ಮನೋರಂಜನೆ

ಈ ವಾರ ಬಿಗ್ ಬಾಸ್ ಮನೆಯಿಂದ ಕಣ್ಣೀರು ಹಾಕುತ್ತಲೇ ಹೊರಹೋದ ಆನಂದ್

Pinterest LinkedIn Tumblr

ನೋಡು ನೋಡುತ್ತಿದ್ದಂತೆ ಬಿಗ್ ಬಾಸ್ ಆರನೇ ಆವೃತ್ತಿ 7ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಆನಂದ್ ಹೊರ ನಡೆದಿದ್ದಾರೆ.

ನವೀನ್, ರಾಕೇಶ್, ಕವಿತಾ, ಜಯಶ್ರೀ, ಆನಂದ್, ಸೋನು ನಾಮಿನೇಟ್ ಆಗಿದ್ದರು. ಕಳೆದ ವಾರ ಜಿಮ್‌ ರವಿ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದರು.

ಶನಿವಾರ ಎಲಿಮಿನೇಷನ್ ರೌಂಡ್ ಇರುವ ಕಾರಣ ಸಹಜವಾಗಿ ಬಿಗ್‌ ಬಾಸ್ ಮನೆಯಲ್ಲಿ ಒಂದು ರೀತಿ ಬಿಗುವಿನ ವಾತಾವರಣ ಆವರಿಸಿತ್ತು.

ಇಡೀ ವಾರ ನಡೆದ ವಿವಾದಗಳ ಸಂಬಂಧ ಶನಿವಾರ ಚರ್ಚೆ ನಡೆಯಿತು. ವೇದಿಕೆ ಮೇಲೆ ಆಗಮಿಸಿದ ಸುದೀಪ್ ವಿವಾದಗಳನ್ನು ಜಾಗರೂಕತೆಯಿಂದ ನಿಭಾಯಿಸಿದರು.

ವಾರದಲ್ಲಿ ಉಂಟಾದ ಅಸಮಾಧಾನ, ಭಿನ್ನಾಭಿಪ್ರಾಯಗಳನ್ನು ಸುದೀಪ್ ತಮ್ಮದೇ ಶೈಲಿಯಲ್ಲಿ ತಿಳಿಗೊಳಿಸಿದರು.

ಜಯಶ್ರೀ, ಕವಿತಾ, ರಾಕೇಶ್, ನವೀನ್ ಸೇಫ್ ಜೋನ್ ಸೇರಿದರೆ, ಸೋನು ಹಾಗೂ ಆನಂದ್ ನಡುವೆ ಸ್ಪರ್ಧೆ ಏರ್ಪಟ್ಟು ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಕೊನೆಗಳಿಗೆಯಲ್ಲಿ ಸೋನು ಸೇಫ್ ಆದರೆ, ಆನಂದ್ ಮನೆಯಿಂದ ಹೊರ ನಡೆಬೇಕಾಯಿತು.

Comments are closed.