ರಾಷ್ಟ್ರೀಯ

ಗುಜರಾತಿನ ಸಚಿವಾಲಯದ ಆವರಣದಲ್ಲಿ ಪ್ರತ್ಯಕ್ಷವಾದ ಚಿರತೆ: ಸಿಬ್ಬಂದಿಗಳು ಕಂಗಾಲು; ವೀಡಿಯೋ ನೋಡಿ….

Pinterest LinkedIn Tumblr

ಅಹಮದಾಬಾದ್: ಸೋಮವಾರ ಮುಂಜಾನೆ ಗುಜರಾತ್ ಸಚಿವಾಲಯ ಸಿಬ್ಬಂದಿಗಳು ಅನಿರೀಕ್ಷಿತ ಅತಿಥಿಯ ಆಗಮನದಿಂದ ಕಂಗಾಲಾಗಿದ್ದರು. ಚಿತರೆಯೊಂದು ಗುಜರಾತಿನ ಉನ್ನತ-ಭದ್ರತಾ ಸಔಲಭ್ಯ ಹೊಂದಿರುವ ಸರ್ಕಾರಿ ಸಚಿವಾಲಯ ಆವರಣ ಪ್ರವೇಶಿಸಿತ್ತು. ಇದು ಅಲ್ಲಿನ ಸಿಬ್ಬಂದಿಗಳ ಆತಂಕಕ್ಕೆ ಕಾರಣವಾಗಿದ್ದು ಸಧ್ಯ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ಮತ್ತು ಪ್ರಧಾನ ಕಾರ್ಯದರ್ಶಿ ಕಚೇರಿಗಳು,ತರ ಮಂತ್ರಿಗಳು, ಹಿರಿಯ ಅಧಿಕಾರಿಗಳು ಮತ್ತು ಸರ್ಕಾರಿ ಇಲಾಖೆಗಳ ಕಛೇರಿಗಳು ಸಹ ಇದೇ ಆವರಣದಲ್ಲಿದೆ.

ಚಿರತೆಯು ಗೇಟ್ ಅಡಿಯಿಂದ ನುಸುಳುತ್ತಿರುವ ಚಿರತೆಯ ಚಿತ್ರ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಸೋಮವಾರ ಬೆಳಗಿನ ಜಾವ ಚಿರತೆ ಸಚಿವಾಲಯ ಆವರಣ ಹೊಕ್ಕಿದೆ.

ಚಿರತೆ ಪತ್ತೆಯಾಗುವವರೆಗೆ ಸಚಿವಾಲಯ ಕಟ್ಟಡವನ್ನು ಹಗೂ ಇದರ ಆವರಣಕ್ಕೆ ಯಾರೂ ಪ್ರವೇಶಿಸಬಾರದು ಎಂದು ಸಚಿವಾಲಯದ ನೌಕರರು ಮತ್ತು ಅಧಿಕಾರಿಗಳು ಕೇಳಿಕೊಂಡಿದ್ದಾರೆ.

“ಚಿರತೆ ದಾರಿ ತಪ್ಪಿ ಬಂದಿರಬಹುದು.ನಾವು ಆದಷ್ಟು ಶೀಘ್ರವಾಗಿ ಅದನ್ನು ಹಿಡಿಯಲಿದ್ದೇವೆ” ಅರಣ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಾಜೀವ್ ಕುಮಾರ್ ಗುಪ್ತಾ ಹೇಳಿದರು.

ಚಿರತೆಗಳು ರಾಜ್ಯ ರಾಝಧಾನಿ ಗಾಂಧಿನಗರದ 40 ರಿಂದ 50 ಚದರ ಕಿ.ಮೀ ವ್ಯಾಪ್ತಿಯಲ್ಲಿ ಕಂಡುಬರುವ ವನ್ಯಜೀವಿಗಳಾಗಿದೆ ಎಂದು ಅವರು ತಿಳಿಸಿದ್ದಾರೆ.

Comments are closed.