ಕರಾವಳಿ

ಶಾಸಕ ಕಾಮತ್‌ರಿಂದ “ಸಪ್ತಾಚೆ ಸಂತ್ ” ಸಾವಯವ / ಸ್ವಾವಲಂಬಿ ಸಂತೆ ಉದ್ಘಾಟನೆ

Pinterest LinkedIn Tumblr

ಮಂಗಳೂರು : ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಅಖಂಡ ಭಜನಾ ಸಪ್ತಾಹ ಪ್ರಯುಕ್ತ ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನ ಮತ್ತು ಶ್ರೀ ವೆಂಕಟರಮಣ ದೇವಸ್ಥಾನದ ಸಹಯೋಗದೊಂದಿಗೆ ” ಸಪ್ತಾಚೆ ಸಂತ್ ” ಸಾವಯವ / ಸ್ವಾವಲಂಬಿ ಸಂತೆಯ ಉದ್ಘಾಟನೆಯು ಮಂಗಳೂರು ದಕ್ಷಿಣ ಶಾಸಕರಾದ ಡಿ ವೇದವ್ಯಾಸ್ ಕಾಮತ್ ರವರು ನಡೆಸಿಕೊಟ್ಟರು.

ಏಳು ದಿನಗಳ ಪರ್ಯಂತ ನಡೆಯಲಿರುವ ಸಪ್ತಾಹ ಸಂದರ್ಭದಲ್ಲಿ ಶಾಸಕರು ಮಾತನಾಡುತ್ತ ನಗರದ ವಿವಿಧ ಪ್ರದೇಶಗಳಿಂದ ಸಾವಯವ ವಸ್ತುಗಳಿಂದ ತಯಾರಿಸಲ್ಪಟ್ಟ ಆಹಾರ ಪದಾರ್ಥಗಳು, ಮಹಿಳೆಯರು ತಮ್ಮ ತಮ್ಮ ಮನೆಯಲ್ಲೇ ತಯಾರಿಸಿದ ದಿನ ನಿತ್ಯ ವಸ್ತುಗಳು, ಮಹಿಳೆಯರು / ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ವ್ಯಾಪಾರ / ವ್ಯವಹಾರ ನಡೆಸಲು ಪ್ರೋತ್ಸಹ ನೀಡುವ ದ್ರಿಷ್ಟಿಯಿಂದ ಈ ” ಸಪ್ತಾಚೆ ಸಂತ್ ” ಸಾವಯವ / ಸ್ವಾವಲಂಬಿ ಸಂತೆ ನಡೆಸುತಿರುವ ಬಗ್ಗೆ ಆಯೋಜಕರಿಗೆ ಅಭಿನಂದಿಸಿದರು.

ಸಾರ್ವಜನಿಕರು ಇದರ ಸದುಪಯೋಗ ಪಡಕೊಂಡು ಸಮಾಜದ ಸ್ವಾವಲಂಬಿ ಸಂತೆಗೆ ಪ್ರೋತ್ಸಹಿಸಬೇಕೆಂದು ತಿಳಿಸಿದರು . ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರ ಜಿ ಹನುಮಂತ ಕಾಮತ್ , ಭಾಸ್ಕರ್ ಚಂದ್ರ ಶೆಟ್ಟಿ , ವಸಂತ ಪೂಜಾರಿ, ಮಂಗಲ್ಪಾಡಿ ನರೇಶ್ ಶೆಣೈ, ಗುರುಪುರ್ ಗೋಕುಲ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.