ರಾಷ್ಟ್ರೀಯ

ನಕಲಿ ಮತದಾನ ಮತದಾನಕ್ಕೆ ಹೊಸತಂತ್ರ ; ಬಳಕೆಯಾಗುತ್ತಿವೆ ನಕಲಿ ಬೆರಳುಗಳು…!

Pinterest LinkedIn Tumblr

ಕಾಸ್ಮೆಟಿಕ್​ ಬೆರಳುಗಳು ನಿಮಗೆ ನಕಲಿ ಬೆರಳುಗಳು ಎಂಬ ಸಣ್ಣ ಅನುಮಾನ ಕೂಡ ಮೂಡುವುದಿಲ್ಲ. ಈ ಹಿನ್ನೆಲೆ ಈ ಬಗ್ಗೆ ಕೂಡ ಚುನಾವಣಾ ಆಯೋಗ ಕಟ್ಟೆಚ್ಚರ ವಹಿಸಲು ಮುಂದಾಗಿದೆ.

ಚುನಾವಣಾ ಸಮಯದಲ್ಲಿ ನಕಲಿ ಮತದಾನವನ್ನು ತಪ್ಪಿಸಲು ಚುನಾವಣಾ ಆಯೋಗ ಇನ್ನಿಲ್ಲದ ಕ್ರಮಕ್ಕೆ ಮುಂದಾಗಿದೆ. ಆದರೆ, ಕೆಲವು ದುಷ್ಕರ್ಮಿಗಳು ನಕಲಿ ಮತ ಚಲಾಯಿಸುವ ಮೂಲಕ ಚುನಾವಣಾ ಆಯೋಗಕ್ಕೆ ಸವಾಲು ಒಡ್ಡುತ್ತಲೇ ಇರುತ್ತಾರೆ. ನಕಲಿ ಮತದಾರರ ಚೀಟಿಯೊಂದಿಗೆ ನಕಲಿ ಹಕ್ಕು ಚಲಾಯಿಸಲು ಕೆಲವರು ವಾಮಮಾರ್ಗ ಹುಡುಕಿದ್ದಾರೆ. ಅದರಲ್ಲಿ ಮುಖ್ಯವಾಗಿರುವುದು ಕಾಸ್ಮೆಟಿಕ್​ ಬೆರಳುಗಳು.

ಹೌದು ಥೇಟ್​ ಅಸಲಿ ಕೈ ಬೆರಳಿನಂತೆ ಇರುವ ಈ ಬೆರಳುಗಳನ್ನು ತಮ್ಮ ಬೆರಳುಗಳಿಗೆ ಹಾಕಿಕೊಂಡು, ನಕಲಿ ಮತದಾರನ ಚೀಟಿಯೊಂದಿಗೆ ಮತ ಚಲಾಯಿಸುತ್ತಾನೆ. ಆಗ ಬೆರಳಿಗೆ ಹಾಕಿಕೊಂಡ ಕಾಸ್ಮೆಟಿಕೆ ಬೆರಳಿನ ಮೇಲೆ ಶಾಯಿ ಹಾಕುತ್ತಾನೆ. ನಂತರ ಹೊರಗೆ ಬಂದು ಅದನ್ನು ತೆಗೆದು ಬಿಸಾಡಿ, ಮತ್ತೊಂದು ಕಾಸ್ಮೆಟಿಕ್ ಬೆರಳನ್ನು ಸಿಕ್ಕಿಸಿಕೊಂಡು, ಮತ್ತೆ ಮತ ಚಲಾವಣೆ ಮಾಡುತ್ತಾನೆ. ಒಬ್ಬ ವ್ಯಕ್ತಿ ಬೇರೊಬ್ಬರ ಗುರುತಿನ ಪತ್ರದೊಂದಿಗೆ ಹೀಗೆ ಹಲವು ಬಾರಿ ಕಳ್ಳ ಮತದಾನ ಮಾಡುತ್ತಾನೆ. ಈ ಕಾಸ್ಮೆಟಿಕ್​ ಬೆರಳುಗಳು ನಕಲಿ ಬೆರಳುಗಳು ಎಂಬ ಸಣ್ಣ ಅನುಮಾನ ಕೂಡ ಮೂಡುವುದಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕಾಸ್ಮೆಟಿಕ್ ಬೆರಳುಗಳ ಮೇಲೆ ಕಟ್ಟೆಚ್ಚರ ವಹಿಸಲು ಮುಂದಾಗಿದೆ.

ಈ ಬಾರಿ ಚುನಾವಣೆಗಳಲ್ಲಿ ಈ ಕಾಸ್ಮೆಟಿಕ್​ ಬೆರಳುಗಳು ಹೆಚ್ಚು ಸದ್ದು ಮಾಡುವ ಸುಳಿವು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಇದರ ಪರಿಶೀಲನೆಗೆ ಆಯೋಗ ಮುಂದಾಗಿದ್ದು, ಅಧಿಕಾರಿಗಳಿಗೆ ಜಾಗೃತಿ ವಹಿಸುವಂತೆ ಸೂಚನೆ ನೀಡಿದೆ.

ಈ ಕಾಸ್ಮೆಟಿಕ್​ ಬೆರಳುಗಳನ್ನು ಸಾಮಾನ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆ ಮಾಡಲಾಗುತ್ತದೆ. ಅಪಘಾತವಾದ ಸಂದರ್ಭದಲ್ಲಿ ಬೆರಳುಗಳನ್ನು ಕಳೆದುಕೊಂಡವರಿಗಾಗಿ ಈ ಕಾಸ್ಮೆಟಿಕ್​ ಬೆರಳುಗಳನ್ನು ಬಳಕೆ ಮಾಡಲಾಗುತ್ತದೆ. ಆದರೆ. ಈ ಬಾರಿ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಈ ಕಾಸ್ಮೆಟಿಕ್​ ಬೆರಳುಗಳ ದುರುಪಯೋಗದ ಬಗ್ಗೆ ಸುದ್ದಿಗಳನ್ನು ಹರಿಯಬಿಡುತ್ತಿದ್ದಾರೆ. ಈ ಬೆರಳುಗಳು ಯಾವುದೇ ಅನುಮಾನ ಮೂಡಿಸದ ಹಿನ್ನೆಲೆ ಇದನ್ನು ಮತದಾನಕ್ಕೆ ಬಳಸಿ ನಂತರ ಇದನ್ನು ತೆಗೆದು ಮತ್ತೆ ಮತದಾನ ಮಾಡಬಹುದು ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ. ಹೀಗಾಗಿ ಚುನಾವಣಾ ಆಯೋಗ ಕೂಡ ಈ ಬಗ್ಗೆ ಎಚ್ಚೆತ್ತುಕೊಂಡಿದೆ. ಇಂತಹ ಬೆರಳುಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುವ ಕಂಪನಿಗಳು ಯಾರಿಗೆ ಕೊಡುತ್ತಿದ್ದೇವೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂಬ ಆದೇಶ ನೀಡಿದೆ.

Comments are closed.