ರಾಷ್ಟ್ರೀಯ

ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವನ ಮೇಲೆ ಬಿಜೆಪಿ ಕಾರ್ಯಕರ್ತರಿಂದಲೇ ಹಲ್ಲೆ ! ವಿಡಿಯೋ ವೈರಲ್

Pinterest LinkedIn Tumblr

ಜಲಗಾಂವ್: ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಗಿರೀಶ್‌ ಮಹಾಜನ್‌ ಮತ್ತು ಮಾಜಿ ಶಾಸಕ ಬಿ.ಎಸ್‌. ಪಾಟೀಲ್‌ ಅವರ ಮೇಲೆ ಬಿಜೆಪಿ ಕಾರ್ಯಕರ್ತರೇ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದ್ದು, ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

https://twitter.com/ANI/status/1115989367112081409

ಮಹಾರಾಷ್ಟ್ರದ ಅಮಲ್‌ನೀರ್‌ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಬಿಜೆಪಿ ಜಲಗಾಂವ್ ಅಧ್ಯಕ್ಷ ಉದಯ್‌ ವಾಘಾ ಮತ್ತು ಅವರ ಬೆಂಬಲಿಗರು ಬಿಜೆಪಿ ಸಚಿವ ಹಾಗೂ ಶಾಸಕರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಜಲಗಾಂವ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉನ್ಮೇಶ್‌ ಪಾಟೀಲ್‌ ಅವರ ಪರವಾಗಿ ಬುಧವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಈ ಘಟನೆ ನಡೆದಿದೆ.

ಜಲಗಾಂವ್ ಕ್ಷೇತ್ರದಿಂದ ಉದಯ್ ವಾಘಾ ಅವರ ಪತ್ನಿ, ವಿಧಾನ ಪರಿಷತ್ ಸದಸ್ಯೆ ಸ್ಮಿತಾ ವಾಘಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಶಾಸಕ ಉನ್ಮೇಶ್ ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿದೆ.

ನಿನ್ನೆ ನಡೆದ ಸಮಾವೇಶದ ವೇಳೆ, ವಾಘಾ ಮತ್ತು ಅವರ ಬೆಂಬಲಿಗರು ಕೋಪಗೊಂಡು ಪಾಟೀಲ್ ಮೇಲೆ ಹಲ್ಲೆ ನಡೆಸಿದರು. ಈ ವೇಳೆ ಮಹಾಜನ್ ಮಧ್ಯಪ್ರವೇಶಿಸಿದ್ದು, ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

Comments are closed.