ಕರ್ನಾಟಕ

ಶಿವಮೊಗ್ಗ ಉಪಚುನಾವಣೆಯ ಅಖಾಡದಲ್ಲಿರುವ ಬಿಜೆಪಿಯ ರಾಘವೇಂದ್ರ- ಜೆಡಿಯು ಅಭ್ಯರ್ಥಿ ಮಹಿಮಾ ಜೆ.ಪಟೇಲ್ ಆಸ್ತಿ ಎಷ್ಟು ಗೊತ್ತೇ..?

Pinterest LinkedIn Tumblr

ಶಿವಮೊಗ್ಗ: ಲೋಕಸಭೆ, ವಿಧಾನಸಭೆ ಉಪ ಚುನಾವಣೆ ಕಾವು ಹೆಚ್ಚಾಗತೊಡಗಿದ್ದು, ಈ ನಡುವೆ ಶಿವಮೊಗ್ಗ ಲೋಕಸಭಾ ಉಪಚುನಾವಣೆ ಕಣದಲ್ಲಿ ಕೋಟ್ಯಾಧಿಪತಿ ಅಭ್ಯರ್ಥಿಗಳು ನಿಂತಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹಾಗೂ ಜೆಡಿಯು ಅಭ್ಯರ್ಥಿ ಮಹಿಮಾ ಜೆ.ಪಟೇಲ್ ಆಸ್ತಿ ಘೋಷಿಸಿದ್ದಾರೆ.

ಬಿ.ವೈ. ರಾಘವೇಂದ್ರ ಅವರು ರೂ.51.63 ಕೋಟಿ ಆಸ್ತಿ ಒಡೆಯರಾಗಿದ್ದು, ತಮ್ಮ ಪತ್ನಿ ತೇಜಸ್ವಿನಿ ಹೆಸರಿನಲ್ಲಿ ಒಟ್ಟು ರೂ.6.96 ಕೋಟಿ ಆಸ್ತಿ ಇರುವುದಾಗಿ ನಾಮಪತ್ರ ಸಲ್ಲಿಸಿ ಘೋಷಿಸಿದ್ದಾರೆ.

ರಾಘವೇಂದ್ರ ಒಟ್ಟು ರೂ.28.92 ಕೋಟಿ ಮೌಲ್ಯದ ಚರಾಸ್ತಿ, ರೂ.2.71 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಒಬ್ಬ ಪುತ್ರನ ಹೆಸರಿನಲ್ಲಿ ರೂ.14.06 ಲಕ್ಷ ಮೌಲ್ಯದ ಚರಾಸ್ತಿ, ರೂ.4.32 ಲಕ್ಷ ಮೌಲ್ಯದ ಸ್ಥಿರಾಸ್ತಿ ಹಾಗೂ ಇನ್ನೋರ್ವ ಪುತ್ರನ ಹೆಸರಿನಲ್ಲಿ ರೂ.10.81 ಲಕ್ಷ ಮೌಲ್ಯದ ಚರಾಸ್ತಿ ಇದೆ ಎಂದು ಹೇಳಿಕೊಂಡಿದ್ದಾರೆ.

ಇದರಂತೆ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಹಿಮಾ ಜೆ.ಪಟೇಲ್ ಕೂಡ ಕೋಟಿ ಆಸ್ತಿಯ ಒಡೆಯರಾಗಿದ್ದಾರೆ.

ಮಹಿಮಾರ ಒಟ್ಟು ಚರಾಸ್ತಿ ಮೌಲ್ಯ ರೂ.1.19 ಲಕ್ಷ, ಪತ್ನಿ ಶೈಲಜಾ ಬಳಿ ರೂ.87078 ಲಕ್ಷ ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿ ಇದ್ದು, ಪ್ರಸ್ತುತ ಅಂದಾಜು ಮಾರುಕಟ್ಟೆ ಮೌಲ್ಯದಂತೆ ಮಹಿಮಾ ಪಟೇಲ್ ಬಳಿ ರೂ.4.92 ಕೋಟಿ ಹಾಗೂ ಪತ್ನಿ ಬಳಿ ರೂ.4.63 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್’ನಲ್ಲಿ ತಿಳಿಸಿದ್ದಾರೆ.

Comments are closed.