ಕರಾವಳಿ

ಕುಂದಾಪುರ ಹಳೆಅಳಿವೆ ಸಮುದ್ರದಲ್ಲಿ ಕೈರಂಪಣಿ ಬಲೆಗೆ ಬಿತ್ತು ರಾಶಿಗಟ್ಟಲೇ ಬೈಗೆ (ಬೂತಾಯಿ) ಮೀನು! (Video)

Pinterest LinkedIn Tumblr

ಕುಂದಾಪುರ: ಇಲ್ಲಿನ ಕೋಟೇಶ್ವರದ ಹಳೆ‌ಅಳಿವೆ ಕಡಲತೀರದಲ್ಲಿ ಬೀಸಿದ ಕೈರಂಪಣಿ ಬಲೆಗೆ ರಾಶಿಗಟ್ಟಲೆ ಬೂತಾಯಿ ಮೀನು ಸಿಕ್ಕಿದ್ದು ಮೀನುಗಾರರು, ಮತ್ಸ್ಯಪ್ರಿಯರ ಮುಖದಲ್ಲಿ ಸಂತಸ ಮೂಡಿದೆ.

ಬುಧವಾರ ಬೀಸಿದ ಕೈರಂಪಣಿ ಬಲೆಗೆ ನಾಲ್ಕು ಲಕ್ಷಕ್ಕೂ ಮಿಕ್ಕಿ ಮೀನುಗಳು ಸಿಕ್ಕಿದ್ದವು. ಆದರೆ ಬಲೆ ಎಳೆಯಲು ಕಡಿಮೆ ಸಂಖ್ಯೆಯಲ್ಲಿ ಮೀನುಗಾರರಿದ್ದರಿಂದಾಗಿ ಹೆಚ್ಚಿನ ಮೀನುಗಳು ಬಲೆಯಿಂದ ತಪ್ಪಿಸಿಕೊಂಡು ಹೋಗಿವೆ. ಸ್ಥಳೀಯರು, ಕೆಲಸಕ್ಕೆ ಹೋಗುವವರು ಮೀನುಗಾರರ ನೆರವಿಗೆ ಧಾವಿಸಿದ್ದರಿಂದಾಗಿ ಸುಮಾರು ೭೦,೦೦೦ ಕ್ಕೂ ಅಧಿಕ ಬೈಗೆ ಮೀನುಗಳು ಮೀನುಗಾರರ ಪಾಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಬೈಗೆ ಮೀನುಗಳು ಸಮುದ್ರದಡದಲ್ಲಿ ಬಂದು ಬಿದ್ದಿದ್ದರಿಂದ ಸಾರ್ವಜನಿಕರು ಮುಗಿಬಿದ್ದು ಚೀಲದಲ್ಲಿ ತುಂಬಿಕೊಳ್ಳುತ್ತಿರುವ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇತ್ತೀಚೆಗೆ ಹೆಜಮಾಡಿ, ಪಡುಬಿದ್ರೆ ಕೈರಂಪಣಿ ಬಲೆಗೆ ಬಿಳಿ ಮೀನುಗಳು ಬಿದ್ದಿದ್ದು, ಭಾರೀ ಸುದ್ದಿಯಾಗಿತ್ತು. ಕುಂದಾಪುರ ಕನ್ನಡದಲ್ಲಿ ಬೂತಾಯಿ ಮೀನಿಗೆ ಬೈಗೆ ಎಂದು ಕರೆಯುತ್ತಾರೆ. ಔಷದೀಯ ಗುಣ ಹೊಂದಿರುವ ಈ ಮೀನುಗಳನ್ನು ಕರಾವಳಿ ಮಂದಿ ತುಂಬಾ ನೆಚ್ಚಿಕೊಳ್ಳುತ್ತಾರೆ. ಅಲ್ಲದೇ ಈ ಮೀನು ವಿದೇಶಕ್ಕೂ ರಫ್ತಾಗುವುದು ಮತ್ತೊಂದು ವಿಶೇಷ.

Comments are closed.