ರಾಷ್ಟ್ರೀಯ

ಸಣ್ಣ ವಿಷಯಕ್ಕೆ ಬಿಗ್ ಫೈಟ್ ! ಗನ್ ತೆಗೆದು ಬೆದರಿಸಿದ ಬಿಎಸ್ ಪಿ ಮಾಜಿ ಸಂಸದ ರಾಕೇಶ್ ಪಾಂಡೇ ಪುತ್ರ ಆಶಿಶ್ ಪಾಂಡೇ; ವಿಡಿಯೋ ವೈರಲ್

Pinterest LinkedIn Tumblr

ನವದೆಹಲಿ: ಕ್ಷುಲ್ಲಕ ವಿಚಾರಕ್ಕೆ ಉಂಟಾಗಿದ್ದ ಜಗಳದಲ್ಲಿ ಬಿಎಸ್ ಪಿ ನಾಯಕನ ಪುತ್ರನೋರ್ವ ಸಾರ್ವಜನಿಕವಾಗಿಯೇ ಗನ್ ತೆಗೆದು ಬೆದರಿಕೆ ಹಾಕಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಬಿಎಸ್ ಪಿ ಮಾಜಿ ಸಂಸದ ರಾಕೇಶ್ ಪಾಂಡೇ ಪುತ್ರ ಆಶಿಶ್ ಪಾಂಡೇ ಸಾರ್ವಜನಿಕವಾಗಿಯೇ ಗನ್ ತೆಗೆದು ಬೆದರಿಕೆ ಹಾಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿಯ ಪಂಚತಾರಾ ಹೋಟೆಲ್ ವೊಂದಕ್ಕೆ ತನ್ನ ಸ್ನೇಹಿತೆಯೊಂದಿಗೆ ಬಂದಿದ್ದ ಆಶೀಶ್ ಪಾಂಡೇ ಅಲ್ಲಿನ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಅಲ್ಲಿದ್ದ ಜೋಡಿಯೊಂದಿಗೆ ಖ್ಯಾತೆ ತೆಗೆದಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಜಟಾಪಟಿಗೆ ಮುಂದಾಗಿದ್ದು, ಆಕ್ರೋಶಗೊಂಡ ಆಶೀಶ್ ಪಾಂಡೆ ತಮ್ಮ ಟೀಶರ್ಟ್ ನೊಳಗೆ ಇಟ್ಟಿದ್ದ ಗನ್ ತೆಗೆದು ಬೆದರಿಕೆ ಹಾಕಿದ್ದಾರೆ.

ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶ ಮಾಡಿದ್ದಾರೆಯಾದರೂ ಅವರಿಗೂ ಆಶೀಶ್ ಪಾಂಡೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯನ್ನು ಅಲ್ಲಿದ್ದ ಮಹಿಳೆಯೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಹೊಟೆಲ್ ನ ಭದ್ರತಾ ಸಿಬ್ಬಂದಿಗಳು ಪೊಲೀಸರಿಗೆ ದೂರು ನೀಡಿದ್ದು, ಆಶಿಶ್ ಪಾಂಡೇ ವಿರುದ್ಧ ಶಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆಯಡಿಯಲ್ಲಿ ಮತ್ತು ಐಪಿಸಿಯ ಹಲವು ಕಾಯ್ದೆಗಳಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

Comments are closed.