ಕರಾವಳಿ

ಕುಂದಾಪುರದಲ್ಲಿ ಸಚಿವೆ& ಮೈತ್ರಿ ಅಭ್ಯರ್ಥಿಯೆದುರೇ ಕಾಂಗ್ರೆಸ್ ಕಾರ್ಯಕರ್ತರ ಭಿನ್ನಮತ ಸ್ಫೋಟ! (Video)

Pinterest LinkedIn Tumblr

ಉಡುಪಿ: ಕುಂದಾಪುರದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡ ಎಂ.ಎ ಗಫೂರ್ ವಿರುದ್ಧ ಸ್ವಪಕ್ಷೀಯರೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ. ಉಸ್ತುವಾರಿ ಸಚಿವೆ ಡಾ. ಜಯಮಾಲಾ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹಾಗೂ ಕಾಂಗ್ರೆಸ್ ಮುಖಂಡರುಗಳ ಉಪಸ್ಥಿತಿಯಲ್ಲೇ ಈ ಘಟನೆ ನಡೆದಿದೆ.

 

ಸಮಾವೇಶ ಆರಂಭದಲ್ಲಿ ಸಚಿವರು ಮಾತನಾಡಿದ್ದು ಅಭ್ಯರ್ಥಿ ಆಗಮನದ ಮೊದಲು ಕಾಂಗ್ರೆಸ್ ಮುಖಂಡ ಎಂ.ಎ ಗಫೂರ್ ಮಾತಿಗಿಳಿದಿದ್ದು ಈ ಸಂದರ್ಭ ಸಭೀಕರಾಗಿದ್ದ ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಅಶೋಕ್ ಶೆಟ್ಟಿ, ಕಾಂಗ್ರೆಸ್ ಕಾರ್ಯಕರ್ತರು ಹೇಗೆ ಕೆಲಸ ಮಾಡಬೇಕೆಂಬುದನ್ನು ಲೆಟರ್ ಹೆಡ್ ರಾಜಕಾರಣಿಗಳಿಂದ ಕಲಿಯಬೇಕಿಲ್ಲ. ನಾವೆಲ್ಲಾ ನಾಯಕರಾದ ಪ್ರತಾಪಚಂದ್ರ ಶೆಟ್ಟರ ಮಾರ್ಗದರ್ಶನದಲ್ಲಿ ಹಲವು ದಶಕಗಳಿಂದ ದುಡಿದವರು. ಪಕ್ಷ ಯಾರ ಮನೆಯ ಆಸ್ತಿಯಲ್ಲ, ಪಕ್ಷ ಇಗ್ಭಾಗ ಮಾಡುವರನ್ನು ನಾವು ಮೆಚ್ಚಲ್ಲ ಎಮ್ದು ವಾಗ್ದಾಳಿ ನಡೆಸಿದರು.

(ಎಂ.ಎ ಗಫೂರ್)

ಉಡುಪಿಯ ಸಮಾರಂಭವೊಂದರಲ್ಲಿ ಹಿರಿಯ ನಾಯಕ ಪ್ರತಾಪಚಂದ್ರ ಶೆಟ್ಟಿಯವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆಂದು ಕಾರ್ಯಕರ್ತರು ಅಸಮಾಧನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಮೈತ್ರಿ ಅಭ್ಯರ್ಥಿ ಆಗಮಿಸುವ ತನಕವೂ ಸುಮಾರು ೧೦ ನಿಮಿಷಗಳ ಕಾಲ ಈ ಆರೋಪದ ವಾಗ್ದಾಳಿ ಮುಂದುವರೆದಿತ್ತು. ಬಳಿಕ ಮಧ್ಯಪ್ರವೇಶಿಸಿದ ಸಚಿವೆ ಡಾ. ಜಯಮಾಲಾ, ಪಕ್ಷ ದೊಡ್ಡದು, ಯಾರೂ ಪಕ್ಷಕ್ಕಿಂತ ದೊಡ್ದವರಲ್ಲ. ಎಲ್ಲಾ ಅಸಮಧಾನ ಮರೆತು ಕೆಲಸ ಮಾಡೋಣ. ಪ್ರತಾಪಚಂದ್ರ ಶೆಟ್ಟರು ಉನ್ನತ ಸ್ಥಾನದಲ್ಲಿರುವ ಶ್ರೇಷ್ಟ ನಾಯಕರು. ನಾವೆಲ್ಲಾ ಅವರ ಮಾರ್ಗದರ್ಶನದಲ್ಲಿಯೇ ಕೆಲಸ ಮಾಡೋಣ ಎಂದು ಕಾರ್ಯಕರ್ತರಿಗೆ ಸಮಾಧಾನಪಡಿಸಿದ್ದಲ್ಲದೇ ಕಾರ್ಯಕರ್ತರ ಜೊತೆ ಕುಳಿತುಕೊಳ್ಳಲು ಮುಂದಾದಾಗ ಸಮಾಧನಗೊಂಡ ಕಾರ್ಯಕರ್ತರು ಜಯಮಾಲಾರ ಮಾತಿಗೆ ಒಪ್ಪಿದ್ದು ಜಯಮಾಲ ಸಭೆಯಲ್ಲಿ ಕೂತರು. ಬಳಿಕ ಕಾರ್ಯಕ್ರಮ ಮುಂದುವರೆಯಿತು.

Comments are closed.