ಕರಾವಳಿ

ಕುಂದಾಪುರ: ಹಾರ್ಡ್‌ವೇರ್ ಅಂಗಡಿಯ ಪಿಕ್‌ಅಪ್ ವಾಹನ ಎಸ್ಕೇಪ್! (Video)

Pinterest LinkedIn Tumblr

ಕುಂದಾಪುರ: ಹಾರ್ಡ್‌ವೇರ್ ಅಂಗಡಿಯ ಬಳಿ ಗೋಡಾನಿನಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನ ಕಳವುಗೈದು ಪರಾರಿಯಾದ ಘಟನೆ ಕುಂದಾಪುರದ ಸಂತೆ ಮಾರ್ಕೇಟ್ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಶ್ರೀ ಬಾಲಾಜಿ ಟ್ರೆಡರ್‍ಸ್‌ನಲ್ಲಿ ಭಾನುವಾರ ಮುಂಜಾನೆ ವೇಳೆ ನಡೆದಿದೆ.

ಕೆ. ಲಕ್ಷ್ಮೀನಾರಾಯಣ ಭಂಡಾರ್ಕರ್ ಮಾಲಿಕತ್ವದ ಬಾಲಾಜಿ ಟ್ರೆಡರ್‍ಸ್ ಎನ್ನುವ ಕಟ್ಟಡ ಸಾಮಾಗ್ರಿಗಳ ಮಾರಾಟ ಮಳಿಗೆಯ ಪಕ್ಕದ ಗೋದಾಮಿನಲ್ಲಿ ಈ ಪಿಕಪ್ ವಾಹನ ನಿಲ್ಲಿಸಲಾಗಿತ್ತು. ಅಂದಾಜು 2 ಗಂಟೆ ಸುಮಾರಿಗೆ ಆಗಮಿಸಿದ ಅಪರಿಚಿತ ವ್ಯಕ್ತಿಯೋರ್ವ ಪಿಕಪ್ ವಾಹನದಲ್ಲಿದ್ದ 6 ಚೀಲ ಸಿಮೆಂಟ್ ಕೆಳಕ್ಕೆಸೆದು ಬಳಿಕ ಪಿಕಪ್ ವಾಹನ ಚಲಾಯಿಸಿಕೊಂಡು ಪರಾರಿಯಾದ ದ್ರಶ್ಯ ಸಿ.ಸಿ. ಟಿವಿಯಲ್ಲಿ ದಾಖಲಾಗಿದೆ. ಕೆ.ಎ.-20-ಬಿ-9170 ನೋಂದಣಿಯ ಪಿಕಪ್ ವಾಹನ ಇದಾಗಿದ್ದು ಅಂಗಡಿಯಲ್ಲಿ ಕಟ್ಟಡ ಸಾಮಾಗ್ರಿ ಸಾಗಾಟಕ್ಕೆ ಬಳಸುತ್ತಿದ್ದ ವಾಹನವಾಗಿತ್ತು.

ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರಿದಿದೆ.

Comments are closed.