ರಾಷ್ಟ್ರೀಯ

ಅಶ್ಲೀಲ ಫೋಟೋಗಳನ್ನು ಕಳುಹಿಸಿ ಪತಿಯ ಕೆಲಸ ಹೋಗುವಂತೆ ಮಾಡಿದ ಪತಿ ! ಏನಿದು ಘಟನೆ…ಮುಂದೆ ಓದಿ…

Pinterest LinkedIn Tumblr

ಗುರ್‍ಗಾಂವ್: ಪತ್ನಿಯೊಬ್ಬಳು ತನ್ನ ಪತಿಯ ಬಾಸ್‍ಗೆ ಹಾಗೂ ಆತನ ಸಹದ್ಯೋಗಿಗಳಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸಿ ಆತ ಕೆಲಸ ಕಳೆದುಕೊಳ್ಳುವಂತೆ ಮಾಡಿದ ಘಟನೆ ಗುರ್‍ಗಾಂವ್‍ನಲ್ಲಿ ನಡೆದಿದೆ.

ಅಭಿಷೇಕ್ ಕೆಲಸ ಕಳೆದುಕೊಂಡ ಪತಿ. ಅಭಿಷೇಕ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿಯ ಈ ನೀಚ ಕೆಲಸದಿಂದ ನಾನು ನನ್ನ ಕೆಲಸವನ್ನು ಕಳೆದುಕೊಂಡಿದ್ದೇನೆ ಎಂದು ಸ್ವತಃ ಅಭಿಷೇಕ್ ತನ್ನ ಪತ್ನಿಯ ಮೇಲೆ ಆರೋಪಿಸಿದ್ದಾರೆ.

ಅಭಿಷೇಕ್ ಹಾಗೂ ಆತನ ಪತ್ನಿಯ ವಿಚ್ಛೇದನ ಕೇಸ್ ಕೋರ್ಟ್ ನಲ್ಲಿ ನಡೆಯುತ್ತಿತ್ತು. ಹಾಗಾಗಿ ಪತ್ನಿ ತನ್ನ ಪತಿಯ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್ ಓಪನ್ ಮಾಡಿದ್ದಾಳೆ. ನಂತರ ಆ ಖಾತೆಯಿಂದ ತನ್ನ ಪತಿಯ ಬಾಸ್ ಹಾಗೂ ಆತನ ಸಹದ್ಯೋಗಿಗಳಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸಿದ್ದಾಳೆ.

ಅಭಿಷೇಕ್ 2014ರಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, 2011ರಲ್ಲಿ ಮದುವೆ ನಡೆದಿತ್ತು. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ಬೇರೆ ಬೇರೆ ಆಗಿದ್ದರು. ಈಗ ಇವರಿಬ್ಬರ ವಿಚ್ಛೇದನ ಕೇಸ್ ಕೋರ್ಟ್‍ನಲ್ಲಿ ನಡೆಯುತ್ತಿದೆ.

2016ರಲ್ಲಿ ಅಭಿಷೇಕ್ ಪತ್ನಿ ತನ್ನ ಪತಿಯ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯನ್ನು ಓಪನ್ ಮಾಡಿದ್ದಳು. ಆ ಖಾತೆಯಲ್ಲಿ ತನ್ನ ಪತಿಯ ಫೋಟೋ ಹಾಕಿ, ಆತನ ಬಾಸ್, ಸಹದ್ಯೋಗಿ ಹಾಗೂ ಹಿರಿಯ ಉದ್ಯೋಗಿಗಳಿಗೆ ಅಶ್ಲೀಲ ಫೋಟೋ ಹಾಗೂ ಮೆಸೇಜ್ ಮಾಡುತ್ತಿದ್ದಳು. ಅಲ್ಲದೇ ಮೆಸೆಂಜರ್ ನಲ್ಲಿ ಕರೆ ಮಾಡಿ ಹಲವು ಕಥೆಗಳನ್ನು ಹೇಳುತ್ತಿದ್ದಳು ಎನ್ನಲಾಗಿದೆ.

ನನ್ನ ಪತ್ನಿಯಿಂದಾಗಿ ನಾನು ನನ್ನ ಕೆಲಸವನ್ನು ಕಳೆದುಕೊಂಡೆ. ನಾನು ಈ ಬಗ್ಗೆ ಪೊಲೀಸರ ಹತ್ತಿರ ಆಕೆಯ ವಿರುದ್ಧ ದೂರನ್ನು ದಾಖಲಿಸಿದ್ದೇನೆ ಎಂದು ಪತಿ ಅಭಿಷೇಕ್ ತಿಳಿಸಿದ್ದಾನೆ. ಪ್ರಾಥಮಿಕ ತನಿಖೆಯಿಂದ ಅಭಿಷೇಕ್ ಪತ್ನಿ ಆರೋಪಿ ಎಂದು ತಿಳಿದು ಬಂದಿದ್ದು, ಆಕೆಯ ವಿರುದ್ಧ ಐಟಿ ಕಾಯ್ದೆ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ಸೆಕ್ಟರ್ 10ರ ಎಸ್‍ಒಎಚ್ ಚಂದ್ರಪ್ರಕಾಶ್ ತಿಳಿಸಿದ್ದಾರೆ.

Comments are closed.