ಮನೋರಂಜನೆ

ಚಾಲೆಂಜ್ ಒಪ್ಪಿಕೊಂಡ ಪುನೀತ್ ರಾಜ್ ಕುಮಾರ್ ಕೊಟ್ಟ ಸಕತ್ ಉತ್ತರ ವೈರಲ್ !

Pinterest LinkedIn Tumblr

ಬೆಂಗಳೂರು: ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಮೇ 22ರಂದು ನಿಡಿದ್ದ #HumFitToIndiaFit ಚಾಲೆಂಜ್ ದೇಶಾದ್ಯಂತದ ಸೆಲೆಬ್ರೆಟಿಗಳನ್ನು ಆಕರ್ಷಿಸುತ್ತಿದ್ದು ಇದೀಗ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ಈ ಚಾಲೆಂಜ್ ನ್ನು ಒಪ್ಪಿಕೊಂಡಿದ್ದಾರೆ.

https://www.facebook.com/PuneethRajkumar/videos/2083048355058347/?t=24

ಯಾರೇ ಆಗಲಿ ಫಿಟ್ ಹಾಗೂ ಆರೋಗ್ಯವಾಗಿರುವುದು ಮುಖ್ಯ ಎನ್ನುವ ಉದ್ದೇಶದೊಂದಿಗೆ ಪ್ರಾರಂಭವಾದ ಈ ಅಭಿಯಾನದಲ್ಲಿ ಇದಾಗಲೇ ಕಿಚ್ಚ ಸುದೀಪ್, ಯಶ್ ಸೇರಿ ಹಲವರು ಭಾಗವಹಿಸಿದ್ದಾರೆ ಇತ್ತೀಚೆಗೆ ಬಿಜೆಪಿಯ ಶಾಸಕರಾದ ಡಾ. ಅಶ್ವತ್ಥ್ ನಾರಾಯಣ ಹಾಗೂ ಹೇಮಂತ್ ಮುದ್ದಪ್ಪ ಪುನೀತ್ ರಾಜ್ ಕುಮಾರ್ ಅವರಿಗೆ ಚಾಲೆಂಜ್ ಮಾಡಿದ್ದರು.

ಈ ಚಾಲೆಂಜ್ ಸ್ವೀಕರಿಸಿದ ಪವರ್ ಸ್ಟಾರ್ ಪುನೀತ್ ತಮ್ಮ ಫೇಸ್‍ಬುಕ್‌ನಲ್ಲಿ ಬರೆದುಕೊಂಡಿದ್ದಾರೆ “ಡಾ. ಅಶ್ವತ್ಥ್ ನಾರಾಯಣ ಹಾಗೂ ಹೇಮಂತ್ ಮುದ್ದಪ್ಪ ಅವರು ನೀಡಿರುವ ಚಾಲೆಂಜ್ ನ್ನು ಸ್ವೀಕರಿಸಿದ್ದೇನೆ. ಆರೋಗ್ಯವಾಗಿ ಮತ್ತು ಫಿಟ್ ಆಗಿರುವುದು ಅತ್ಯಂತ ಮುಖ್ಯ. ನಾನು ಈ ಚಾಲೆಂಜ್ ನ್ನು ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ದಾನಿಶ್ ಸೇಠ್ ಮತ್ತು ಶ್ರೀಮುರಳಿ ಅವರಿಗೆ ನೀಡುತ್ತಿದ್ದೇನೆ”

ಪುನೀತ್ ರಾಜ್ ಕುಮಾರ್ ಸಧ್ಯ ’ನಟಸಾರ್ವಭೌಮ’ ಚಿತ್ರದ ಚಿತ್ರೀಕರಣದಲ್ಲಿದ್ದು ಅದೇ ಸೆಟ್ ನಲ್ಲಿ ತಾವು ಚಾಲೆಂಜ್ ಪೂರೈಸಿರುವ ವೀಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. 19 ಗಂಟೆಗಳಲ್ಲಿ 8 ಸಾವಿರಕ್ಕೆ ಹೆಚ್ಚಿನ ಜನ ಇದನ್ನು ವೀಕ್ಷಿಸಿದ್ದು 1700ಕ್ಕೂ ಹೆಚ್ಚಿನ ಜನ ಷೇರ್ ಮಾಡಿಕೊಂಡಿದ್ದಾರೆ.

ಅಪ್ಪು ಅಭಿಮಾನಿಗಳು ನಟನ ಫಿಟ್ ನೆಸ್ ಕಂಡು ಖುಷಿಯಾಗಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ದಾನಿಶ್ ಸೇಠ್ ಮತ್ತು ಶ್ರೀಮುರಳಿ ಅವರ ವೀಡಿಯೋವನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ.

Comments are closed.