ಕರ್ನಾಟಕ

ದಾವಣಗೆರೆಯಿಂದ ಭರಮಸಾಗರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಮಂಗನ ಕೈಗೆ ಸ್ಟಿಯರಿಂಗ್ ಕೊಟ್ಟ ಚಾಲಕ ! ವಿಡಿಯೋ ವೈರಲ್‌ ಆಗುತ್ತಿದ್ದಂತೆ ಚಾಲಕ ವಜಾ

Pinterest LinkedIn Tumblr

ದಾವಣಗೆರೆ: ಕೋತಿಯೊಂದು ಚಾಲಕನೊಂದಿಗೆ ಸ್ಟಿಯರಿಂಗ್‌ ಮೇಲೆ ಕುಳಿತು ತಾನೂ ಡ್ರೈವಿಂಗ್‌ ಮಾಡಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ವಿಡಿಯೋ ವೈರಲ್‌ ಆಗುತ್ತಿದ್ದಂತೆ ದಾವಣಗೆರೆ ಸಾರಿಗೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಮಾತ್ರವಲ್ಲದೆ ಚಾಲಕನನ್ನು ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ವಜಾ ಮಾಡಿದ್ದಾರೆ.

ದಾವಣಗೆರೆಯಿಂದ ಭರಮಸಾಗರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕರೊಬ್ಬರೊಂದಿಗೆ ಬಂದಿದ್ದ ಕೋತಿ ನೇರವಾಗಿ ಸ್ಟಿಯರಿಂಗ್‌ ಮೇಲೆ ಕುಳಿತು ತಾನೂ ಡ್ರೈವರ್‌ನೊಂದಿಗೆ ಡ್ರೈವಿಂಗ್‌ ಮಾಡಿ ಪ್ರಯಾಣಿಕರಿಗೆಲ್ಲಾ ಭರ್ಜರಿ ಮನರಂಜನೆ ನೀಡಿತ್ತು.

ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ತಾಣಗಳಲ್ಲಿ ಹರಿಯ ಬಿಟ್ಟಿದ್ದರು. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಚಾಲಕ ಸಂಕಷ್ಟಕ್ಕೆ ಸಿಲುಕಿದ್ದಾನೆ.

Comments are closed.