ರಾಷ್ಟ್ರೀಯ

ಬೇರೆ ಜಾತಿಯ ಯುವಕನೊಂದಿಗೆ ಓಡಿ ಹೋಗಿದ್ದ ಯುವತಿಗೆ ಮರಕ್ಕೆ ಕಟ್ಟಿ ಥಳಿತ !

Pinterest LinkedIn Tumblr

ನಾವಡ :ಬಿಹಾರ ರಾಜ್ಯದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಪಂಚಾಯಿತಿ ಆದೇಶದಂತೆ ಬೇರೆ ಜಾತಿಯ ಹುಡುಗನ ಜೊತೆಗೆ ಓಡಿ ಹೋಗಿದ್ದ ಯುವತಿಯನ್ನು ಮರಕ್ಕೆ ಕಟ್ಟಿ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ವಿಪರ್ಯಾಸ ವೆಂದರೆ ಪಂಚಾಯಿತಿ ನೀಡಿರುವ ಶಿಕ್ಷೆಗೆ ಯುವತಿಯ ಪೋಷಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜೌಲಿ ಗ್ರಾಮದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೆಪ್ಟೆಂಬರ್ 30 ರಂದು ಈ ಯುವತಿ ಬೇರೆ ಜಾತಿಯ ಹುಡುಗನೊಂದಿಗೆ ಓಡಿಹೋಗಿದ್ದು, ತನ್ನೂರಿನ ಪಕ್ಕದಲ್ಲಿಯೇ ವಾಸಿಸುತ್ತಿದ್ದರು. ಇವರನ್ನು ಇತ್ತೀಚಿಗೆ ಪತ್ತೆ ಹಚ್ಚಿದ ಗ್ರಾಮಸ್ಥರು ಹಾಗೂ ಪೋಷಕರು ರಾಜೌಲಿಗೆ ಕರೆದುಕೊಂಡು ಬಂದಿದೆ.

ನಂತರ ಊರಿನ ಗ್ರಾಮಸ್ಥರೆಲ್ಲಾ ಪಂಚಾಯಿತಿ ನಡೆಸಿ ಆ ಯುವತಿಗೆ ಕಠಿಣ ಶಿಕ್ಷೆಯನ್ನು ಜಾರಿಗೊಳಿಸಿದ್ದಾರೆ. ಆ ಪ್ರಕಾರ ಯುವತಿಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡುತ್ತಿದ್ದರೆ , ಮತ್ತೆ ಕೆಲವರು ಮೂಕಪ್ರೇಕ್ಷಕರಾಗಿ ನಿಂತಿರುವ ದೃಶ್ಯ ವಿಡಿಯೋದಲ್ಲಿ ಕಂಡುಬಂದಿದೆ.

ಸ್ಥಳೀಯ ಮಾಧ್ಯಮವೊಂದು ಹಲ್ಲೆ ಸನ್ನಿವೇಶವನ್ನು ವರದಿ ಮಾಡಿದೆ. ಆದರೆ, ಗ್ರಾಮಸ್ಥರಿಂದ ಆ ಯುವತಿಯಿಂದ ಬಿಡುಗಡೆಗೊಳಿಸಲು ಸಾಧ್ಯವಾಗಿಲ್ಲ. ನಂತರ ಮಾಧ್ಯಮಗಳ ಜೊತೆಗೆ ಆ ಯುವತಿ ಮಾತನಾಡಿದ್ದು, ತನ್ನಿಷ್ಟದಂತೆ ಬೇರೆ ಜಾತಿಯ ಯುವಕನೊಂದಿಗೆ ಓಡಿ ಹೋಗಿದ್ದೆ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ ಯುವತಿ ತಂದೆ , ಪಂಚಾಯಿತಿ ಶಿಕ್ಷೆ ನ್ಯಾಯಯುತವಾಗಿಯೇ ಇದೆ. ನಮ್ಮ ಜಾತಿಯ ಹುಡುಗನ ಜೊತೆ ಬಿಟ್ಟು ಬೇರೆ ಜಾತಿಯ ಹುಡುಗನೊಂದಿಗೆ ವಿವಾಹವಾಗಲು ನಾವು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

Comments are closed.