ಕರಾವಳಿ

“ಹಿ ಈಸ್ ಬ್ಯಾಕ್” : ಚೀತಾ ಯಜ್ಞೇಶ್ ಶೆಟ್ಟಿ ಅವರ ನಿರ್ದೇಶನದಲ್ಲಿ ಹಾಲಿವುಡ್ ಚಿತ್ರ ನಿರ್ಮಾಣಕ್ಕೆ ಸಿದ್ಧತೆ

Pinterest LinkedIn Tumblr

ಮಂಗಳೂರು: ಇದೇ ಮೊದಲ ಬಾರಿಗೆ ಮುಂಬಾಯಿಯಲ್ಲಿ ನೆಲೆಸಿರುವ ಮಂಗಳೂರು ಮೂಲದ ಯಜ್ಞೇಶ್ ಶೆಟ್ಟಿ ಅವರು ಹಾಲಿವುಡ್​ ಸಿನಿಮಾವೊಂದನ್ನು ನಿರ್ದೇಶಿಸಲು ಹೊರಟಿದ್ದಾರೆ.ಮಂಗಳೂರು ಚೀತಾ ಎಂದೆ ಹೆಮ್ಮೆಯಿಂದ ಕರೆಯಿಸಿಕೊಳ್ಳುವ ಬಾಲಿವುಡ್​​​ನ ಫೈಟ್ ಮಾಸ್ಟರ್, ಮಾರ್ಷಲ್ ಆರ್ಟಿಸ್ಟ್ ಚೀತಾ ಯಜ್ಞೇಶ್ ಶೆಟ್ಟಿ ಅವರ ನಿರ್ದೇಶನದಲ್ಲಿ ಹಾಲಿವುಡ್ ಚಿತ್ರವೊಂದರ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ.

ಯಜ್ಞೇಶ್ ಬಾಲಿವುಡ್ ಬಹುತೇಕ ಮೇರು ನಟರಿಗೆ ಫೈಟ್ ಮಾಸ್ಟರ್ ಆಗಿ ಕೆಲಸ ನಿರ್ವಹಿಸಿದವರು. ಬಾಲಿವುಡ್ ಮಾತ್ರವಲ್ಲ ಹಾಲಿವುಡ್​​​ಗೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಾಲಿವುಡ್​​​​​​ನಲ್ಲಿ ಪ್ರಖ್ಯಾತವಾದ ‘ಲೈಫ್ ಆಪ್ ದಿ ಪೈ’ ಸಿನಿಮಾದಲ್ಲಿ ಯಜ್ಞೇಶ್ ತರಬೇತಿ ನೀಡಿದ್ದ ಅವರ ಶಿಷ್ಯ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ತಾವೇ ಸ್ವತಃ ಹಾಲಿವುಡ್ ಸಿನಿಮಾವೊಂದನ್ನು ನಿರ್ದೇಶಿಸಲು ಹೊರಟಿರುವ ಬಗ್ಗೆ ಅವರು ತಿಳಿಸಿದ್ದಾರೆ.

ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಯಜ್ಞೇಶ್ ಶೆಟ್ಟಿ ಅವರು, ‘ಹಿ ಈಸ್ ಬ್ಯಾಕ್’ ಎಂಬ ಹಾಲಿವುಡ್ ಚಿತ್ರಕ್ಕೆ ದುಬೈನ ಬುರ್ಜ್ ಖಲೀಫಾದಲ್ಲಿ ಸೆಪ್ಟೆಂಬರ್ 19 ರಂದು ಈಗಾಗಲೇ ಮುಹೂರ್ತ ಜರುಗಿದೆ. ಮಾರ್ಷಲ್ ಆರ್ಟ್ ದೊರೆ ಬ್ರೂಸ್ ಲೀ ಗೌರವಾರ್ಥ ಈ ಹಾಲಿವುಡ್ ಸಿನಿಮಾ ನಿರ್ದೇಶನಕ್ಕಿಳಿದಿದ್ದು, ಈ ಸಿನಿಮಾಗೆ 2019 ರಲ್ಲಿ ಶೂಟಿಂಗ್ ಆರಂಭಿಸಿ ಅದೇ ವರ್ಷ ವಿಶ್ವಾದ್ಯಂತ ಬಿಡುಗಡೆಗೊಳಿಸಲು ಯೋಜಿಸಿರುವುದಾಗಿ ತಿಳಿಸಿದ್ದಾರೆ.

