ಕರಾವಳಿ

ದಿವ್ಯಾ ಅತ್ಯಾಚಾರ ಪ್ರಕರಣ ಖಂಡಿಸಿ ನಾವುಂದದಲ್ಲಿ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ (Video)

Pinterest LinkedIn Tumblr

ಕುಂದಾಪುರ: 8 ವರ್ಷದ ಬಾಲಕಿ ದಿವ್ಯಾ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ನಾವುಂದ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ನಾವುಂದ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಪಿಯು ಕಾಲೇಜು ಹಾಗೂ ನಾವುಂದ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಕಾಲೇಜಿನಿಂದ ಸುಮಾರು ಒಂದೂವರೆ ಕಿ.ಮೀ. ರ್‍ಯಾಲಿ ನಡೆಸಿದ ವಿದ್ಯಾರ್ಥಿಗಳು ನಾವುಂದ ಪಂಚಾಯತ್ ಗೆ ತೆರಳಿ ಪಿಡಿಓ ಗಣೇಶ್ ಎಮ್ ಮೂಲಕ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿ ಅನುಷಾ ಮಾತನಾಡಿ ಅತ್ಯಾಚಾರವೆಸಗುವ ಕಾಮುಕರಿಗೆ ವಿದೇಶಗಳಲ್ಲಿರುವಂತೆ ಉಗ್ರವಾದ ಶಿಕ್ಷೆ ನೀಡುವಂತಹ ಉಗ್ರ ಕಾನೂನುಗಳನ್ನು ರೂಪಿಸಬೇಕು. ಹೀಗಾದ್ದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ದೇಶದಲ್ಲಿ ಅತ್ಯಾಚಾರದಂತಹ ಪ್ರಕರಣಗಳು ನಡೆಯುವುದಿಲ್ಲ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯ ಮುಂದಾಳತ್ವವನ್ನು ಸುಪ್ರೀತ್, ಕಾರ್ತಿಕ್, ಭಾರ್ಗವ್, ಪ್ರಣೀತ್, ಮನೋಜ, ಅನುಪಮಾ,ಸುನಿತಾ, ರಕ್ಷಿತಾ ವಹಿಸಿದ್ದರು.

ಬೈಂದೂರು ಸಿಪಿಐ ಪರಮೇಶ್ವರ್ ಗುನಗಾ, ಪಿಎಸ್ಐ ತಿಮ್ಮೇಶ್ ಬಿ.ಎನ್ ಬಂದೋಬಸ್ತ್ ಏರ್ಪಡಿಸಿದರು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.