ಕರಾವಳಿ

ಊಟದ ಜೊತೆಗೆ ಹಣ್ಣಿನ ಜ್ಯೂಸ್ ಕುಡಿಯುವುದು ಒಳ್ಳೆದೋ., ಕೆಟ್ಟದೋ…?

Pinterest LinkedIn Tumblr

ಇಡೀ ಹಣ್ಣನ್ನು ತಿನ್ನಲು ಇಷ್ಟಪಡದವರು ಜ್ಯೂಸ್ ಮಾಡಿ ಕುಡಿಯುತ್ತಾರೆ. ಆದರೆ ಇದರಿಂದಾಗಿ ಪೋಷಕಾಂಶಗಳು ಕಳೆದು ಹೋಗುತ್ತವೆ ಎಂಬುದು ತಿಳಿದಿರುವ ವಿಷಯ. ಜ್ವರ ಬಂದಾಗ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಮತ್ತು ಇತರ ಪೊಷಕಾಂಶಗಳು ದೊರೆಯುತ್ತವೆ. ತಾಜಾ ಹಣ್ಣಿನ ರಸಗಳು ಆರೋಗ್ಯಕ್ಕೆ ಉತ್ತಮ, ಅದರಲ್ಲೂ ಯಾವುದೇ ಸಂರಕ್ಷಣಗಳನ್ನು ಸೇರಿಸಿದ ಜ್ಯೂಸ್ ಗಳು ಅತ್ಯುತ್ತಮ ಎಂದು ನಮಗೆ ಗೊತ್ತಿದೆ.

ಆದರೆ ನಿಮಗೆ ಗೊತ್ತೇ ಈ ಪೊಷಕಾಂಶಗಳ ಆಗರವನ್ನೇ ಹೊಂದಿರುವ ರಸಗಳನ್ನೂ ಕೂಡ ದಿನದ ಕೆಲವು ವೇಳೆಗಳಲ್ಲಿ ಸೇವಿಸುವುದು ನಿಷಿದ್ಧ ಎನ್ನುತ್ತಾರೆ ಆರೋಗ್ಯ ತಜ್ಞರು. ಅದರಲ್ಲೂ ಊಟದ ಜೊತೆಗೆ ಜ್ಯೂಸ್ ಕುಡಿಯುವುದು ಒಂದು ಅನಾರೋಗ್ಯಕರ ಅಭ್ಯಾಸ, ಇದನ್ನು ತ್ಯಜಿಸಲೇಬೇಕು ಎಂದು ಖಡಾಖಂಡಿತವಾಗಿ ಸಲಹೆ ನೀಡುತ್ತಾರೆ ಆಯುರ್ವೇದ ವೈದ್ಯರು.

‘ಹಣ್ಣಿನ ರಸಗಳು ಮಾತ್ರವಲ್ಲ ಹಣ್ಣನ್ನು ಕೂಡ ಊಟದ ಜೊತೆ ಸೇವಿಸಲೇಬಾರದು. ಆಯುರ್ವೇದದ ಪ್ರಕಾರ ಊಟ ಮತ್ತು ಹಣ್ಣು ಜೊತೆಗೆ ಸೇವಿಸಿದರೆ ಚರ್ಮಕ್ಕೆ ಸಂಬಂಧಿಸಿದ ಖಾಯಿಲೆಗಳು ಮತ್ತು ಇತರ 42 ತರಹದ ಖಾಯಿಲೆಗಳು ಬರುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಇದರಿಂದ ಅಸಿಡಿಟಿ ಮತ್ತು ಸ್ಥೂಲಕಾಯದ ಸಮಸ್ಯೆಗಳೂ ಕಾಡಬಹುದು.

ಇದಕ್ಕೆ ಕಾರಣ ಊಟದಲ್ಲಿರುವ ಉಪ್ಪು ಮತ್ತು ಹಣ್ಣಿನಲ್ಲಿರುವ ಸಕ್ಕರೆಯ ಅಂಶ. ಆಯುರ್ವೇದ ಪ್ರತಿಯೊಂದು ವಸ್ತುವನ್ನೂ ಅದರಲ್ಲಿರುವ ಗುಣ-ವಿಶೇಷತಗಳ ಮುಖಾಂತರ ನೋಡುವುದರಿಂದ ತಿನ್ನುವ ಪ್ರತೀ ಆಹಾರವೂ ನಮ್ಮ ದೇಹ ಪ್ರಕೃತಿಗೆ ಒಗ್ಗುವಂತಿರಬೇಕು. ಇಲ್ಲವಾದರೆ ಇಂಥ ಆಹಾರಗಳು ನಮ್ಮ ದೇಹದಲ್ಲಿ ಕಲ್ಮಶಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಉಪ್ಪು ಮತ್ತು ಸಕ್ಕರೆ ಎರಡೂ ಒಂದಕ್ಕೊಂದು ವಿರುದ್ಧವಾದ ಗುಣ-ವಿಶೇಷತೆಗಳನ್ನು ಹೊಂದಿರುವುದರಿಂದ ಇವುಗಳನ್ನು ಯಾವುದೇ ಕಾರಣಕ್ಕೂ ಜೊತೆಗೆ ಸೇವಿಸಬಾರದು ಎಂದು ಆಯುರ್ವೇದ ಹೇಳುತ್ತದೆ.

ಇನ್ನು ಮಲಗುವ ಮುನ್ನ ಹಣ್ಣು ಮತ್ತು ಹಣ್ಣಿನ ರಸಗಳನ್ನು ಸೇವಿಸುವ ಅಭ್ಯಾಸವನ್ನು ತ್ಯಜಿಸಬೇಕು. ಯಾಕೆಂದರೆ ಮಲಗುವಾಗ ದೇಹ ವಿಶ್ರಾಂತಿ ತೆಗೆದುಕೊಳ್ಳುತ್ತದೆ ಮತ್ತು ದೇಹದ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತಿರುತ್ತದೆ. ನೀವು ಹಣ್ಣು ಅಥವಾ ಜ್ಯೂಸ್ ಕುಡಿದು ತಕ್ಷಣ ಮಲಗಿದರೆ ಹಣ್ಣಿನಲ್ಲಿರುವ ಸಕ್ಕರೆ ಶಕ್ತಿಯಾಗಿ ಪರಿವರ್ತನೆಗೊಂಡು ಅದಕ್ಕೆ ದೇಹದ ತುಂಬಾ ಕಾರ್ಯ ನಿರ್ವಹಿಸಲು ಅಸಾಧ್ಯವಾಗುವುದರಿಂದ ಅದು ಕೇವಲ ಸಕ್ಕರೆಯಾಗಿ ದೇಹದಲ್ಲಿ ಉಳಿದುಬಿಡುತ್ತದೆ.

ಇದರ ಅರ್ಥ ನೀವು ಹಣ್ಣು, ಜ್ಯೂಸ್ ಗಳನ್ನು ಸೇವಿಸಬಾರದೆಂದಲ್ಲ, ಯಾಕೆಂದರೆ ಅದರಲ್ಲಿ ವಿಟಮಿನ್, ಖನಿಜಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಗಳ ಆಗರವೇ ಇದೆ. ಆದರೆ ಯಾವ ಸಮಯದಲ್ಲಿ ಸೇವಿಸುತ್ತೇವೆ ಎನ್ನುವುದು ಇಲ್ಲಿ ಬಹುಮುಖ್ಯ.

Comments are closed.