ಹೈದರಬಾದ್: ತಾನು ಲೋಕಾಯುಕ್ತದಲ್ಲಿದ್ದಾಗ ಭ್ರಷ್ಟ ರಾಜಕಾರಣಿಗಳನ್ನು ಜೈಲಿಗಟ್ಟಿದ್ದ ಕರ್ನಾಟಕದ ರೀಯಲ್ ಸಿಂಗಂ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರಿಗೆ ಇಷ್ಟದ ಹಾಡು ಹಾಡುವ ಮೂಲಕ ಅವರ ಕಿರಿಯ ಸಹೋದ್ಯೋಗಿ ಕಣ್ಣೀರ ಜೊತೆ ನಮನ ಸಲ್ಲಿಸಿದ್ದಾರೆ.

ನಲ್ಲಿ ಶನಿವಾರ ಅವರ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದು ಈ ಸಂದರ್ಭದಲ್ಲಿ ಸಹೋದ್ಯೋಗಿ ಪವನ್ ಕುಮಾರ್ ಅವರು ಮಧುಕರ್ ಅವರ ಇಷ್ಟವಾದ ಹಿಂದಿ ಹಾಡೊಂದನ್ನು ಹಾಡಿ ಕಣ್ಣೀರಿನ ವಿದಾಯ ತಿಳಿಸಿದ್ದಾರೆ. ಬಿಕ್ಕಿ ಬಿಕ್ಕಿ ಅಳುತ್ತಾ ಹೇಳುತ್ತಿದ್ದ ಪವನ್ ಹಾಡಿಗೆ ಅಂತಿಮ ದರ್ಶನ ಪಡೆಯಲು ಬಂದಿದ್ದ ಜನರು ಹಾಗೂ ಇತರೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ದುಃಖತಪ್ತರಾದರು. ಹೀಗೆ ಕಣ್ಣಿರ ಜೊತೆ ಹಾಡು ಹೇಳಿದ ಪವನ್ ಕುಮಾರ್ ಅವರು 2009ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಖ್ಯಾತ ಪತ್ರಕರ್ತರಾಗಿದ್ದ ಉಡುಪಿ ಜಿಲ್ಲೆಯ ವಡ್ಡರ್ಸೆ ರಘುರಾಮ್ ಶೆಟ್ಟಿಯವರ ಪುತ್ರ ಮಧುಕರ್ ಕೇವಲ 47 ವರ್ಷ ವಯಸ್ಸಾಗಿತ್ತು. ಎಚ್1ಎನ್1 ಹಾಗೂ ಶ್ವಾಸಕೋಶ ಸಂಬಂದಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಶುಕ್ರವಾರ ರಾತ್ರಿ ವಿಧಿವಶರಾಗಿದ್ದರು. ಇಂದು ರಾತ್ರಿ ಅವರ ಪಾರ್ಥೀವ ಶರೀರ ಉಡುಪಿ ಜಿಲ್ಲೆ ಕುಂದಾಪುರದ ಯಡಾಡಿಗೆ ಆಗಮಿಸಲಿದೆ. ಭಾನುವಾರ ನಿವಾಸ ಯಡಾಡಿಯ ಮನೆ ಮುಂಭಾಗದ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿರಿ:
ನಾಳೆ ಯಡಾಡಿಯಲ್ಲಿ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಂತ್ಯಕ್ರಿಯೆ(Video)
ಎಚ್1ಎನ್1ನಿಂದ ಬಳಲುತ್ತಿದ್ದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ
ಅನಾರೋಗ್ಯಕ್ಕೆ ತುತ್ತಾದ ಐಪಿಎಸ್ ಅಧಿಕಾರಿ ಡಾ. ಮಧುಕರ್ ಶೆಟ್ಟರ ಆರೋಗ್ಯ ವೃದ್ಧಿಗೆ ಪ್ರಾರ್ಥನೆ
Comments are closed.