ಗಲ್ಫ್

ಅನಂತ್‌ ನಾಗ್‌ – ರಾಧಿಕಾ ಚೇತನ್‌ ಅಭಿನಯದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ನಾಳೆ ಯುಎಇ-ಒಮಾನಿನಲ್ಲಿ ತೆರೆಗೆ

Pinterest LinkedIn Tumblr

ದುಬೈ: ವಿಭಿನ್ನ ಕಥೆಯ ಮೂಲಕ ಕನ್ನಡ ಸಿನಿ ರಸಿಕರ ಮನಗೆದ್ದಿರುವ ನಟ ಅನಂತ್‌ನಾಗ್‌ ಮತ್ತು ರಾಧಿಕಾ ಚೇತನ್‌ ಪ್ರಮುಖ ಭೂಮಿಕೆಯಲ್ಲಿರುವ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ಜೂನ್ 28 ರಂದು ದುಬೈ, ಶಾರ್ಜಾ, ಅಬುದಾಭಿ ಸೇರಿದಂತೆ ಯುಎಇ ಮತ್ತು ಒಮಾನ್’ನ ಮಸ್ಕತ್ತಿನಲ್ಲಿ ಬಿಡುಗಡೆಯಾಗುತ್ತಿದೆ.

ಸಿನೆಮಾ ಬಿಡುಗಡೆಯಾಗುತ್ತಿರುವ ಸಿನೆಮಾ ಮಂದಿರಗಳು….

ದುಬೈಯ IBN ಬಟ್ಟುತಾ ಮಾಲ್ ಮತ್ತು ಡ್ರ್ಯಾಗನ್ ಮಾರ್ಟ್’ನ ನೋವಾ ಸಿನೆಮಾದಲ್ಲಿ, ದೇರಾ ಸಿಟಿಸೆಂಟರ್ ಮತ್ತು ಶಿಂದಘ ವಾಕ್ಸ್ ಸಿನೆಮಾದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ಪ್ರದರ್ಶನ ಕಾಣಲಿದೆ.

ಶಾರ್ಜಾದ ಸ್ಟಾರ್ ಸಿನೆಪ್ಲೆಸ್, ಮೆಗಾ ಮಾಲ್’ನ ನೋವಾ ಸಿನೆಮಾ, ಸಿಟಿಸೆಂಟರಿನ ವಾಕ್ಸ್ ಸಿನೆಮಾದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ಪ್ರದರ್ಶನ ಕಾಣಲಿದೆ.

ಅಬುಧಾಬಿಯ ಮುಸ್ಸಫಾಹ್ ಗ್ರಾಂಡ್ ಸಫೀರ್ ಸಿನೆಮಾಸ್, ಅಲ್ ವ್ಹಾದ ಸ್ಟಾರ್ ಆಸ್ಕರ್ ಮತ್ತು ಸ್ಟಾರ್ ನ್ಯಾಷನಲ್ ಸಿನೆಮಾದಲ್ಲಿ ಸಂಜೆಯ ಪ್ರದರ್ಶನ ಕಾಣಲಿದೆ.

ಒಮಾನ್ ಮಸ್ಕತ್ತಿನ CBD ರುವಿಯ ಸ್ಟಾರ್ ಸಿನೆಮಾಸಿನಲ್ಲಿ ಸಂಜೆಯ ಪ್ರದರ್ಶನ ಕಾಣಲಿದೆ.

ಎರಡು ತಲೆಮಾರಿನ ಮನಸ್ಸುಗಳ ತಳಮಳ, ಲಿವ್ ಇನ್‌ ರಿಲೇಷನ್‌ಶಿಪ್‌ ಸಾಧಕ-ಬಾಧಕಗಳ ಮೇಲೆ ಬೆಳಕು ಚೆಲ್ಲುವ ಈ ಸಿನೆಮಾದ ಕಥೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಯಾರು ಮಾಡದಿರುವಂಥದ್ದು. .’ ಅನಂತನಾಗ್‌ ಅವರನ್ನು ಮನಸ್ಸಿನಲ್ಲಿಟ್ಟುಕೊಂಡೇ ನಿರ್ದೇಶಕ ನರೇಂದ್ರ ಬಾಬು ಚಿತ್ರಕತೆ ಹೆಣೆದಂತಿದೆ. ಇದು ಅನಂತನಾಗ್‌ ಅವರ ಸಿನಿಮಾ ಬದುಕಿನ ಅಪರೂಪದ ಪಾತ್ರವೂ ಆಗಿದೆ.

