ಕರಾವಳಿ

ನಾನು ಮಾಡಿದ ಕೆಲಸ ಹೇಳಿದ್ದೇನೆ ಹೊರತು ಯಾರನ್ನೂ ಠೀಕಿಸಿಲ್ಲ: ಶೋಭಾ ಕರಂದ್ಲಾಜೆ (Video)

Pinterest LinkedIn Tumblr

ಉಡುಪಿ: ನಾನು ವೈಯಕ್ತಿಕವಾಗಿ ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ನಾನು ತಂದ ಅಭಿವೃದ್ಧಿ ವಿಚಾರ ಮಾತ್ರವೇ ಮಾತನಾಡಿದ್ದೇನೆ. ಜಯಪ್ರಕಾಶ್ ಹೆಗ್ಡೆ ನಮ್ಮಪಕ್ಷದ ಹಿರಿಯ ನಾಯಕರಾಗಿದ್ದು ನನ್ನ ಪರ ಪ್ರಚಾರಕ್ಕೂ ಬಂದಿದ್ದು ಅವರ ಬಗ್ಗೆ ಗೌರವವಿದೆ ಎಂದು ಉಡುಪಿ ಚಿಕ್ಕಮಗಳುರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಅವರು ಕುಂದಾಪುರದ ಬಾರ್ ಅಸೋಸಿಯೇಶನ್ ಇಲ್ಲಿಗೆ ಗುರುವಾರ ಮತಯಾಚನೆಗೆ ಬಂದಿದ್ದ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಕಳೆದ ಹಲವು ವರ್ಷಗಳಿಂದ ಈ ಕ್ಷೇತ್ರಕ್ಕೆ ಅಗತ್ಯವಿರುವ ಯೋಜನೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡಿರುವೆ. ಸಖಿ ಸೆಂಟರ್, ಕೇಂದ್ರಿಯ ವಿದ್ಯಾಲಯ, ರಾಷ್ಟ್ರೀಯ ಹೆದ್ದಾರಿ ಅಭಿವ್ರದ್ಧಿ, ಕೊಂಕಣ ರೈಲ್ವೇ ಡಬ್ಬ್ಲಿಂಗ್ ಮತ್ತು ವಿದ್ಯುದೀಕರಣ, ಸಿ.ಆರ್.ಎಫ್ ರಸ್ತೆ ಎರಡು ಕ್ಷೇತ್ರಕ್ಕೆ ಜಾಸ್ಥಿಯಾಗಿದು, ಜಿ.ಟಿಡಿ.ಸಿ., ಪಾಸ್ಪೋರ್ಟ್ ಕಚೇರಿಯನ್ನು ಕ್ಷೇತ್ರಕ್ಕೆ ತಂದಿರುವೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತ್ರವೇ ನಾನು ಹೇಳಿಕೊಂಡಿದ್ದು ಪಾಸ್ಫೊರ್ಟ್ ಕಚೇರಿ ಉದ್ಘಾಟನೆ ದಿನಾಂಕ ಎಲ್ಲರಿಗೂ ತಿಳಿದಿದ್ದು ಅದನ್ನು ಅವರೇ ತಂದಿದ್ದಾರೆಂದರೂ ಕೂಡ ಅವರು ನಮ್ಮದೇ ಪಕ್ಷದವರಾದ ಹಿನ್ನೆಲೆ ನನಗೆ ಅವರ ನಡುವೆ ಕಾಂಪಿಟೇಶನ್ ಇಲ್ಲ. ಈ ಹಿಂದೆ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದರೂ ಕೂಡ ಈಗ ನಮ್ಮ ಪಕ್ಷದ ನಾಯಕರಾಗಿರುವ ಹಿನ್ನೆಲೆ ನಾನು ಅವರ ಯಾವುದೇ ಪ್ರಶ್ನೆಗೆ ಪ್ರತ್ಯುತ್ತರ ನೀಡಲ್ಲ ಎಂದರು.

ಇನ್ನು ಪ್ರಚಾರಕ್ಕೆ ಅವರನ್ನು ಕರೆಯುತ್ತಿಲ್ಲವೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನೇ ಖುದ್ದು ಜಯಪ್ರಕಾಶ್ ಹೆಗ್ಡೆಯವರನ್ನು ಭೇಟಿಯಾಗಿ ಸಹಕಾರ ನೀಡುವಂತೆ ಹೇಳಿದ್ದು ಅವರು ಕೂಡ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಪ್ರಚಾರಕ್ಕೆ ಬಂದಿದ್ದು ಕುಂದಾಪುರಕ್ಕೆ ಅವರನ್ನು ಪ್ರಚಾರಕ್ಕೆ ಕರೆಯದಿರುವ ಬಗ್ಗೆ ಪಕ್ಷದ ಮುಖಂಡರಿಗೆ ಬಿಟ್ಟದ್ದು ಎಂದರು. ಇನ್ನು ಗೋಬ್ಯಾಕ್ ಶೋಭಾ ಅಭಿಯಾನದ ಕುರಿತು ಇಗ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು.

ಈ ಸಂದರ್ಭ ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಮುಖಂಡರಾದ ಸಂಧ್ಯಾ ರಮೇಶ್, ಭಾಸ್ಕರ ಬಿಲ್ಲವ,ಗುಣರತ್ನಾ, ಸಂದೇಶ್ ಶೆಟ್ಟಿ, ಕೆ.ಬಿ. ಶೆಟ್ಟಿ, ಪುರಸಭಾ ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು.

Comments are closed.