ರಾಷ್ಟ್ರೀಯ

ತಲೆ ಮೇಲೆ ಟ್ರಕ್ ಚಕ್ರ ಹರಿದರೂ ಪವಾಡ ಸದೃಶ್ಯ ಬದುಕುಳಿದ ಬೈಕ್ ಸವಾರ ! ವಿಡಿಯೋ ವೈರಲ್

Pinterest LinkedIn Tumblr

ಮುಂಬೈ: ಬೈಕ್ ಸವಾರರ ಎಡವಟ್ಟುಗಳು ಕೆಲವೊಮ್ಮೆ ಜೀವಕ್ಕೆ ಕುಂದು ತರುತ್ತದೆ. ಆದರೆ ಈ ಬೈಕ್ ಸವಾರ ಸಂಚಾರಿ ನಿಯಮ ಪಾಲಿಸಿದ್ದರಿಂದ ತಲೆ ಮೇಲೆ ಟ್ರಕ್ ಚಕ್ರ ಹರಿದರೂ ಪವಾಡ ಸದೃಶ್ಯ ಬದುಕುಳಿದಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

https://twitter.com/rtr_ips/status/1083395789030739968

ಹೌದು, ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದರಿಂದ ಭಾರೀ ತೂಕದ ಟ್ರಕ್ ಚತ್ರ ತಲೆ ಮೇಲೆ ಹರಿದರೂ ಬದುಕು ಉಳಿದಿದ್ದಾನೆ. ಈ ವಿಡಿಯೋವನ್ನು ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಾಗಪುರದ ಐಪಿಎಸ್ ಅಧಿಕಾರಿ ರಾಜ್ ತಿಲಕ್ ರೋಶನ್ ಈ ವಿಡಿಯೋವನ್ನ ಟ್ವೀಟ್ ಮಾಡಿದ್ದಾರೆ.

ಬೈಕ್ ಸವಾರನೊಬ್ಬ ಟ್ರಕ್ ಅನ್ನು ಹಿಂದಿಕ್ಕಲು ಹೋಗಿ ಆಯ ತಪ್ಪಿ ಕೆಳಗೆ ಬೀಳುತ್ತಾನೆ. ಆಗ ಟ್ರಕ್ ನ ಚಕ್ರ ಆತನ ತಲೆ ಮೇಲೆ ಹರಿಯುತ್ತದೆ. ನೋಡುಗರಿಗೆ ಸವಾರನ ತಲೆ ಜಜ್ಜಿ ಹೋಗಿರಬೇಕು ಎಂದು ಅನಿಸುತ್ತದೆ. ಆದರೆ ಅವನು ಹೆಲ್ಮೆಟ್ ಧರಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ತಲೆಯ ಮೇಲೆ ಟ್ರಕ್ ಚಕ್ರ ಹರಿದಿದ್ದರಿಂದ ಹೆಲ್ಮೆಟ್ ಒಡೆದು ಹೋಗಿದ್ದು ಆದರೆ ಬೈಕ್ ಸವಾರ ಮಾತ್ರ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾನೆ. ಇದರಿಂದಾಗಿ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಸೂಕ್ತ.

Comments are closed.