ಚಿತ್ರದಲ್ಲಿ ಅಪ್ಘಾನಿಸ್ಥಾನದ ಅಬ್ ಲೀ ನಾಯಕನಾಗಿ, ರಷ್ಯಾದ ಮಾಜಿ ಅಧ್ಯಕ್ಷರ ಪುತ್ರಿ ನಾಯಕಿಯಾಗಿ ನಟಿಸಲಿದ್ದಾರೆ. ಸುಮಾರು 80-100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಈ ಚಿತ್ರವನ್ನು ಸುರೇಶ್ ಶರ್ಮ, ಸುರೇಶ್ ಬಾಬು ಮಲ್ಗೆ ಮತ್ತು ಹಾಲಿವುಡ್ ಕಂಪನಿಯೊಂದು ನಿರ್ಮಾಣ ಮಾಡುತ್ತಿದೆ. ಅಮರ್ ಜಿತ್ ಶೆಟ್ಟಿ ಕೋ ಪ್ರೊಡ್ಯೂಸರ್ ಆಗಿದ್ದಾರೆ ಎಂದವರು ತಿಳಿಸಿದ್ದಾರೆ.

ಮಂಗಳೂರಿನ ಹಲವಾರು ಮಂದಿ ಬಾಲಿವುಡ್​​​​​​​​​​​​​​​​​​​​​​ನಲ್ಲಿ ಮಿಂಚುತ್ತಿದ್ದು, ಹಿಂದಿ ಸಿನಿಮಾ ಇಂಡಸ್ಟ್ರಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ಮಂಗಳೂರಿನಿಂದ ಬಾಲಿವುಡ್ ಸಿನಿಮಾಕ್ಕೆ ಅಗ್ರ ಕೊಡುಗೆ ನೀಡಿದ ಚೀತಾ ಯಜ್ಞೇಶ್ ಶೆಟ್ಟಿ ಹಾಲಿವುಡ್ ಸಿನಿಮಾ ನಿರ್ದೇಶನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Chitah Yajnesh Shetty to direct a Hollywood film “HE IS BACK”, Honoring Bruce Lee

19th Sep 2018 at Burj Khalifa, Dubai, UAE.

Chitah Yajnesh Shetty debuts in film direction with a Hollywood film titled ‘HE IS BACK’ weaved around  Martial art, presented by Showtime Sinema & SBM Pvt Ltd in association with Ninjoor Pictures, produced by Suresh Sharma & Suresh Babu Malge,

The movie “HE IS BACK“ was launched at  Armani  Burj Khalifa,

Introducing Abb Li (popularly known as Afgan Bruce Lee)  and Alina Lliumzhinova.

The film cast is all set to have actors from Hollywood and China on-board.

Her Royal Excellencey of Thailand Mom Luang Rajadarasri Jayankura, Ex-President of Kalmakiya (Russian Federation) Mr. Kirsan Ilyumzhino, Prince Firooz AS, member of Royal Institute of British Architects from England, Thomas Fung, Chairman of City Credit Capital (UK) ltd UK, Edmond Nercez from Belgium, Edmond Avakian CEO Avakian Group of Companies GENEVA  supported the film overwhelmingly.

Dr. BR Shetty, an eminent personality of UAE graced the Film Muhurath by switching on the Camera and the clap was given by Mega films producer Mr. Rockline Venkatesh along with Hollywood camera man Ross Clarkson, action director Keecha Kempkadee in presence of our partner Mr XU from China and others dignitaries.

Amarjit Shetty, from NINJOOR PICTURES (w/o Chitah Yajnesh Shetty) Co producer of the film proudly said

 “The thought and passion of having the Banner name “NINJOOR PICTURES” is like a BLESSING, thats why the film has got a remarkable LAUNCH by the hands of big personalities like Royal Families of various countries, Dr. BR Shetty, Rockline Venkatesh and all the TRUE well-wishers.

Certainly, this film will be a grand success and this will put ‘Ninjoor City’ in lime light and a reason to feel proud upon.”

“He is Back” is A Film By Chitah Yajnesh Shetty, Co produced by Amarjit Shetty and Executive producer Mr Willam Bond (Hongkong).

Comments are closed.