸನ 57.34%
ದಕ್ಷಿಣ ಕನ್ನಡ 60.46%
ಚಿತ್ರದುರ್ಗ 49.25 %
ತುಮಕೂರು 54.68%
ಮಂಡ್ಯ 55.11%
ಮೈಸೂರು 59.39%
ಚಾಮರಾಜನಗರ 51.43%
ಬೆಂಗಳೂರು ಗ್ರಾಮಾಂತರ 44.46%
ಬೆಂಗಳೂರು ಉತ್ತರ 39.07%
ಬೆಂಗಳೂರು ಕೇಂದ್ರ 36.96%
ಬೆಂಗಳೂರು ದಕ್ಷಿಣ 40.58 %

Comments are closed.