ಕರಾವಳಿ

`ಕಿಡಿ ಕಾರಿದ ಕೋಟ’: ಸಿಎಂ ಆದೇಶಿಸಿದರೂ ಮರಳು ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೇನು ಸಮಸ್ಯೆ?

Pinterest LinkedIn Tumblr

ಕುಂದಾಪುರ: ಮರಳುಗಾರಿಕೆಗೆ ಅನುಮತಿ ನೀಡಲು ನೀತಿ ಸಂಹಿತೆ ಅಡ್ಡ ಬರುವುದಾದರೆ ಬಡವನ ಮನೆ ತೆರವು ಕಾರ್ಯ ನಡೆಸಲು ನೀತಿ ಸಂಹಿತೆ ಅಧಿಕಾರಿಗಳಿಲ್ಲವೇ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.

ಕುಂದಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎರಡು ಜಿಲ್ಲೆಯ ೧೩ ಶಾಸಕರು, ನಾಲ್ವರು ವಿಧಾನ ಪರಿಷತ್ ಸದಸ್ಯರು, ಉಡುಪಿ ಮತ್ತು ದ.ಕ. ಜಿಲ್ಲೆಯ ಉಸ್ತುವಾರಿ ಸಚಿವರು, ಗಣಿ ಇಲಾಖೆಯ ಮಂತ್ರಿಗಳೆಲ್ಲರ ಸಮಕ್ಷಮ ಸಿಎಂ ಹೊತೆ ಮಾತುಕತೆ ನಡೆದಾಗ ಮರಳು ದಿಬ್ಬ ಗುರುತಿಸುವಿಕೆ, ಇಂಜಿನಿಯರ್ ವಿಭಾಗದ ಪರಿಶೀಲನೆ ಸೇರಿದಂತೆ ಅ.೧೫ರೊಳಗೆ ಎಲ್ಲಾ ಪ್ರಕ್ರಿಯೆ ಮುಗಿಸಿ ೧೬ಕ್ಕೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮರಳು ನೀಡಬೇಕೆಂಬ ತೀರ್ಮಾನವಾಗಿತ್ತು. ಅಲ್ಲಿಯವರೆಗೆ ಬಡವರಿಗೆ ಮನೆ ನಿರ್ಮಾಣಕ್ಕೆ ಸಹಕಾರವಾಗುವಂತೆ ಸಣ್ಣ ವಾಹನಗಳಲ್ಲಿ ಮರಳುಗಾರಿಕೆ ನಡೆಸಿದರೆ ಅದನ್ನು ತಡೆಯಬಾರದೆಂದು ಎರಡು ಜಿಲ್ಲೆಯ ಎಸ್ಪಿ ಹಾಗೂ ಡಿಸಿಯವರಿಗೂ ಸಿಎಂ ಆದೇಶಿಸಿದರೂ ಕೂಡ ಅಧಿಕಾರಿಗಳು ಸುತ್ತೋಲೆ ಬೇಕೆನ್ನುವ ನೆಪವೊಡ್ಡುತ್ತಿದ್ದು ಸುತ್ತೋಲೆಯನ್ನು ಮುಖ್ಯಮಂತ್ರಿಗಳ ಬಳಿಯೇ ಕೇಳಿ ಎಂದು ಕೋಟ ತಾಕೀತು ಮಾಡಿದರು.

ನಮ್ಮ ಮೇಲೆ ಕೇಸು ಹಾಕುವ ಷಡ್ಯಂತ್ರ?
ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ದೌರ್ಜನ್ಯವೆಸಗುತ್ತಿದ್ದಾರೆ ಅವರ ಮೇಲೆ ಕೇಸು ಹಾಕಿಯೆಂದು ಯಾರೋ ಸಂಸ್ಥೆಯರೊಬ್ಬರು ಯಾರಿಗೋ ದೂರು ನೀಡಿದ್ದಾರೆ ಇದು ನೋವಿನ ಸಂಗತಿಯಾಗಿದ್ದು ಸಾಮಾನ್ಯ ಜನರ ಸಹಕಾರಕ್ಕೆ ಕೆಲಸ ಮಾಡುವ ನಾವುಗಳು ಇನ್ನೇನು ಮಾಡಬೇಕು ಎನ್ನುವುದೇ ತಿಳಿಯುತ್ತಿಲ್ಲ.

ಬಡವರು ಮನೆ ಕಟ್ಟಲು ಮರಳು ತೆಗೆಯುವಾಗ ಸಮಸ್ಯೆ ಮಾಡಿದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆಂದು ಸಿಎಂ ಆದೇಶದ ಬಳಿಕವೂ ಕೂಡ ಬಡವನೊಬ್ಬ ಮನೆ ಕಟ್ಟಲು ಮರಳು ತೆಗೆಯುವಾಗಲೇ ತಹಶಿಲ್ದಾರ್ ದಾಳಿ ನಡೆಸಿ ಮರಳು ತಗೆಯುವಾತನನ್ನೇ ಬಂಧಿಸುವ ಪ್ರಕ್ರಿಯೆ ನಡೆಯುತ್ತಿದ್ದು ಸಂಪೂರ್ಣ ಜಿಲ್ಲೆಯಲ್ಲಿ ಶಾಸಕಾಂಗದ ಬದಲು ಅಧಿಕಾರಿಗಳ ಸ್ವೇಚ್ಚಾಚಾರದ ಆಡಳಿತ ನಡೆಯುವುದು ಸರಿಯಲ್ಲ ಎಂದು ಕಿಡಿ ಕಾರಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.