ಕರ್ನಾಟಕ

ಅಪಘಾತವೊಂದರಲ್ಲಿ ಮೃತಪಟ್ಟ ಪತಿ; ಆತನ ಅಂಗಾಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದ 8 ತಿಂಗಳ ಗರ್ಭಿಣಿ !

Pinterest LinkedIn Tumblr

ಬೆಂಗಳೂರು: ಮಗು ಜನನದ ನಿರೀಕ್ಷೆಯಲ್ಲಿದ್ದ 8 ತಿಂಗಳ ಗರ್ಭಿಣಿಗೆ ಪತಿಯ ದುರ್ಮರಣ ಸುದ್ದಿ ಬರ ಸಿಡಿಲಂತೆ ಬಂದೊರಗಿತ್ತು. ಪತಿಯ ಸಾವಿನಲ್ಲಿಯೂ ಗೃಹಿಣಿ ಆತನ ಅಂಗಾಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗರ್ಭೀಣಿಯ ಪತಿಗೆ ಸ್ಪರ್ಶ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಪತಿ ಬದುಕಿ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಗರ್ಭೀಣಿ ಮಹಿಳೆ ದಿನ ದೂಡುತ್ತಿದ್ದರು. ಆದರೆ ಶನಿವಾರ ನಿರೀಕ್ಷೆ ಹುಸಿಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಪತಿ ಮೃತಪಟ್ಟಿದ್ದರು.

ಪತಿಯ ಸಾವಿನ ಸುದ್ದಿ ಕೇಳಿದ್ದ ಪತ್ನಿಗೆ ಶಾಕ್ ಆಗಿತ್ತು. ಪತಿಯ ನೋವಿನಿಂದ ಎದೆಗುಂದದೆ ಗೃಹಿಣಿ ಪತಿಯ ಕಿಡ್ನಿ, ಹೃದಯ ಹಾಗೂ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಅವರ ನಿರ್ಧಾರದಿಂದಾಗಿ ಇಂದು ನಾಲ್ಕೈದು ಜನರಿಗೆ ಮರು ಜೀವ ಸಿಕ್ಕಂತಾಗಿದೆ.

Comments are closed.