ಕರ್ನಾಟಕ

ದಾವಣಗೆರೆಯಲ್ಲಿ ಸಾಲ ಮಂಜೂರಾತಿ ಮಾಡಲು ಮಹಿಳೆಯನ್ನು ಮಂಚಕ್ಕೆ ಕರೆದ ಬ್ಯಾಂಕ್ ಮ್ಯಾನೇಜರ್ ಬಂಧನ!

Pinterest LinkedIn Tumblr

ದಾವಣಗೆರೆ: ಸಾಲ ಮಂಜೂರು ಮಾಡಲು ಲೈಂಗಿಕ ಸಂಬಂಧ ಹೊಂದುವಂತೆ ಅರ್ಜಿದಾರ ಮಹಿಳೆಯನ್ನು ಪೀಡಿಸುತ್ತಿದ್ದ ಖಾಸಗಿ ಬ್ಯಾಂಕ್ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕ್ ಮ್ಯಾನೇಜರ್ ನಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದ ಮಹಿಳೆ ಬ್ಯಾಂಕಿನಿಂದ ಆತ ಹೊರಗಡೆ ಬಂದ ನಂತರ ಕಟ್ಟಿಗೆ ಹಾಗೂ ಮರಗಳಿಂದ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯಲ್ಲಿ ಈ ಘಟನೆ ನಡೆದಿತ್ತು. ಮಂಚಕ್ಕೆ ಕರೆದಿದ್ದ ಬ್ಯಾಂಕ್ ಮ್ಯಾನೇಜರ್ ಮನೆಗೆ ಹೋದ ಮಹಿಳೆ, ನಂತರ ಆತನನ್ನು ಮನೆಯಿಂದ ಹೊರಗಡೆ ಎಳೆದುಕೊಂಡು ಬಂದಿತ್ತು ಹಲ್ಲೆ ನಡೆಸಿದ್ದರು.

ಸಾಲ ಮಂಜೂರು ಮಾಡಲು ತನ್ನೊಂದಿಗೆ ಮಲಗುವಂತೆ ಬ್ಯಾಂಕ್ ಮ್ಯಾನೇಜರ್ ಕರೆಯುತ್ತಿದ್ದ ಎಂದು ಆ ಮಹಿಳೆ ವಿಡಿಯೋದಲ್ಲಿ ಆರೋಪ ಮಾಡಿದ್ದರು. ದಾಳಿ ಮಾಡಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬ್ಯಾಂಕ್ ಮ್ಯಾನೇಜರ್ ಕೂಡಾ ಬೇಡಿಕೊಳ್ಳುತ್ತಿದದ್ದು ವಿಡಿಯೋದಲ್ಲಿತ್ತು.

ನಂತರ ಆ ಬ್ಯಾಂಕ್ ಮ್ಯಾನೇಜರ್ ನನ್ನು ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.

ಅಧಿಕಾರಿ ಸೇವೆಯಿಂದ ವಜಾ
ದಾವಣಗೆರೆಯಲ್ಲಿ ನಡೆದಿರುವುದು ದುರದೃಷ್ಠ ಘಟನೆ. ಅನುಚಿತವಾಗಿ ವರ್ತಿಸಿರುವ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ವಜಾ ಮಾಡಲಾಗಿದೆ. ಡಿಎಚ್ ಎಫ್ ಎಲ್ ಮಹಿಳೆಯರ ಸುರಕ್ಷತೆಗೆ ಬದ್ಧವಾಗಿದ್ದು ಮಹಿಳಾ ಸುರಕ್ಷತಾ ವಾತಾವರಣವನ್ನು ಉತ್ತೇಜಿಸುತ್ತದೆ. ಈ ಕುರಿತು ತನಿಖೆ ನಡೆಸುವ ಸಂಸ್ಥೆಗೆ ಡಿಎಚ್ ಎಫ್ ಎಲ್ ಎಲ್ಲಾ ರೀತಿಯ ಸಹಕಾರ ನೀಡಲಿದೆ.

Comments are closed.