ರಾಷ್ಟ್ರೀಯ

ತಾನು ಹೇಳಿದಂತೆ ಕೇಳಲಿಲ್ಲ ಎಂದುಆನೆಯನ್ನು ಸರಪಳಿಯಿಂದ ಕಟ್ಟಿಹಾಕಿ ಹೊಡೆದು ಮಾರಣಾಂತಿಕ ಹಿಂಸೆ ! ವಿಡಿಯೋ ವೈರಲ್!

Pinterest LinkedIn Tumblr

ತ್ರಿಶೂರ್: ದೈತ್ಯ ಆನೆಯನ್ನು ಸರಪಳಿಯಿಂದ ಕಟ್ಟಿಹಾಕಿ ಹೊಡೆದು ಮಾರಣಾಂತಿಕವಾಗಿ ಹಿಂಸೆ ನೀಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೇರಳದ ತ್ರಿಶೂರ್ ಜಿಲ್ಲೆಯಲ್ಲಿನ ದೇವಸ್ತಾನದ ಮಾಜಿ ಆನೆಯೊಂದನ್ನು ದುಷ್ಕರ್ಮಿಗಳು ಮರದ ದಿಮ್ಮಿಯನ್ನು ಬಳಸಿ ಕಾಲಿನ ಮೇಲೆ ಹೊಡೆದಿದ್ದಾರೆ. ನೋವಿನಿಂದ ಆನೆ ಜೋರಾಗಿ ಕೂಗಿಕೊಂಡರು ದುಷ್ಕರ್ಮಿಗಳ ಮನಸ್ಸು ಕರಗಲಿಲ್ಲ. ಕೊನೆಗೆ ಆನೆ ನೆಲದ ಮೇಲೆ ಬೀಳುವವರೆಗೂ ಆನೆಯನ್ನು ಹೊಡೆದಿದ್ದಾರೆ.

ತಾನು ಹೇಳಿದಂತೆ ಕೇಳಲಿಲ್ಲ ಎಂದು ಆನೆಗೆ ಹೊಡೆದಿರುವ ವಿಡಿಯೋವನ್ನು ವೈರಲ್ ಆಗಿದ್ದು ಇದನ್ನು ಗಮನಿಸಿದ ಏಷಿಯನ್ ಎಲಿಫೆಂಟ್ ಸೊಸೈಟಿಯ ಕಾರ್ಯಕರ್ತರು ಆನೆಯನ್ನು ರಕ್ಷಿಸಿ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇನ್ನು ಆನೆಗೆ ಹೊಡೆಯುತ್ತಿರುವ ವಿಡಿಯೋವನ್ನು ನೋಡಿದ ನೆಟಿಗರು ತೀವ್ರವಾಗಿ ಖಂಡಿಸಿದ್ದು ದುಷ್ಕರ್ಮಿಗಳ ನಡೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.