ಈ ಸಿನೆಮಾವನ್ನು ಕಲರ್ಸ್‌ ಆಫ್ ಆನೇಕಲ್‌ ಹೆಸರಿನಲ್ಲಿ ಸುದರ್ಶನ್‌, ರಾಮಮೂರ್ತಿ ಹಾಗು ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ಗಾಯಕರು ಆಗಿರುವ ಹರೀಶ್ ಶೇರಿಗಾರ್ ಮತ್ತು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್‍ನ್ಯಾಷನಲ್ ಬ್ಯಾನರ್‍ನಡಿಯಲ್ಲಿ ನಿರ್ಮಿಸಲಾಗಿದೆ.

ಸಿನಿಮಾದ ಕಥೆಯೇ ವಿಭಿನ್ನವಾಗಿದೆ. ಜೀವನದಲ್ಲಿ ದಾಂಪತ್ಯವೇ ಮುಖ್ಯ ಎಂದುಕೊಂಡಿರುವ ಒಬ್ಬನಿಗೆ, ಲೀವಿಂಗ್ ರಿಲೇಶನ್ ಶಿಪ್ನಲ್ಲಿರುವ ಜೋಡಿಯ ಪರಿಚವಾಗುತ್ತದೆ. ಇವರಿಬ್ಬರದ್ದೂ ವಿಭಿನ್ನ ಬದುಕು. ಅವರ ನಡುವಿನ ಕಥೆಯೇ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಸಿನಿಮಾ.

ಸಿನೆಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ, ವಿಮರ್ಶೆ ವ್ಯಕ್ತವಾಗಿದ್ದು, ಇಂಥ ಕತೆ ಈ ವರಗೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಬಂದಿಲ್ಲ. ಅನಂತ್‌ನಾಗ್‌ ಮತ್ತು ರಾಧಿಕಾ ಚೇತನ್‌ ಅವರ ಅಭಿನಯಕ್ಕೆ ಪ್ರೇಕ್ಷಕರು ಈಗಾಗಲೇ ಫಿದಾ ಆಗಿದ್ದಾರೆ.

ನಿರ್ದೇಶಕ ನರೇಂದ್ರ ಬಾಬು ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ಸಾಹಿತ್ಯ ಇರುವ ಈ ಚಿತ್ರಕ್ಕೆ ಪಿ.ಕೆ ಎಚ್. ದಾಸ್‌’ರ ಛಾಯಾಗ್ರಹಣ ಇನ್ನಷ್ಟು ಮೆರುಗು ತಂದಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಿನ್ನಲೆ ಇರುವ ರಾಮಚಂದ್ರ ಹಡಪದ ಸಂಗೀತ ಒದಗಿಸಿದ್ದಾರೆ.

ನೋವಾ ಸಿನೆಮಾ, ವಾಕ್ಸ್ ಸಿನೆಮಾ, ಅಬುಧಾಬಿಯ ಸ್ಟಾರ್ ಸಿನೆಮಾ, ಆಸ್ಕರ್ ಸಿನೆಮಾ ಹಾಗು ಒಮಾನಿನ ಸ್ಟಾರ್ ಸಿನೆಮಾ ಮಂದಿರಗಳಲ್ಲಿಈಗಾಗಲೇ ಆನ್ ಲೈನ್ ಟಿಕೆಟ್ ಬುಕಿಂಗ್ ಆರಂಭವಾಗಿದೆ.

https://www.novocinemas.com/uae/movies/hottegaagi-genu-battegagi/

https://uae.voxcinemas.com/movies/hottegaagi-genu-battegagi-kanada#showtimes

https://www.starcinemas.ae/Movie_Info.aspx?MovieId=NjM0Ng%3d%3d-LDt4AD5LrEI%3d&Type=Q1M%3d-RHX8mGb1e9A%3d

https://oscarcinema.ae/movies/hottegagi-genu-battegagi/902

Comments are closed.